ಕೊಲೆಯ ರಹಸ್ಯದ ಸುತ್ತ ನೈಟ್‌ಕರ್ಫ್ಯೂ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ನೈಟ್ ಕರ್ಫ್ಯೂ
ನಿರ್ದೇಶಕ : ರವೀಂದ್ರ ವೆಂಶಿ
ನಿರ್ಮಾಪಕ : ಬಿ.ಎಸ್. ಚಂದ್ರಶೇಖರ್
ಸಂಗೀತ : ಎಂ ಎಸ್ ಮಾರುತಿ
ಛಾಯಾಗ್ರಾಹಕ : ಪ್ರಮೋದ್
ತಾರಾಗಣ : ಮಾಲಾಶ್ರೀ, ರಂಜನಿ ರಾಘವನ್, ಪ್ರಮೋದ್ ಶೆಟ್ಟಿ , ರಂಗಾಯಣರಘು, ಸಾಧುಕೋಕಿಲ, ವರ್ಧನ್, ಮಂಜು ಪಾವಗಡ, ಬಾಲ ರಾಜವಾಡಿ , ಅಶ್ವಿನ್ ಹಾಸನ್, ಸದಾನಂದ ಹಾಗೂ ಮುಂತಾದವರು…
ಕೋವಿಡ್ ಬಂದ ಸಂದರ್ಭ ಇಡೀ ಮನುಕುಲವನ್ನೇ ಬೆಚ್ಚಿಬಿಳಿಸಿತ್ತು. ಬದುಕು ನಡೆಸುವುದೇ ಕಷ್ಟಕರವಾದ ಸಂದರ್ಭದಲ್ಲಿ ಜನರು ಹೊರಬರದಂತೆ ಬದುಕುವುದೇ ಒಂದು ದೊಡ್ಡ ಸಾಹಸವಾಗಿತ್ತು. ಆ ಸಮಯದಲ್ಲಿ ಎದುರಾದ ಸಾವು , ನೋವು ಜನರ ರಕ್ಷಣೆಗಾಗಿ ಡಾಕ್ಟರ್ಸ್ ಗಳ ಪರದಾಟ , ಪೊಲೀಸ್ ರ ಕಾರ್ಯವೈಕರಿ ಎಲ್ಲವೂ ಹೇಳತಿರದಂತಿತ್ತು. ಇದರ ನಡುವೆ ಅದೆಷ್ಟೋ ಕೊಲೆ , ಸುಲಿಗೆಗಳು ನಡೆದು ಹೋಗಿದೆ. ಅಂತದ್ದೇ ಒಂದು ಕೊಲೆಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕುತೂಹಲಕಾರಿಯಾಗಿ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಮಾಡುವ ಸಂಚಿನ ಸುತ್ತ ಬೆಸೆದಿರುವ ಕದಾಹಂದರವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ನೈಟ್ ಕರ್ಫ್ಯೂ”.
ಸೇನೆಯಲ್ಲಿ ಸೇವೆ ಮಾಡಿದಂತ ಡಾಕ್ಟರ್ ದುರ್ಗಾ (ಮಾಲಾಶ್ರೀ) ಹಾಸ್ಪಿಟಲ್ ನಲ್ಲಿ ಕೋವಿಡ್ ಪೇಷಂಟ್ ಗಳನ್ನ ಕಾಪಾಡಲು ಹಗಲಿರಲು ಶ್ರಮಿಸುತ್ತಿರುತ್ತಾರೆ. ಇವರೊಟ್ಟಿಗೆ ಡಾಕ್ಟರ್ ವೇದ (ರಂಜಿನಿ ರಾಘವನ್) ಕೂಡ ಸಾತ್ ನೀಡುತ್ತಾರೆ. ಇದೇ ನೈಟ್ ಕರ್ಫ್ಯೂ ಸಮಯದಲ್ಲಿ ಆಂಬುಲೆನ್ಸ್ ಒಂದರಲ್ಲಿ ಹುಡುಗಿ ಒಬ್ಬಳನ್ನ ಆಸ್ಪತ್ರೆಗೆ ಕರ್ತರ್ತಾರೆ. ಆಕೆಯನ್ನು ಕಾಪಾಡಿ ಬೆಳಗ್ಗೆಯಿಂದ ಆಸ್ಪತ್ರೆಗಳಿಗೆ ಸುತ್ತಾಡಿದ್ದೇವೆ. ಕೋವಿಡ್ ಬಂದಿರಬೇಕು ನೋಡಿ ಎನ್ನುತ್ತಿರುವಾಗಲೇ ಡಾಕ್ಟರ್ ವೇದ ಜೊತೆ ಮಾತಿನ ಜಟಾಪಟಿ ನಡೆಯುತ್ತದೆ. ಆದರೂ ಮಾನವೀಯತೆಯ ದೃಷ್ಟಿಯಿಂದ ಡಾಕ್ಟರ್ ಹುಡುಗಿಯನ್ನ ರಕ್ಷಿಸಲು ಮುಂದಾಗುವಷ್ಟರಲ್ಲಿ ಆಕೆ ಸತ್ತಿರುವುದು ತಿಳಿಯುತ್ತದೆ.
