ಹಿಸ್ಟರಿ ರಿಪೀಟ್ಸ್ ಆಗುತ್ತಾ…?
ಸುಮಾರು 18 ವರ್ಷಗಳ ಹಿಂದೆ ಚಂದನವನದಲ್ಲಿ ಸಂಚಲನವನ್ನು ಮೂಡಿಸಿದಂತಹ ನಟರು ಗಣೇಶ್ ಹಾಗೂ ವಿಜಯ್ ಕುಮಾರ್. 2006 ಡಿಸೆಂಬರ್ 29ರಂದು ಬಿಡುಗಡೆಗೊಂಡಂತಹ ‘ಮುಂಗಾರು ಮಳೆ’ ಹಾಗೂ 2007 ಫೆಬ್ರವರಿ 23ರಂದು ಬಿಡುಗಡೆಗೊಂಡಂತಹ ‘ದುನಿಯಾ’ ಸಿನಿಮಾ ಚಿತ್ರೋದ್ಯಮಕ್ಕೆ ಹೊಸ ಚೈತನ್ಯವನ್ನು ನೀಡಿತು.
ಹಾಡುಗಳು , ದೃಶ್ಯ ವೈಭವ , ಕಥಾ ಸಾರಾಂಶ ಎಲ್ಲವೂ ಪ್ರೇಕ್ಷಕರ ಮನಸ್ಸನ್ನ ರಂಜಿಸಿ ಯಶಸ್ಸಿನ ಹಾದಿಯಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡಿತು. ಅಲ್ಲಿಂದ ನಟ ಗಣೇಶ್ ಹಾಗೂ ನಟ ವಿಜಯ್ ಸಾಲು ಸಾಲು ಯಶಸ್ವಿ ಹಾಗೂ ವಿಭಿನ್ನ ಬಗೆಯ ಚಿತ್ರಗಳನ್ನು ನೀಡುತ್ತಾ ಪ್ರೇಕ್ಷಕರನ್ನ ಮನಸ್ಸನ್ನು ಗೆದ್ದು ಮುಂದೆ ಸಾಗಿದ್ದರು.
ಈಗ ಚಿತ್ರೋದ್ಯಮ ಎದುರಿಸುತ್ತಿರುವ ಸಂಕಷ್ಟವು ತಿಳಿದೇ ಇದೆ. ಚಿತ್ರಮಂದಿರಕ್ಕೆ ಸಿನಿಮಾ ಪ್ರೇಮಿಗಳು ಬರುವುದೇ ಬಾರಿ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಮತ್ತೆ ಬಾರಿ ಸಂಚಲವನ್ನು ಮೂಡಿಸಲು ಇದೇ 2024ರ ಆಗಸ್ಟ್ 9 ರಂದು ಸಲಗ ವಿಜಯ್ “ಭೀಮ” ಚಿತ್ರವನ್ನು ನಿರ್ದೇಶಿಸಿ , ನಟಿಸಿ ವಿಜಯಕುಮಾರ್ ಆಗಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ.
ಒಂದು ಸ್ಟ್ರಾಂಗ್ ಮೆಸೇಜ್ ಮೂಲಕ ಲೋಕಲ್ ಹುಡುಗರ ಅಟ್ಟಹಾಸವನ್ನು ತೆರೆಯ ಮೇಲೆ ತೋರಿಸಲಿದ್ದು , ಈಗಾಗಲೇ ಈ ಚಿತ್ರದ ಹಾಡುಗಳು , ಟ್ರೈಲರ್ ಬಾರಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಇನ್ನು ಇದೆ 2024 ಆಗಸ್ಟ್ 15 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶ್ರೀನಿವಾಸ್ ರಾಜು ನಿರ್ದೇಶನದ “ಕೃಷ್ಣಂ ಪ್ರಣಯ ಸಖಿ” ಚಿತ್ರ ಭರ್ಜರಿಯಾಗಿ ಬಿಡುಗಡೆಗೆ ಸಜ್ಜಾಗಿದೆ. ಸಂಪೂರ್ಣ ಮನೋರಂಜನಾತ್ಮಕ ಚಿತ್ರವಾಗಿದ್ದು , ಚಿತ್ರದ ಟ್ರೈಲರ್ ಬಿಡುಗಡೆ ಮಾಡದೆ ಕುತೂಹಲ ಮೂಡಿಸಿರುವ ಈ ಚಿತ್ರದ ಹಾಡುಗಳು ಟ್ರೆಂಡಿಂಗ್ ನಲ್ಲಿ ಬಾರಿ ವೈರಲಾಗಿದ್ದು , ಆಡಿಯೋ ದೊಡ್ಡ ಮಟ್ಟದ ಹಿಟ್ಟಾಗಿದೆ.
ಈಗಾಗಲೇ “ಭೀಮ” ಹಾಗೂ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಮೂಡಿದೆ. ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಹಾಡುಗಳು ಮೊದಲ ಇನ್ವಿಟೇಶನ್ ಎನ್ನುವಂತೆ ಈಗಾಗಲೇ ಈ ಎರಡು ಚಿತ್ರದ ಹಾಡುಗಳು ಬಾರಿ ಸದ್ದನ್ನ ಮಾಡಿದೆ.
ಈ ಶ್ರಾವಣ ಮಾಸದಲ್ಲಿ ಬಿಡುಗಡೆ ಆಗುತ್ತಿರುವ ಈ ಚಿತ್ರಗಳ ಮೂಲಕ ಚಿತ್ರರಂಗ ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಲಿ , ಬರುವ ಎಲ್ಲಾ ಚಿತ್ರಗಳು ಯಶಸ್ಸಿನ ಹಾದಿಯತ್ತ ಸಾಗಿ ಚಿತ್ರ ನಿರ್ಮಾಪಕರಿಗೆ ಲಾಭದಾಯಕವಾಗಲಿ , ಚಿತ್ರೋದ್ಯಮಕ್ಕೆ ಹೊಸ ಹುರುಪು , ಚೈತನ್ಯ ಸಿಗುವಂತಾಗಲಿ.