ಇದೆ 21ರಂದು “ಸಂಭವಾಮಿ ಯುಗೇ ಯುಗೇ” ಚಿತ್ರ ಬಿಡುಗಡೆ.
ಚಿತ್ರರಂಗದಲ್ಲಿ ಬಹಳಷ್ಟು ಅನುಭವವನ್ನು ಪಡೆದುಕೊಂಡ ಯುವ ಪ್ರತಿಭೆಗಳ ತಂಡ ಒಗ್ಗೂಡಿಕೊಂಡು ಸಮಾಜಕ್ಕೆ ಒಂದು ಅರ್ಥಪೂರ್ಣ ಮಾದರಿ ಚಿತ್ರವನ್ನು ನೀಡುವ ತವಕ ದೊಂದಿಗೆ “ಸಂಭವಾಮಿ ಯುಗೇ ಯುಗೇ” ಎನ್ನುತ್ತಾ ಈ ವಾರ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದ್ದಾರೆ.
ಹಳ್ಳಿಯಲ್ಲಿ ಹುಟ್ಟಿದರು ಐಷಾರಾಮಿ , ಆಧುನಿಕತೆಯ ಕಡೆಗೆ ವಾಲುತ್ತಾ , ನಗರ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸಲು ಮುಂದಾಗುವ ಬಹುತೇಕ ವಿದ್ಯಾವಂತರೆಲ್ಲ ನಮ್ಮ ಮೂಲವನ್ನು ಮರೆಯಬಾರದು , ಹಳ್ಳಿಯಲ್ಲಿ ಇದ್ದುಕೊಂಡು ಅದ್ಭುತ ಬದುಕನ್ನ ಕಟ್ಟಿಕೊಳ್ಳುವ ದಾರಿ ಇದೆ ಎನ್ನುವ ಸಂದೇಶವನ್ನು ಸಾರುವ ವಿಭಿನ್ನ ಕಥಾಹಂದರದ ಮೂಲಕ ಒಂದಷ್ಟು ಏರಿಳಿತಗಳನ್ನ ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರಂತೆ.
ಒಂದೊಳ್ಳೆ ಕಂಟೆಂಟ್ ಅನ್ನು ಚಿತ್ರ ಪ್ರೇಮಿಗಳಿಗೆ ನೀಡಿದರೆ ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯೊಂದಿಗೆ ಮುಂದಾಗಿದ್ದಾರೆ ಯುವ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ. ಹಳ್ಳಿ ಸೊಗಡಿನ ಕಥೆಯಲ್ಲಿ ಸ್ನೇಹ , ಪ್ರೀತಿ , ದ್ವೇಷ , ಗ್ರಾಮ ಪಂಚಾಯಿತಿಯ ವರಸೆಯ ಜೊತೆ ಒಂದು ಮಾದರಿ ಊರಿನ ಕಥೆಯನ್ನ ಕಟ್ಟಿಕೊಡುವ ಪ್ರಯತ್ನ ಇದಾಗಿದೆಯಂತೆ.
ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಈ ಚಿತ್ರಕ್ಕೆ ಚಿತ್ರದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳು ಇದೆಯಂತೆ. ಯುವಕರಿಗೆ ಪ್ರೋತ್ಸಾಹ ನೀಡಲು ಧೈರ್ಯ ಮಾಡಿ ರಾಜಲಕ್ಷ್ಮಿ ಎಂಟರ್‌ಟೈನ್ಮೆಂಟ್ ಮೂಲಕ ಶ್ರೀಮತಿ ಪ್ರತಿಭಾ ನಿರ್ಮಿಸಿರುವ ಈ ಚಿತ್ರವು ಇದೇ ವಾರ ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಈ ಒಂದು ಚಿತ್ರದಲ್ಲಿ ಯುವ ನಟ ಜಯ್ ಶೆಟ್ಟಿ ನಾಯಕರಾಗಿ ಅಭಿನಯಿಸಿದ್ದಾರೆ. ಈ ಹಿಂದೆ 1975 ಎಂಬ ಚಿತ್ರದಲ್ಲಿ ಅಭಿನಯಿಸಿದ ಈ ಪ್ರತಿಭೆಯಗೆ ಇದು ಎರಡನೇ ಚಿತ್ರಗಿದೆ. ಇದೊಂದು ಗ್ರಾಮೀಣ ಸೊಗಡಿನ ಕೃಷಿ ಹಾಗೂ ರೈತರ ಮೇಲೆ ಮಾಡಿರುವ ಕಥೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪಾತ್ರವನ್ನು ನಿರ್ವಹಿಸಿ ದ್ದಾರಂತೆ.
ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಒಂದು ಮಾದರಿ ಗ್ರಾಮವನ್ನಾಗಿ ಮಾಡಲು ಹೊರದಾಡುವ ಬದುಕಲ್ಲಿ ಎದುರಾಗುವ ಏರಿಳಿತಗಳ ಸುತ್ತ ಮನ ಮಿಡಿಯುವ ಅಂಶ ಒಳಗೊಂಡಿದೆಯಂತೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಬಿಜಾಪುರದ ಬೆಡಗಿ ನಿಶಾ ರಜಪೂತ್ ಅಭಿನಯಿಸಿದರೆ , ಇವರ ಅಣ್ಣನಾಗಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ನಾಯಕನ ತಂಗಿಯಾಗಿ ಮಧುರಾಗೌಡ ಅಭಿನಯಿಸಿದ್ದು ಉಳಿದಂತೆ ಸುಧಾರಾಣಿ, ಬಲ ರಾಜವಾಡಿ, ಪುನೀತ್, ಅಶ್ವಿನ್‌ಹಾಸನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಈ ಒಂದು ಚಿತ್ರಕ್ಕೆ ಪೂರನ್ ಶೆಟ್ಟಿಗಾರ್ ಅವರ ಸಂಗೀತ ಸಂಯೋಜನೆ, ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣವಿದೆ. ಮುಂದಿನ ತಲೆಮಾರಿನವರಿಗೂ ತಿಳಿ ಹೇಳುವಂಥ ಕಥೆಯನ್ನು ಬೆಸೆದುಕೊಂಡು ಹಳ್ಳಿಗಳು ಉಳಿಯಬೇಕು, ಬೆಳೆಸಬೇಕು ಯುವಕರು ಗಟ್ಟಿ ನೆಲೆ ಕಾಣಬೇಕು ಎಂಬ ವಿಚಾರವನ್ನು ತೆರೆಯ ಮೇಲೆ ತರುತ್ತಿದ್ದಾರೆ