Cini NewsTV Serial

ಕಲರ್ಸ್ ನಲ್ಲಿ ಹೊಸ ಧಾರಾವಾಹಿ ‘ನನ್ನ ದೇವ್ರು’ ದರ್ಶನ.

 

ಕಿರುತೆರೆಯಲ್ಲಿ ದಾರವಾಹಿಗಳ ಅಬ್ಬರ ಜೋರಾಗಿ ನಡೆಯುತ್ತಿದ್ದು , ಅದರಲ್ಲೂ ರಿಮೇಕ್ ಧಾರಾವಾಹಿಗಳ ಹಾವಳಿ ಕಲರವ ನಡುವೆ ಸ್ವಂತಿಕೆ ಕಾಣದಂತಾಗುತ್ತಿದೆ. ಇದರ ನಡುವೆ ಒಂದು ಸ್ವಂತ ಸಮೇಕ್ ಕಥೆಯನ್ನು ನಿರ್ಮಾಪಕ ಶೃತಿ ನಾಯ್ಡು ಸಿದ್ಧಪಡಿಸಿಕೊಂಡು ರಮೇಶ್ ಇಂದಿರಾ ನಿರ್ದೇಶನದಲ್ಲಿ “ನನ್ನ ದೇವ್ರು” ಎಂಬ ಧಾರವಾಹಿಯನ್ನ ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಲು ಮಾಧ್ಯಮದವರ ಮುಂದೆ ದಾರವಾಹಿಯ ನಿರ್ದೇಶಕ ರಮೇಶ್ ಇಂದಿರಾ , ನಿರ್ಮಾಪಕ ಶೃತಿ ನಾಯ್ಡು , ಮುಖ್ಯ ಪಾತ್ರಧಾರಿ ಅವಿನಾಶ್ ನರಸಿಂಹರಾಜು , ಮಯೂರಿ, ರೇಖಾ ದಾಸ್ , ಮಾಲತಿ ಸುಧೀರ್ , ವಿ. ಮನೋಹರ್ , ಯುಕ್ತ ಮಲ್ನಾಡ್ ಹಾಗೂ ಚಾನಲ್ ನ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್ ವೇದಿಕೆ ಮೇಲೆ ಹಾಜರಿದ್ದರು.

ಕಲರ್ಸ್ ಕನ್ನಡದ ಈ ‘ನನ್ನ ದೇವ್ರು’ ಎಂಬ ಹೊಸ ಕತೆ
ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿ ಇದಾಗಿದ್ದು , ಜುಲೈ 8ರಿಂದ ಸೋಮವಾರ ದಿಂದ ಶುಕ್ರವಾರದ ತನಕ ಪ್ರತಿ ಸಂಜೆ ಸಂಜೆ 6:30ಕ್ಕೆ ಪ್ರಸಾರವಾಗಲಿದೆ.

ಈ ಧಾರಾವಾಹಿಯ ನಿರ್ದೇಶಕ ರಮೇಶ್ ಇಂದಿರಾ ಮಾತನಾಡುತ್ತ ಇದೊಂದು ಸಮೇಕ್ ಧಾರವಾಹಿ , ನಿರ್ಮಾಪಕ ಶೃತಿ ನಾಯ್ಡು ಕಥೆಯನ್ನು ಬರೆದು ನಿರ್ಮಿಸುತ್ತಿದ್ದಾರೆ. ಬಹಳಷ್ಟು ತಿಂಗಳು ಕೂತು ಚರ್ಚೆ ಮಾಡಿ ಒಂದು ವಿಭಿನ್ನ ಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವ ರೀತಿ ತೋರಿಸುವುದೇ ಒಂದು ಚಾಲೆಂಜ್. ಸಿನಿಮಾ ಹಾಗೂ ಸೀರಿಯಲ್ ಎರಡರಲ್ಲೂ ಕೆಲಸ ಮಾಡುತ್ತಿದ್ದು , ಎಲ್ಲಿ ಕೆಲಸವಿದಿಯೋ ಅಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ.

ಈ ಒಂದು ಧಾರವಾಹಿಯಲ್ಲಿ ದೊಡ್ಡ ತಂಡವೇ ಇದೆ. ‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ.

ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಜನರು ಈ ಧಾರಾವಾಹಿಯನ್ನು ನೋಡಿ ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇನ್ನು ಯಶಸ್ವಿ ಧಾರವಾಹಿಗಳನ್ನು ನೀಡಿದಂತ ಶ್ರುತಿ ನಾಯ್ಡು ನಿರ್ಮಾಣದಲ್ಲಿ ಕಲರ್ಸ್ ಕನ್ನಡಗೆ ಇದು ಮೂರನೇ ಧಾರವಾಹಿಯಾಗಿದ್ದು, ಈ ಕಥೆಯ ಜನರನ್ನ ಸೆಳೆಯುತ್ತದೆ. ಇದೊಂದು ಸಮೇಕ್ ಕಥೆ. ಅದ್ದೂರಿತನದಲ್ಲಿ ಒಂದು ಉತ್ತಮ ಧಾರಾವಾಹಿ ಪ್ರೇಕ್ಷಕರ ಮುಂದೆ ಬರುತ್ತಿದೆ ಎಂದರು.

ಇನ್ನು ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡುತ್ತಾ ಸದಾ ಹೊಸತನಕ್ಕಾಗಿ ನಮ್ಮ ಸಂಸ್ಥೆ ಶ್ರಮಪಡುತ್ತದೆ. ಹಾಗಾಗಿ ಈ ಧಾರಾವಾಹಿ ಕಥೆ ಬಹಳ ವಿಭಿನ್ನವಾಗಿದ್ದು, ಮುಗ್ದತೆ ಮತ್ತು ಪ್ರಾಮಾಣಿಕತೆಯಲ್ಲಿ ತಂದು ಒಡ್ಡುವ ಸವಾಲುಗಳು ಈ ಕಥೆಯ ವಿಶೇಷ ಹಾಗೂ ಬಹಳಷ್ಟು ಹಿರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದೊಂದು ಒಳ್ಳೆ ಧಾರಾವಾಹಿಯಾಗಿ ಗಮನ ಸೆಳೆಯುತ್ತದೆ ಎಂಬ ವಿಶ್ವಾಸವಿದೆ ಎಂದರು.

ಇನ್ನು ಪ್ರಮುಖ ನಾಯಕನ ಪಾತ್ರದಲ್ಲಿ ಅವಿನಾಶ್ ದಿವಾಕರ್ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅಭಿನಯಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಅವಿನಾಶ್ ಇದೇ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಪಡೆದಿದ್ದಾರೆ. ದಾರವಾಹಿಗೆ ಬರುವ ವಿಚಾರ ಮನೆಯವರಿಗೂ ತಿಳಿಸದೆ ಇರಲು ಕಾರಣ ಕಥೆ ಅಷ್ಟು ಚೆನ್ನಾಗಿತ್ತು ಹಾಗಾಗಿ ಒಪ್ಪಿಕೊಂಡೆ. ನಿರ್ದೇಶಕರು , ನಿರ್ಮಾಪಕರು ತುಂಬಾ ಶ್ರಮವಹಿಸಿ ಈ ಧಾರಾವಾಹಿ ನೀಡುತ್ತಿದ್ದಾರೆ ಎಲ್ಲರೂ ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ಇನ್ನು‘ಅಶ್ವಿನಿ ನಕ್ಷತ್ರ’ದಿಂದ ಹೆಸರಾದ ಮಯೂರಿ ತುಂಬಾ ವರ್ಷಗಳ ನಂತರ ಟಿವಿಗೆ ಮರಳಿ ‘ನನ್ನ ದೇವ್ರು’ ನಾಯಕಿಯಾಗಿದ್ದಾರೆ. ಇವರೊಟ್ಟಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಹೀಗೆ ‘ನನ್ನ ದೇವ್ರು’ ತಾರಾಗಣದಲ್ಲಿ ಜನಪ್ರಿಯ ನಟ ನಟಿಯರು ತುಂಬಾನೇ ಇದ್ದಾರೆ.

ಈ ಮೊದಲು ‘ಒಲವಿನ ನಿಲ್ದಾಣ’ ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು, ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಇತ್ತೀಚಿಗೆ ಬೆಳ‌್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಜುಲೈ 8ರ ಸಂಜೆ 6:30 ಕ್ಕೆ ‘ನನ್ನ ದೇವ್ರು’ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗಲಿದೆ. ಇದನ್ನು ನೀವು ಜಿಯೋ ಸಿನಿಮಾ ಮುಖಾಂತರ ನಿಮ್ಮ ಫೋನಿನಲ್ಲೂ ನೋಡಬಹುದಾಗಿದೆ. ಈಗ ಬರಲಿರುವ ಧಾರವಾಹಿಗಳು ಅರ್ಥಪೂರ್ಣ ಸಾಮಾಜಿಕ ಕಳಕಳಿಯ ಸಂದೇಶದೊಂದಿಗೆ ವೀಕ್ಷಕರೇ ಗಮನ ಸೆಳೆಯುವಂತಾಗಲಿ.

error: Content is protected !!