Cini NewsMovie ReviewSandalwood

ನಶೆಯ ಸಂಹಾರಕ್ಕೆ “ಭೀಮ”ನ ಕಾಳಗ ( ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಭೀಮ
ನಿರ್ದೇಶಕ : ವಿಜಯಕುಮಾರ್ ನಿರ್ಮಾಪಕರು : ಕೃಷ್ಣ ಸಾರ್ಥಕ್, ಜಗದೀಶ್ ಗೌಡ
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಶಿವಸೇನಾ
ತಾರಾಗಣ : ದುನಿಯಾ ವಿಜಯ್, ಅಶ್ವಿನಿ , ಅಚ್ಯುತ್ ಕುಮಾರ್ , ಡ್ರ್ಯಾಗನ್ ಮಂಜು , ಕಾಕ್ರೋಚ್ ಸುಧಿ, ರಂಗಾಯಣ ರಘು , ಕಲ್ಯಾಣಿ ರಾಜು, ಪ್ರಿಯಾ ಶತಮರ್ಶನ್ ಹಾಗೂ ಮುಂತಾದವರು…

ಸಮಾಜದಲ್ಲಿ ನಡೆಯುತ್ತಿರುವ ಬಹಳಷ್ಟು ದುಷ್ಕೃತ್ಯಗಳಿಗೆ ಹರಿಹರೆಯದ ಯುವಕ , ಯುವತಿಯರ, ವಿದ್ಯಾರ್ಥಿಗಳ ಬದುಕು , ಕುಟುಂಬಗಳ ಪರಿಸ್ಥಿತಿ ಹೇಳುತೀರದಂತ ನೋವು ಸಂಕಟಗಳನ್ನ ಅನುಭವಿಸ್ತಾ ಬಂದಿದೆ. ಇದಕ್ಕೆ ಒಂದಷ್ಟು ಪುಂಡರ ಗ್ಯಾಂಗ್, ರಾಜಕೀಯದ ಮುಖಂಡರು ಸಹಕಾರಿ ಆಗಿದ್ದರೆ. ಮತ್ತೊಂದೆಡೆ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು ಇದನ್ನ ಸದೆಬಡಿಯಲು ಹರಸಾಹಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಇದಕ್ಕೆ ಕಾರಣವಾದ ಗಾಂಜಾ , ಅಫೀಮ್ , ಡ್ರಗ್ಸ್ ಸೇರಿದಂತೆ ಒಂದಷ್ಟು ದಂಧೆ ಹಿಂದಿರುವ ಕರಾಳ ಸತ್ಯವನ್ನು ನೈಜಕ್ಕೆ ಪೂರಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “ಭೀಮ”. ನಗರ ಪ್ರದೇಶದಲ್ಲಿರುವ ಸ್ಲಂನಲ್ಲಿ ರಾಮಣ್ಣ (ಅಚ್ಚುತ್ ಕುಮಾರ್) ಜಾವಾ ಗ್ಯಾರೇಜು ನಡೆಸುತ್ತಾ ಹೆಂಡತಿ ಮಗನ ಜೊತೆ ಹುಡುಗರನ್ನು ಸಾಕುತ್ತಾ ಬೆಳೆಸುತ್ತಾನೆ. ತನ್ನ ಗ್ಯಾರೇಜಿನ ಹುಡುಗ ಡ್ರ್ಯಾಗನ್ ಮಂಜು ಹಾಗೂ ಪಕ್ಕದ ಏರಿಯಾ ಗಾಂಜಾ ಮಾರುವವನ ಜೊತೆ ಸೇರಿ ದಂದೆ ಆರಂಭಿಸುತ್ತಾನೆ.

ಇದರಿಂದ ತನ್ನ ಮಗನ ಕಳೆದುಕೊಳ್ಳುವ ರಾಮಣ್ಣ ಕುಟುಂಬ ಕಂಗಾಲಾಗುತ್ತಾರೆ. ಗೆಳೆಯ ಆಂಟನಿ ಮೂಲಕ ಭೀಮ ಹಾಗೂ ಅಲ್ಲು ಎಂಬ ಇಬ್ಬರು ಹುಡುಗರನ್ನ ಗ್ಯಾರೇಜ್ ಗೆ ಸೇರಿಸುತ್ತಾನೆ. ದಿನ ಕಳೆದಂತೆ ಮಗಳನ್ನು ನೆನೆಸಿಕೊಂಡು ಕೊರಗುವ ರಾಮಣ್ಣ ಹಾಗೂ ಬೇಬಿ ಅಮ್ಮ , ಇತ್ತ ಡ್ರ್ಯಾಗನ್ ಮಂಜು ದೊಡ್ಡ ರೌಡಿ ಯಾಗಿ ತನ್ನದೇ ಪಟಾಲಂ ಕಟ್ಟಿಕೊಂಡು ಬೆಳೆಯುತ್ತಾ ರಾಜಕೀಯಕ್ಕೆ ಸೇರಿ ಕಾರ್ಪೊರೇಟರ್ ಆಗಲು ಪ್ಲಾನ್ ಮಾಡುತ್ತಾನೆ.

ಸಾಕಿದ ತಂದೆ ರಾಮಣ್ಣನ ಸಾವಿಗೂ ಡ್ರ್ಯಾಗನ್ ಮಂಜು ಕಾರಣವಾಗಿದ್ದಕ್ಕೆ ಅವನನ್ನ ಕೊಲ್ಲಲು ಸಿದ್ಧನಾಗಿರುತ್ತಾನೆ. ಇದರ ನಡುವೆ ಡ್ರ್ಯಾಗನ್ ಗುಂಪು ಹಾಗೂ ಭೀಮನ ಗುಂಪು ಯುವಪಂಡರನ್ನು ಬೆಳೆಸುತ್ತಾ ಆಗಾಗ ಗಲಾಟೆ ಮಾಡಿಕೊಳ್ಳುತ್ತಾರೆ.

 

ಹಾಗೆಯೇ ಭೀಮ ಹಾಗೂ ಅಶ್ವಿನಿಯ ಪ್ರೀತಿ , ಸಲ್ಲಾಪ , ತರ್ಲೆ ನಡುವೆ ಕೆಲವು ಪುಡಾರಿಗಳ ಅಟ್ಟಹಾಸವು ನಡೆಯುತ್ತಿರುತ್ತದೆ. ಇದರ ನಡುವೆ ಗಾಂಜಾ ಸೊಪ್ಪು ಮಾರಾಟದ ದಂಧೆ ಹಲವಾರ ಬದುಕನ್ನ ನಾಶ ಮಾಡುತ್ತಿರುತ್ತದೆ. ಇದಕ್ಕೆ ರಾಜಕೀಯ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ಸಾತ್ ನೀಡುತ್ತಿರುತ್ತಾರೆ.

ಭೀಮ(ವಿಜಯ್ ಕುಮಾರ್) ನಿಗೆ ಡ್ರ್ಯಾಗನ್ ಹಾಗೂ ಅವನ ತಂಡ ನಡೆಸುವ ಈ ದಂಧೆಯನ್ನು ಮಟ್ಟ ಹಾಕವ ಸಮಯಕ್ಕೆ ದಕ್ಷ ಅಧಿಕಾರಿ ಇನ್ಸ್ಪೆಕ್ಟರ್ ಗಿರಿಜಾ (ಪ್ರಿಯಾ) ಖಡಕ್ಕಾಗಿ ಎಂಟ್ರಿ ಕೊಡ್ತಾಳೆ. ಖದರ್ ಹವಾ ಮೂಲಕ ಆರ್ಭಟಿಸಿದರು ಕೆಲವು ಒತ್ತಡದ ನಡುವೆ ಸಾಗಬೇಕಾಗುತ್ತದೆ. ಈ ಗಾಂಜಾ ಮೂಲ , ಹಿಂದಿರುವ ಕೈವಾಡ , ಪುಡಿ ರೌಡಿಗಳ ಹಟ್ಟಹಾಸ , ದ್ವೇಷದ ಕಿಚ್ಚಿನ ನಡುವೆ ಕರಾಳ ರೋಚಕ ಘಟ್ಟಕ್ಕೆ ಬಂದು ನಿಲ್ಲುತ್ತದೆ.
ಭೀಮನ ನಿಲುವು ಏನು…
ದಂಧೆಗೆ ಕಡಿವಾಣ ಬೀಳುತ್ತಾ…
ಪೋಲಿಸ್ ಹುಡುಕುವ ದಾರಿ…
ಕ್ಲೈಮಾಕ್ಸ್ ಉತ್ತರ ಏನು.. ಇದಕ್ಕೆಲ್ಲಾ ಉತ್ತರ ನೀವು ಈ ಚಿತ್ರ ನೋಡಬೇಕು.

ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರ್ದೇಶಕ ವಿಜಯ ಕುಮಾರ್ ಒಂದು ಕರಾಳ ಸತ್ಯದ ಬಗ್ಗೆ ಬೆಳಕು ಚೆಲ್ಲಿರುವುದು ಉತ್ತಮವಾಗಿದೆ. ಗಾಂಜಾ , ಡ್ರಗ್ಸ್ ನಂತ ಮಾದಕ ವ್ಯಸನಿಗಳಾಗಿ ಬದುಕನ್ನ ಹಾಳು ಮಾಡಿಕೊಳ್ಳುತ್ತಿರುವ ಯುವ ಪೀಳಿಗೆಯನ್ನ ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಆಯ್ಕೆ ಮಾಡ್ಕೊಂಡಿರುವ ಕಥಾವಸ್ತು ಹಾಗೂ ಚಿತ್ರೀಕರಣ ಮಾಡಿರುವಂತಹ ಸ್ಥಳಗಳು ರೋಚಕವೆನಿಸುತ್ತದೆ. ರಕ್ತಪಾತ ಹಾಗೂ ಮಾತಿನ ಶೈಲಿ ಅತಿ ಎನಿಸಿದರು ಚಿತ್ರದ ಓಟಕ್ಕೆ ಪೂರಕ ಎನ್ನುತ್ತಿದೆ. ನಿರ್ದೇಶನದಲ್ಲಿ ಮತ್ತೊಮ್ಮೆ ಗೆದ್ದಿರುವ ವಿಜಯ್ ಕುಮಾರ್ ನಟನಾಗಿಯೂ ಕೂಡ ಅಬ್ಬರಿಸಿದ್ದಾರೆ.

