ಯುವ ಪ್ರತಿಭೆಗಳ “ಓಂಕಾಳಿ” ಚಿತ್ರಕ್ಕೆ ಚಾಲನೆ
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಯುವ ಪಡೆಗಳ ಬಳಗ ಸೇರಿಕೊಂಡು “ಓಂಕಾಳಿ” ಎನ್ನುತ್ತಾ ಚಿತ್ರದ ಮಹೂರ್ತವನ್ನು ಶ್ರೀ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಿಕೊಂಡಿದೆ. ಓಂಕಾಳಿ ಅಂದಾಕ್ಷಣ ನೆನಪಿಗೆ ಬರೋದು ಇದೊಂದು ಭಕ್ತಿ ಪ್ರಧಾನ ದೇವಿಯ ಚಿತ್ರ ಎಂದು ಆದರೆ ಈ ತಂಡ ಪಕ್ಕ ಮಾಸ್ ರೌಡಿಸಂ ಸಬ್ಜೆಕ್ಟ್ ಈ ಟೈಟಲ್ ಬಳಸಿಕೊಂಡು ಚಿತ್ರೀಕರಣಕ್ಕೆ ಮುಂದಾಗಿದ್ದು, ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಕರೆದಿತ್ತು.
ಈ ಚಿತ್ರದ ಕುರಿತು ನಿರ್ದೇಶಕ ಸಿಂಹ ಮಾತನಾಡುತ್ತಾ ನಾನು ಮುಂಬೈನಲ್ಲಿ ಸೀರಿಯಲ್ ನಲ್ಲಿ ಕೆಲಸ ಮಾಡಿದ್ದೇನೆ. ಹಾಗೆಯೇ ನಾನೇ ‘ನೋ ಪಾರ್ಕಿಂಗ್’ ಎಂಬ ಶಾರ್ಟ್ ಫಿಲಂ ಕೂಡ ಮಾಡಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರವನ್ನು ಮಾಡಲು ಮುಂದಾಗಿದ್ದೇನೆ. ನಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಈಗ ನೆರವೇರುತ್ತಿದೆ.
ಇದೊಂದು ಸಂಪೂರ್ಣ ರೌಡಿಸಂ ಸಬ್ಜೆಕ್ಟ್ ಆಗಿದ್ದು , ಆಕ್ಷನ್, ಸೆಂಟಿಮೆಂಟ್, ಎಮೋಷನ್ ಎಲ್ಲವೂ ಈ ಚಿತ್ರದಲ್ಲಿ ಒಳಗೊಂಡಿದೆ. ಬಹುತೇಕ ಬೆಂಗಳೂರಿನಲ್ಲಿ ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಹೊಸಬರ ಜೊತೆ ಹಳೆಯ ಅನುಭವಿ ಕಲಾವಿದರ ದಂಡೆ ಅಭಿನಯಿಸುತ್ತಿದ್ದಾರೆ ಎಂದು ಹೇಳಿದರು.
ಇನ್ನು ಈ ಚಿತ್ರದ ನಿರ್ಮಾಪಕ ಪ್ರತಾಪ್ ಸಿಂಹ ಮಾತನಾಡುತ್ತಾ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್ , ನನ್ನ ತಂದೆಯ ಉತ್ಸಹವನ್ನ ನೋಡಿ ಅವರ ನಿರ್ದೇಶನದ ಚಿತ್ರವನ್ನು ನಾನು ನಿರ್ಮಿಸುತ್ತಿದ್ದೇನೆ. ಸುಮಾರು ಎರಡು ವರ್ಷಗಳ ಸತತ ಪ್ರಯತ್ನದಿಂದ ನಮ್ಮ ತಂದೆ ಹೇಳಿದ ಕಥೆ ಇಷ್ಟವಾಗಿ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನದಲ್ಲೂ ಕೂಡ ಸಹಕಾರಿಯಾಗಿರುತ್ತೇನೆ.
ಸಬ್ಜೆಕ್ಟ್ ಇಂಟೆರೆಸ್ಟಿಂಗ್ ಆಗಿದೆ. ಗ್ರಾಫಿಕ್ಸ್ ಕೆಲಸವು ಸ್ವಲ್ಪ ಇದೆ. ನಾವು ಒಂದು ಮಾಸ್ ಸಬ್ಜೆಕ್ಟ್ ಜೊತೆ ಮೆಸೇಜ್ ಕೂಡ ಈ ಚಿತ್ರದ ಮೂಲಕ ನೀಡುತ್ತೇವೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ವಿರಲಿ ಎಂದು ಕೇಳಿಕೊಂಡರು.