ಡಾಕ್ಟರ್ ಗಳೇ ಕೊಂದಿದ್ದೀರಾ ಎಂದು ಕೂಗಾಡುವ ಆಕೆ ಆಕೆಯನ್ನ ಕರೆ ರಘುರಾಮ್ (ಪ್ರಮೋದ್ ಶೆಟ್ಟಿ) ಹಾಗೂ ಸಂಗಡಿಗರು. ಯಾವುದೇ ಟ್ರೀಟ್ಮೆಂಟ್ ಮಾಡಿದ ಡಾಕ್ಟರ್ ಬಾಡಿಯನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆದರೆ ತಂದ ವ್ಯಕ್ತಿಗಳು ಕೋವಿಡ್ ನಿಂದ ಸತ್ತಳೆಂದು ರಿಪೋರ್ಟ್ ಕೊಡಿ ಎಂದು ಕೇಳುತ್ತಾರೆ. ಮತ್ತೊಂದಡೆ ಇಬ್ಬರು ಕುಡುಕರು (ಸಾಧು ಕೋಕಿಲ ಹಾಗೂ ಪಾವಗಡ ಮಂಜು) ಎಣ್ಣೆಯಿಲ್ಲದೆ ಬಾರ ಗೆ ಕನ್ನ ಹಾಕಿ ಎಣ್ಣೆ ಕದಿಯುವ ಸಮಯದಲ್ಲಿ ವ್ಯಕ್ತಿ ಒಬ್ಬನನ್ನ ನೋಡಿ ಸತ್ತಂತೆ ಇರೋದನ್ನ ಕಂಡು ಓಡಿ ಹೋಗುವಾಗ ಮಾರ್ಗ ಮಧ್ಯೆ ಪೊಲೀಸ್ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ.
ಅದರ ತನಿಖೆಯ ಹಾದಿಯಲ್ಲಿ ಸಾಗುವ ಪೊಲೀಸ್ ಇನ್ಸ್ಪೆಕ್ಟರ್ (ರಂಗಾಯಣ ರಘು) ಹಾಗೂ ತಂಡ. ಇನ್ನು ಹಾಸ್ಪಿಟಲ್ ನ ಡಾಕ್ಟರ್ ದುರ್ಗಾ ಪೋಸ್ಟ್ ಮಾರ್ಟಂ ಮಾಡುವ ಸಂದರ್ಭದಲ್ಲಿ ಹುಡುಗಿಯ ದೇಹದ ಮೇಲಿರುವ ಗುರುತು, ಗಾಯವನ್ನ ಗಮನಿಸಿ ಕೊಲೆ ಮಾಡಿ ತಂದಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಈ ವಿಚಾರ ತಿಳಿಯುವ ರಘುರಾಮ್ ಗ್ಯಾಂಗ್ ಹಾಸ್ಪಿಟಲ್ ಡಾಕ್ಟರ್ಸ್ನ ಬೆದರಿಸುವುದರ ಜೊತೆಗೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ಡಾಕ್ಟರ್ ದುರ್ಗಾ ಫೈಟ್ ಮಾಡಿ ಸತ್ಯದ ವಿಚಾರವನ್ನು ಹೊರಹಾಕುವ ಹಂತಕ್ಕೆ ತಂದು ನಿಲ್ಲಿಸುವಷ್ಟರಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಕಥೆ ತೆರೆದುಕೊಳ್ಳುತ್ತದೆ.
ಕೊಲೆಗೆ ಕಾರಣವೇನು…
ಕೊಂದವರು ಯಾರು…
ಹಾಸ್ಪಿಟಲ್ ಗೆ ಬರಲು ಕಾರಣ..
