Cini NewsSandalwood

ಸೆಪ್ಟೆಂಬರ್ 20ರಂದು “ಹಗ್ಗ” part-1 ಚಿತ್ರ ಬಿಡುಗಡೆ.

ಬೆಳ್ಳಿ ಪರದೆಯ ಮೇಲೆ ಯುವ ಪಡೆಗಳ ತಂಡ ಸೇರಿಕೊಂಡು ವಿಭಿನ್ನ ಪ್ರಯತ್ನದ ಕುತೂಹಲ ಮೂಡಿಸುವ ಆಕ್ಷನ್ , ಥ್ರಿಲ್ಲರ್ , ಹಾರರ್ , ವಿಎಫ್ಎಕ್ಸ್ , ಸೂಪರ್ ಪವರ್ ಕಥಾನಕವನ್ನು ಸಿದ್ಧಪಡಿಸಿಕೊಂಡು “ಹಗ್ಗ” ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಇದೇ ಸೆಪ್ಟಂಬರ್ 20ರಂದು ರಾಜ್ಯಾದ್ಯಂತ ಬರಲು ಸಜ್ಜಾಗಿದ್ದಾರೆ.

ಇಡೀ ಚಿತ್ರತಂಡದ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ದಯಾಳ್ ಪದ್ಮನಾಭನ್ ಚಿತ್ರ ಬಿಡುಗಡೆಗೆ ಬೇಕಾದಂತ ಎಲ್ಲಾ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಈ ಚಿತ್ರದ ಟ್ರೈಲರ್ ಬಾರಿ ವೈರಲ್ ಆಗಿದ್ದು , ಪ್ರೇಕ್ಷಕರಲ್ಲಿ ಕುತೂಹಲ ಹಿಮ್ಮಡಿಗೊಳಿಸಿದೆ.

ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಶನ್ಸ್ ಮೂಲಕ ರಾಜ್ ಭರದ್ವಾಜ್ ನಿರ್ಮಿಸಿದ್ದು , ಬಾಲ್ಯದಿಂದಲೂ ಚಿತ್ರದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದು, ಈಗ ತಮ್ಮ ಮೊದಲ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಅವಿನಾಶ್. ಎನ್ ಬರುತ್ತಿದ್ದು , ಈ ಹಿಂದೆ ಒಂದು ಕಿರು ಚಿತ್ರವನ್ನು ಮಾಡಿ ಅನುಭವವನ್ನು ಪಡೆದು, ಗೆಳೆಯರೊಟ್ಟಿಗೆ ಸೇರಿಕೊಂಡು ಈಗ “ಹಗ್ಗ” ಚಿತ್ರದೊಂದಿಗೆ ಆಕ್ಷನ್ , ಥ್ರಿಲ್ಲರ್, ಹಾರರ್, ಸೂಪರ್ ಪವರ್ ಕಾಂಟೆಂಟ್ ಜೊತೆಗೆ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವ ಉದ್ದೇಶದಿಂದ ಈ ಚಿತ್ರವನ್ನು ಮಾಡಿದ್ದು , “ಹಗ್ಗ” ನೇ ಈ ಚಿತ್ರದ ಹೀರೋ , ಹಾಗೆಯೇ ಭಾಗ-2 ಕೂಡ ಬರಲಿದೆಯಂತೆ.

ಈ ಚಿತ್ರದಲ್ಲಿ ನಟಿ ಅನು ಪ್ರಭಾಕರ್ ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಅಬ್ಬರಿಸಲಿದ್ದಾರಂತೆ. ಇನ್ನು ಚಿತ್ರದ ನಾಯಕನಾಗಿ ವೇಣು ಸೇರಿದಂತೆ ತಬ್ಲಾ ನಾಣಿ , ಹರ್ಷಿಕಾ ಪೊನ್ನಚ್ಚ , ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗಡೆ, ಮೈಕೋ ಮಂಜು , ಸಂಜು ಬಸಯ್ಯ ಮುಂತಾದವರ ತಾರಾಬಳಗವಿದೆ.

ಈ ಚಿತ್ರದಲ್ಲಿ ಮ್ಯಾಥ್ಯೂಸ್ ಮನು ಸಂಗೀತ , ಸಿನಿಟೆಕ್ ಸೂರಿ ಛಾಯಾಗ್ರಹಣ, ಮನೋಹರ್ ಸಂಭಾಷಣೆ ಹಾಗೂ ಎನ್ . ಎಂ. ವಿಶ್ವ ಸಂಕಲನವಿದೆ. ಈ “ಹಗ್ಗ” ಚಿತ್ರವು ಅದ್ದೂರಿಯಾಗಿ ತೆರೆಯ ಮೇಲೆ ಬರಲು ಸಕಲ ಸಿದ್ಧತೆ ಮಾಡಿಕೊಂಡಿದ್ದು , ಇದೇ 20ರಂದು ಬೆಳ್ಳಿ ಪರದೆಯ ಮೇಲೆ ರಾರಾಜಿಸಲಿದೆ.

error: Content is protected !!