ಆಗ ಪ್ರೇಮಲೋಕ… ಈಗ ಗೌರಿ ಲೋಕ…
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮ್ಯೂಸಿಕಲ್ ಓರಿಯೆಂಟೆಡ್ ಚಿತ್ರ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಸ್ಮಾರ್ಟ್ ಹ್ಯಾಂಡ್ಸಮ್ ಹೀರೋ ಸಮರ್ಜಿತ್ ಲಂಕೇಶ್ ಅಭಿನಯದ “ಗೌರಿ” ಚಿತ್ರದಲ್ಲಿ ಬರೋಬರಿ ಏಳು ವಿಭಿನ್ನ ಹಾಡುಗಳಿದ್ದು , ಹಲವು ಬಿಟ್ಸ್ ಗಳು ಕೂಡ ಒಳಗೊಂಡಿದೆಯಂತೆ.
ಆಗ ಪ್ರೇಮಲೋಕದಲ್ಲಿ ಬರೋಬ್ಬರಿ 11 ಸಾಂಗ್ಸ್ ಗಳು ಪ್ರೇಕ್ಷಕರನ್ನ ರಂಜಿಸಿದ್ದು , ಈಗ ಗೌರಿಯಲ್ಲಿ 07 ಸಾಂಗ್ ಬೇರೆದೇ ಲೋಕವನ್ನು ಸೃಷ್ಟಿ ಮಾಡಲು ಸಿದ್ಧವಾಗಿದೆಯಂತೆ. ವಿಶೇಷ ಏನೆಂದರೆ ಈ ಚಿತ್ರಕ್ಕೆ ಒಟ್ಟು ಐದು ಜನ ಸಂಗೀತ ನಿರ್ದೇಶಕರಾದ ಜೆಸ್ಸಿ ಗಿಫ್ಟ್ , ಚಂದನ್ ಶೆಟ್ಟಿ , ಶಿವು ಬೆರ್ಗಿ ಹಾಗೂ ಅನಿರುದ್ಧ ಶಾಸ್ತ್ರಿ ಸಂಗೀತ ನೀಡಿದರೆ , ಮ್ಯಾಥ್ಯೂಸ್ ಮನು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಈ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಕವಿರಾಜ್ , ಕೆ .ಕಲ್ಯಾಣ್, ವರದರಾಜ್ ಹಾಡುಗಳಿಗೆ ಸಾಹಿತ್ಯವನ್ನು ರಚಿಸಿದ್ದು ಕೈಲಾಶ್ ಕೇರ್ , ಚಂದನ್ ಶೆಟ್ಟಿ , ಅನಿರುದ್ಧ ಶಾಸ್ತ್ರಿ , ಜಾವೇದ್ ಅಲಿ , ಅನನ್ಯ ಭಟ್ , ನಿಹಾಲ್ ತವರು ತೌರೋ , ಸಾಗರ್ , ಬಾಲಸುಬ್ರಮಣ್ಯಂ , ಪ್ರಜ್ಞ ಮರಾಠೆ ಹಾಗೂ ನಾಯಕ ಸಮರ್ಜಿತ್ ಕೂಡ ಹಾಡುಗಳನ್ನು ಹಾಡಿದ್ದಾರೆ.
ಜೋಶ್ , ಮದರ್ ಸೆಂಟಿಮೆಂಟ್ , ಲವ್ ಸೇರಿದಂತೆ ಒಂದೊಂದು ಹಾಡು ಒಂದೊಂದು ಶೈಲಿಯಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ. ಹಾಗೆಯೇ ಒಂದು ಹಾಡಿಗಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಅದ್ದೂರಿ ಸೆಟ್ ಗಳನ್ನ ಹಾಕಿ , ರಿಚ್ ಕಾಸ್ಟ್ಯೂಮ್ , ಬಾಂಬೆ ಡ್ಯಾನ್ಸರ್ಸ್ ಸೇರಿಸಿ ಅದ್ದೂರಿಯಾಗಿ ಚಿತ್ರೀಕರಣ ಮಾಡಿದ್ದೇವೆ ಎಂದರು ನಿರ್ದೇಶಕ ಇಂದ್ರಜಿತ್ ಲಂಕೇಶ್.
ಈಗ ಬಿಡುಗಡೆಗೊಂಡಿರುವ ‘ಒಳ್ಳೆ ಟೈಮ್ ಬರತ್ತೆ’… ಎಂಬ ಸಾಂಗ್ ಎಲ್ಲೆಡೆ ಬಾರಿ ವೈರಲ್ ಆಗಿದ್ದು ಎಲ್ಲರಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. ಈಗಾಗಲೇ ಯೂಟ್ಯೂಬ್ , ರೀಲ್ಸ್ , ಶಾರ್ಟ್ , ಫೇಸ್ಬುಕ್ , ಇನ್ಸ್ಟಾಗ್ರಾಂ ಗಳಲ್ಲಿ ಫಾಲೋವರ್ಸ್ ಗಳು ವಿಡಿಯೋಗಳನ್ನು ಮಾಡಿದ್ದು , ಭರ್ಜರಿ ವ್ಯೂಸ್ ಪಡೆದುಕೊಂಡಿದೆ. ಚಿತ್ರದ ಮೊದಲ ಇನ್ವಿಟೇಶನ್ ಹಾಡುಗಳು , ಕೇಳುಗರಿಗೆ ಹಾಡು ಇಷ್ಟವಾದರೆ ಖಂಡಿತ ಸಿನಿಮಾ ವೀಕ್ಷಕರ ಮನಸ್ಸನ್ನು ಮುಟ್ಟುತ್ತೆ ಅನ್ನೋ ನಂಬಿಕೆ ಇದೆ.