ಇನ್ನು ನಾಯಕಿಯಾಗಿ ಅಭಿನಯಿಸಿರುವ ಪ್ರವಾಲಿಕ ಮಾತನಾಡುತ್ತಾ ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಹುಡುಗಿಯ ಪಾತ್ರ ಮಾಡಿದ್ದೀನಿ. ಹೆಚ್ಚು ಕಥೆಯನ್ನು ರಿವಿಲ್ ಮಾಡುವುದಕ್ಕೆ ಆಗಲ್ಲ. ಇದು ನನ್ನ ಮೊದಲ ಸಿನಿಮಾ. ಇದಕ್ಕೂ ಮುನ್ನ ಅಪ್ಪನೇ ನಿರ್ದೇಶನ ಮಾಡಿರುವ ಶಾರ್ಟ್ ಮೂವಿಗಳಲ್ಲಿ ಅಭಿನಯಿಸಿದೆ. ಈಗ ಅವರ ನಿರ್ದೇಶನದಲ್ಲಿ ನಾಯಕಿಯಾಗಿ ಪರಿಚಯ ಆಗುತ್ತಿದ್ದೇನೆ. ನನ್ನದು ಒಂದು ಸ್ಲಂ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದರು.
ಇನ್ನು ನಾಯಕನಾಗಿ ಅಭಿನಯಿಸುತ್ತಿರುವ ವಿಜಯ್ ರಾಜ್ ಮಾತನಾಡಿ, ನನಗೆ ಇದು ಮೊದಲ ಕನ್ನಡ ಸಿನಿಮಾ. ತೆಲುಗಿನಲ್ಲಿ ಮಾರ್ನಾಲ್ಕು ಸಿನಿಮಾ ಮಾಡಿದ್ದೀನಿ. ನನ್ನದು ಆಟೋ ಚಾಲಕನ ಪಾತ್ರ , ನಾನು ಈ ಚಿತ್ರದಲ್ಲಿ ಶಿವಣ್ಣ ಅವರ ಅಭಿಮಾನಿಯಾಗಿರುತ್ತೇನೆ. ನನ್ನದು ಎರಡು ಡೈಮೆನ್ಶನ್ ಇರುವ ಪಾತ್ರ. ಬಹಳಷ್ಟು ಆಕ್ಷನ್ ಸೀನ್ಸ್ ಗಳು ಈ ಚಿತ್ರದಲ್ಲಿದೆ. ಇದಕ್ಕಾಗಿ ನಾನು ಕೂಡ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ , ಈ ಚಿತ್ರಕ್ಕೆ ಶಿವಣ್ಣನ ಓಂ ಚಿತ್ರ ಸ್ಫೂರ್ತಿ ಎಂದರು.
ಬೆಂದಕಾಲ್ ಫಿಲ್ಮ್ಸ್ ಬ್ಯಾನರ್ ನಡಿ ಪ್ರತಾಪ್ ಸಿಂಹ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರವಿ ರಾಮದುರ್ಗ ಹಾಗೂ ಬಾಲ ನಾಗರಾಜ್ ಛಾಯಾಗ್ರಹಣ ಮಾಡಿದ್ದು , ಕೆವಿನ್ ಮ್ಯೂಸಿಕ್ ನೀಡಿದ್ದಾರೆ. ಹಾಗೆಯೇ ಚಿನ್ನಯ ಏಳು ಫೈಟ್ ಗಳಿಗೆ ಸಾಹಸ ಸಂಯೋಜನೆ ಮಾಡಲಿದ್ದಾರೆ. ಇದೊಂದು ಅಪ್ಪ-ಮಕ್ಕಳ ಕಾಂಬಿನೇಷನ್ ಚಿತ್ರವಾಗಿದ್ದು , ಬಹಳಷ್ಟು ಪೂರ್ವ ತಯಾರಿಯೊಂದಿಗೆ ಚಿತ್ರೀಕರಣಕ್ಕೆ ಹೊರಡಲು ತಂಡ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ.