Cini NewsSandalwood

ಕಲರಿಪಾಯಟ್ಟು ಕಥಾನಕದ “ಲುಕ್ ಬ್ಯಾಕ್” ಚಿತ್ರದ ಟ್ರೈಲರ್ ಬಿಡುಗಡೆ

ಮದರ್ ಆಫ್ ಮಾರ್ಷಲ್ ಆರ್ಟ್ ಎಂದೆ ಕರೆಯಲ್ಪಡುವ ಕಲ್ಲರಿಪಾಯಟ್ಟು ಕಲೆಯ ಜೊತೆಗೆ ಗುರು ಹಾಗೂ ವಿದ್ಯಾರ್ಥಿ ಜೊತೆ ಮಾರ್ಗದರ್ಶನದಲ್ಲಿ ಸಾಗುವ ಕಥಾನಕ ಚಿತ್ರ ಇದಾಗಿದ್ದು, ಮೂರು ವರ್ಷದ ಶ್ರಮದ ಫಲವಾಗಿ ಈ ಚಿತ್ರ ನಿರ್ಮಾಣ ಗೊಂಡಿದೆ. ಕನ್ನಡ , ತಮಿಳು, ಮಲಯಾಳಂ , ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದಲ್ಲಿ ಚಿತ್ರಕ್ಕೆ ‘ನೆನೆ ಮನವೆ’ ಎಂದು ಹೆಸರು ಇಡಲಾಗಿದೆ.

ಇದೇ ಸೆಪ್ಟೆಂಬರ್ 27ರಂದು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟ್ರೇಲರ್ ಬಿಡುಗಡೆ ಮಾಡಿದ ಹಿರಿಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಮಾತನಾಡುತ್ತಾ ‘ನಾನು ಇದರಲ್ಲಿ ಸಪೂರ್ಟಿಂಗ್ ಪಾತ್ರ ನಿರ್ವಯಿಸಿದ್ದೇನೆ. ಭಾರತೀಯ ಪ್ರಾಚೀನ ಕಲೆಯ ಸಿನಿಮಾ ಮಾಡಿರುವ ಉದ್ದೇಶ ಉತ್ತಮವಾಗಿದೆ.

ಸಾಂಗ್‌ಗೆ ಕೆಲಸ ಮಾಡಿ ಕೊಟ್ಟಿದ್ದೇನೆ. ಕಳರಿ ಅಂದರೆ ಕಳೆ ಹರಿ , ಬೆಳೆಯಲ್ಲಿರುವ ಕೆಟ್ಟ ಕಳೆಯನ್ನು ಕಿತ್ತು ಹಾಕು ಎನ್ನುವಂತದು, ಅದೇ ರೀತಿ ಪ್ರತಿಯೊಬ್ಬರಲ್ಲೂ ಮೈ ಮೇಲೆ , ಮನಸಿನ ಮೇಲೆ ಅರಿವಿರಬೇಕು ಎಂಬುದು ಚಿತ್ರದ ಆಶಯವಾಗಿದೆ. ಪ್ರತೀಕಾರದ ಕಥೆ ಒಳಗೊಂಡಿದ್ದು, ಕ್ಷಮಿಸು ಎಂಬುದು ಎಷ್ಟು ಮುಖ್ಯ ಎಂದು ಹೇಳಲಾಗಿದೆ. ಇಂದಿನ ಹೆಣ್ಣು ಮಕ್ಕಳು ರಕ್ಷಣೆಗೆ ದೃಷ್ಠಿಯಿಂದ ಈ ಕಲೆಯನ್ನು ಕಲಿಯಬೇಕು, ಹಾಗೆಯೇ ನನ್ನ ತಂಡದ ಗಾಯಕರಿಗೆ ಈ ಚಿತ್ರದಲ್ಲಿ ಕೆಲಸ ಸಿಕ್ಕಿದೆ, ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ಚಿತ್ರವನ್ನು ರಂಜಾನ್ ಮುಲಾರತ್ ನಿರ್ದೇಶನ , ನಟನೆ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುತ್ತಾ ನಾನು ಮೂರು ವರ್ಷಗಳ ಹಿಂದೆ ಸಿನಿಮಾ ಶುರು ಮಾಡಿದ್ದು, ಕಳರಿಪಯಟ್ಟು ಮಾರ್ಷಲ್ ಆರ್ಟ್ಸ್ನ ಒಂದು ಭಾಗ. ಕಥೆ ಎಲ್ಲಾ ಭಾಷೆಗೆ ಆಪ್ತವಾಗಿದ್ದರಿಂದ ಇಂಗ್ಲೀಷ್‌ನಲ್ಲಿ ಸಂಭಾಷಣೆ ಇರುವ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಚಿತ್ರದಲ್ಲಿ ಕಳರಿ ಪಯಟ್ಟು ಕಲೆಯೇ ಹೀರೋ ಎನ್ನಬಹುದು. ಇನ್ನು 84 ವರ್ಷದ ಕಳರಿ ಪಯಟ್ಟು ಕಲೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಮೀನಾಕ್ಷಿಯಮ್ಮ ಕೂಡ ನಟಿಸಿದ್ದು, ಅವರು ಇರುವುದು ನಮಗೆ ಬಲ ಸಿಕ್ಕಿದೆ. ಇನ್ನು ಚಿತ್ರದ ಹೃದಯ ಸಂಗೀತ ಎನ್ನಬಹುದು. ಹಂಸಲೇಖ ಸೇರಿದಂತೆ ನಾಲ್ಕು ವಿದೇಶಿ ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