ಅದೇ ರೀತಿ ಇನ್ಸ್ಪೆಕ್ಟರ್ ಪಾತ್ರವನ್ನು ಮಾಡಿರುವ ಪ್ರಿಯಾ ಶತಮರ್ಷನ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದು , ಭರವಸೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಅಜಾನುಬಾಹು ಬ್ಲಾಕ್ ಡ್ರ್ಯಾಗನ್ ಮಂಜು ಮತ್ತೊಬ್ಬ ಕಟ್ಟುಮಸ್ತಿನ ವಿಲ್ಲನ್ ಇಂಡಸ್ಟ್ರಿಗೆ ಸಿಕ್ಕಂತಾಗಿದೆ. ಇನ್ನು ನಾಯಕಿಯಾಗಿ ಅಶ್ವಿನಿ ಅಂಬರೀಶ್ ಕೊಡ ಮಾತಿನ ವರ್ಚಸ್ ಮೂಲಕ ಗಮನ ಸೆಳೆಯುತ್ತಾರೆ.

ಅಚ್ಯುತ್ ಕುಮಾರ್ ನಾಯಕನ ಸಾಕು ತಂದೆಯಾಗಿ ಹಾಗೂ ತಾಯಿಯಾಗಿ ಕಲ್ಯಾಣಿ ರಾಜು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಳನಿ ಜಾಕ್ ಬ್ರದರ್ ಹಾಗೂ ಮಲ್ಲಣರ ಹಾಸ್ಯ ಪಾತ್ರಗಳು ಅದ್ಭುತವಾಗಿ ನಟಿಸಿದ್ದಾರೆ. ಕಾಕ್ರೋಚ್ ಸುದೀ ಡ್ರ್ಯಾಗನ್ ತಮ್ಮನಾಗಿ ಶುಂಠಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಿ ಹ್ಯಾಬಿಟೇಶನ್ ಸೆಂಟರ್ ನಲ್ಲಿ ಮಾದಕ ವ್ಯಸನಿಗಳನ್ನು ರಕ್ಷಿಸುವ ಅಧಿಕಾರಿಯಾಗಿ ರಂಗಾಯಣ ರಘು ಪಾತ್ರಕ್ಕೆ ಜೀವ ತುಂಬಿತು, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ರಾಘು ಶಿವಮೊಗ್ಗ , ಭೀಮನ ಅಣ್ಣನಾಗಿ ಗೋಪಾಲಕೃಷ್ಣ ದೇಶಪಾಂಡೆ , ಎಂಎಲ್ಎ ವಿಷಕಂಠನಾಗಿ ರಮೇಶ್ ಇಂದಿರಾ, ಸೇರಿದಂತೆ ಹಲವಾರು ಯುವ ಪ್ರತಿಭೆಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.

ಸಮಾಜಕ್ಕೆ ಒಂದು ಸಂದೇಶವನ್ನು ನೀಡುವ ನಿಟ್ಟಿನಲ್ಲಿ ನಿರ್ಮಿಸಿರುವ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಇನ್ನು ಸಂಗೀತ ನಿರ್ದೇಶಕ ಚರಣ್ ರಾಜ್ ರ ಒಂದೊಂದು ಹಾಡು ಕೂಡ ಅದ್ಭುತವಾಗಿದೆ. ಹಾಗೇ ಛಾಯಾಗ್ರಹಕ ಶಿವ ಸೇನಾ ಕೈಚಳಕ ಉತ್ತಮವಾಗಿದೆ.

ಮಾಸ್ತಿ ಉಪ್ಪಾರಳ್ಳಿಯ ಸಂಭಾಷಣೆ ಖಡಕ್ಕಾಗಿದ್ದು , ಕೆಲವೊಂದು ಕೇಳುವುದು ಕಷ್ಟವೆನಿಸುತ್ತದೆ. ದೀಪು ಎಸ್ ಕುಮಾರ್ ಸಂಕಲನ , ಧನು ಕುಮಾರ್ ನೃತ್ಯ ಸಂಯೋಜನೆ ಜೊತೆಗೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಮುಂದಿನ ಭಾಗಕ್ಕೆ ಸಲಗ ಹಾಗೂ ಭೀಮನ ಭೇಟಿ ಆಗುವ ಸಾಧ್ಯತೆ ಕಾಣುವಂತಿದೆ. ಈ ಚಿತ್ರವು ಪೋಲಿಸ್ ಇಲಾಖೆಯು ನೋಡಬೇಕಿದೆ. ಒಂದು ಸಂದೇಶವಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

 

error: Content is protected !!