ಕುಡುಕರ ಗತಿ ಎನು…
ಸತ್ತವಳು ಯಾರು?
ನೈಟ್ ಕರ್ಫ್ಯೂ ನಲ್ಲಿ ಏನೇನಿದೆ ಅನ್ನೋದಕ್ಕೆ ನೀವು ಚಿತ್ರಮಂದಿರಕ್ಕೆ ಬರಬೇಕು.
ಇನ್ನು ಈ ಚಿತ್ರದ ನಿರ್ದೇಶಕ ರವೀಂದ್ರವೆಂಶಿ ಕೋವಿಡ್ ಸಂದರ್ಭದಲ್ಲಿ ನಡೆದಂತಹ ಸತ್ಯ ಘಟನೆಗಳನ್ನು ತೆಗೆದುಕೊಂಡು ಅದನ್ನು ದೃಶ್ಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಮಾಡಿದ ತಪ್ಪನ್ನು ಮರೆಮಾಚಲು ಮಾಡುವ ಸಂಚು,ಅದನ್ನು ಭೇದಿಸುವ ವ್ಯಕ್ತಿಗಳ ನಡುವೆ ಎದುರಾಗುವ ಕಾದಾಟವನ್ನು ಬಹಳ ಗಮನ ಸೆಳೆಯುವಂತೆ ತೆರೆಯ ಮೇಲೆ ತಂದಿದ್ದಾರೆ. ಚಿತ್ರ ಇದ್ದಲ್ಲೇ ಗಿರಿಕಿ ಹೊಡೆದಂತಿದ್ದು , ಚಿತ್ರ ಇನ್ನಷ್ಟು ವೇಗ ಮಾಡಬಹುದಿತ್ತು. ಹೊಡೆದಾಟದ ಅಬ್ಬರವೇ ಹೆಚ್ಚಾಗಿದೆ ಅನಿಸಿದರು ಕುತೂಹಲಕಾರಿ ಆಗಿ ತೆಗೆದುಕೊಂಡು ಹೋಗಿದ್ದಾರೆ.
ಬಂಡವಾಳ ಹಾಕಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಇನ್ನು ಛಾಯಾಗ್ರಹಣ ಕೆಲಸ ಗಮನ ಸೆಳೆಯುತ್ತದೆ. ಬಹಳ ಗ್ಯಾಪ್ ನಂತರ ಮಾಲಾಶ್ರೀ ಅಭಿನಯಿಸಿದ್ದು , ಡಾಕ್ಟರ್ ಪಾತ್ರವನ್ನು ನಿಭಾಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೆಲ್ಲದರ ಹೊರತಾಗಿ ಆಕ್ಷನ್ ಕ್ವೀನ್ ಎನ್ನುವಂತೆ ಫೈಟಿಂಗ್ ನಲ್ಲಿ ಮಿಂಚಿದ್ದಾರೆ. ಇನ್ನು ಮುಂದೆ ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸಿದರೆ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷವಾಗಬಹುದು. ಇನ್ನು ನಟಿ ರಂಜನಿ ರಾಘವನ್ ಸಹ ಡಾಕ್ಟರ್ ಆಗಿ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಇವರೊಂದಿಗೆ ಪ್ರಮೋದ್‌ಶೆಟ್ಟಿ, ರಂಗಾಯಣ ರಘು, ಸಾಧುಕೋಕಿಲ, ಅಶ್ವಿನ್ ಹಾಸನ್, ವರ್ಧನ್ ತೀರ್ಥಹಳ್ಳಿ , ಮಂಜು ಪಾವಗಡ, ಮಂಡ್ಯ ಸಿದ್ದು, ಸದಾನಂದ, ಗಂಗರಾಜು, ನಿತಿನ್, ವಸಂತಕುಮಾರ್.ಸಿ, ಬೇಬಿ ಮೌಲ್ಯ, ಜ್ಯೋತಿ, ಶಿವರಾಜ್ ಶೆಟ್ಟಿ ಸೇರಿದಂತೆ ಹಲವಾರು ಪ್ರತಿಭೆಗಳು ಅಭಿನಯಿಸಿದ್ದಾರೆ. ಒಂದು ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿಯ ಕಥಾನಕ ಒಳಗೊಂಡಿದ್ದು ,ಎಲ್ಲರೂ ಒಮ್ಮೆ ನೋಡುವಂತಿದೆ.