ಕೇರಳ ಹಾಗೂ ಕರ್ನಾಟಕ ಸೆ. 27 ರಂದು ಸಿನಿಮಾ ರಿಲೀಸ್ ಆಗಲಿದ್ದು, ನಂತರ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಿನಿಮಾ ಇದಾಗಿದೆ. ಕೇರಳ ಹಾಗೂ ಆಗುಂಬೆಯಲಿ ಚಿತ್ರೀಕರಣ ಮಾಡಿದೇವೆ. ಈ ಚಿತ್ರದಲ್ಲಿ ಕಲರಿಪಯಟು ಕಲೆ ಪ್ರಮುಖ ಕೇಂದ್ರ ಬಿಂದುವಾಗಿದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.

ಈ ಚಿತ್ರದ ನಾಯಕಿಯಾಗಿ ಅಭಿನಯಿಸಿರುವ ಉಪಾಸನಾ ಗುರ್ಜನ್ ಮಾತನಾಡಿ ನಿರ್ದೇಶಕರು ಕಥೆ ಹೇಳಿದಾಗ ಭಯ ಆಯ್ತು. ಇದು ತುಂಬಾ ಸ್ಪೆಷಲ್ ಸಿನಿಮಾ ನಂಗೆ. ಅಜ್ಜಿ ಮನೆಯಲ್ಲಿ ಶೂಟ್ ಮಾಡಲಾಗಿದೆ. ಕಳರಿ ಪಯಟ್ಟು ಟ್ರೇನಿಂಗ್ ಪಡೆದು ಪಾತ್ರ ಮಾಡಿದ್ದೇನೆ. ಇಂದಿನ ಯುಗದಲ್ಲಿ ಮಹಿಳೆಯರು ಸ್ವ ರಕ್ಷಣೆ ಮಾಡಿಕೊಳ್ಳಲು ಕಲರಿ ಉತ್ತಮ ಆಯ್ಕೆ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯ ಕಲೆ ಆಗಿದೆ. ಈ ಒಂದು ಚಿತ್ರದ ವಿಚಾರ ಪ್ರತಿಯೊಬ್ಬರಿಗೂ ತಿಳಿಯಬೇಕಾಗಿದೆ. ಹಾಗಾಗಿ ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

ಇನ್ನು ಚಿತ್ರದ ಛಾಯಾಗ್ರಾಹಕ ಕೃಷ್ಣ ನಾಯಕರ್ ಮಾತನಾಡುತ್ತಾ ಚಿತ್ರದಲ್ಲಿ 10 ಫೈಟ್ ಇವೆ. ಒಂದು ತಿಂಗಳು ಕೇರಳ ಹಾಗೂ ಆಗುಂಬೆಯಲ್ಲಿ ಶೂಟಿಂಗ್ ಮಾಡಲಾಗಿದೆ ಎಂದರು. ವೇದಿಕೆಯಲ್ಲಿ ನಿರ್ದೇಶಕರ ಪುತ್ರ ಆರ್ಯನಾಥ್ ಮುಲಾರತ್ ಹಾಗೂ ಮಡದಿ ಸಿನಿ ರಂಜನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸದ್ಯ ಈ ಚಿತ್ರ ಬಿಡುಗಡೆಗೆ ಸಿದ್ಧವಿದ್ದು , ಇದೇ 27ರಂದು ತೆರೆಯ ಮೇಲೆ ಬರಲಿದೆ.

error: Content is protected !!