ಕಥೆಗೆ ಪೂರಕವಾಗಿ ಹಾಡುಗಳು ಕೂಡ ಮೂಡಿಬಂದಿದೆ. ಸೆಂಟಿಮೆಂಟ್ , ಫ್ರೈಂಡ್ ಶಿಪ್ , ಲವ್ , ಫ್ಯಾಮಿಲಿ ಡ್ರಾಮಾ , ಆಕ್ಷನ್ ಜೊತೆಗೆ ಮ್ಯೂಸಿಕಲ್ ಟಚ್ ಭರ್ಜರಿಯಾಗಿ ಮೂಡಿ ಬಂದಿದೆ. ಈಗಾಗಲೇ ಈ ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಸಿನಿಮಾ ಕಂಟೆಂಟ್ , ಮೇಕಿಂಗ್ , ಅದ್ದೂರಿತನ ಚೆನ್ನಾಗಿದ್ದರೆ ಖಂಡಿತ ಆಡಿಯೋ , ಟಿವಿ ರೈಟ್ಸ್ ಎಲ್ಲವೂ ಆಗುತ್ತದೆ. ಇನ್ನು ಮುಂದೆ ಒಂದೊಂದೇ ಹಾಡುಗಳು , ಟೀಸರ್ , ಟ್ರೈಲರ್ ಬಿಡುಗಡೆ ಮಾಡುವ ಪ್ಲಾನ್ ಹಂತ ಹಂತವಾಗಿ ಮಾಡಿಕೊಂಡಿದ್ದೇವೆ ಎಂದರು.
ಇನ್ನು ಈ ಒಂದು ಚಿತ್ರವನ್ನ ಲಾಫಿಂಗ್ ಬುದ್ಧ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದ್ದು ಸಮರ್ಜಿತ್ ಲಂಕೇಶ್ ಗೆ ಜೋಡಿಯಾಗಿ ಸಾನ್ಯಾ ಅಯ್ಯರ್ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ಹಿರಿಯ ಕಲಾವಿದರಾದ ಕಾಂತಾರ ಖ್ಯಾತಿಯ ಮಾಲತಿ ಸುಧೀರ್ , ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರಿಯ , ನಟ ಲೂಸ್ ಮಾದ ಯೋಗಿ , ಹಿರಿಯ ಕಲಾವಿದರಾದ ಸಿಹಿಕಹಿ ಚಂದ್ರು , ಮುಖ್ಯಮಂತ್ರಿ ಚಂದ್ರು , ನಟಿ ಪ್ರಿಯಾಂಕ ಉಪೇಂದ್ರ , ವಸುಂದರಾಸ್ , ಸಂಗೀತ ನಿರ್ದೇಶಕ ರಿಕ್ಕಿ ಕೇಜ್ , ಅಕುಲ್ ಬಾಲಾಜಿ ಸೇರಿದಂತೆ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿದೆ.
ಎ.ಜೆ .ಶೆಟ್ಟಿ ಹಾಗೂ ಕೆ . ಕೃಷ್ಣಕುಮಾರ್ ಛಾಯಾಗ್ರಹಣ ಅದ್ದೂರಿಯಾಗಿ ಮೂಡಿ ಬಂದಿದೆಯಂತೆ. ಇವತ್ತಿನ ಫ್ರೆಂಡಿಗೆ ತಕ್ಕಂತೆ ಮೂಡಿ ಬಂದಿರುವ ಈ ಗೌರಿ ಚಿತ್ರ ಇಂದ್ರಜಿತ್ ಲಂಕೇಶ್ ರವರ ಸಹೋದರಿ ಗೌರಿ ಲಂಕೇಶ್ ರವರ ಕಥೆ ಆಧಾರಿತ ಚಿತ್ರವಲ್ಲ, ಈ ಗೌರಿ ಚಿತ್ರ ನೋಡಿಗರಿಗೆ ಹಬ್ಬ , ಕಂಪು , ಸೌಂದರ್ಯ , ಸಂಗೀತದ ಸುಧೆ ಎಲ್ಲವೂ ಅತ್ಯದ್ಭುತವಾಗಿ ಕಾಣುತ್ತದೆ. ಪ್ರತಿಯೊಬ್ಬರು ಈ ಚಿತ್ರವನ್ನು ನೋಡಿ ಖುಷಿ ಕೊಡುತ್ತೆ ಎಂದು ಹೇಳಿದರು ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಲಂಕೇಶ್.