Cini NewsSandalwood

ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳು ಬರುತ್ತಿದ್ದು , ತನ್ನ ಶೀರ್ಷಿಕೆ ಮೂಲಕವೇ ಬಹಳಷ್ಟು ಕುತೂಹಲ ಮೂಡಿಸಿರುವಂತಹ ಚಿತ್ರ “ಎಲ್ಲಿಗೆ ಪಯಣ ಯಾವುದೋ ದಾರಿ”. ಇದು ನಮ್ಮ ಚಿತ್ರರಂಗದ ಹಿರಿಯ ನಟ , ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯಿಸುತ್ತಿರುವ ಚಿತ್ರವಾಗಿದೆ.

ಈ “ಎಲ್ಲಿಗೆ ಪಯಣ ಯಾವುದೋ ದಾರಿ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಮಾಲ್ ಆಫ್ ಏಷ್ಯಾದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದು , ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿ ಟ್ರೇಲರ್ ಅನ್ನ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ನಾನು ಕಾಶಿನಾಥ್ ಸರ್ ರವರ ಚಿತ್ರಗಳನ್ನು ನೋಡಿ ಖುಷಿ ಪಟ್ಟವರು.

ನಮ್ಮ ಚಿತ್ರರಂಗಕ್ಕೆ ಅವರ ಕೊಡುಗೆ ಕೂಡ ಅಪಾರ. ಅವರ ಪುತ್ರ ಅಭಿಮನ್ಯು ನನಗೆ ಬಹಳ ಆತ್ಮೀಯರು, ಈ ಚಿತ್ರ ಯಶಸ್ಸು ಕಾಣಬೇಕು ತಂಡ ಬಹಳಷ್ಟು ಶ್ರಮ ಪಟ್ಟಿ ಕೆಲಸವನ್ನು ಮಾಡಿರುವುದು ಕಾಣುತ್ತದೆ. ಅಂದಹಾಗೆ, ಈ ಚಿತ್ರ ಇದೇ ಅಕ್ಟೋಬರ್ 25ರಂದು ತೆರೆಗಾಣಲಿದೆ.

ಕನ್ನಡ ಚಿತ್ರರಂಗ ಎಂದಿಗೂ ಕಾಶಿನಾಥ್ ಅವರ ಕೊಡುಗೆಗಳನ್ನು ಅವರಿಂದಾದ ಒಳಿತುಗಳನ್ನು ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ಅಭಿಮನ್ಯುಗೆ ‘ನಾವು ಕೊಡುತ್ತಿರುವ ಬೆಂಬಲ ತೀರಾ ಚಿಕ್ಕದು’ ಈ ಟ್ರೈಲರ್ ನಲ್ಲಿ ಅಭಿಮನ್ಯು ಕಾಣಿಸಿಕೊಂಡಿರುವ ರೀತಿ ಬಹಳ ವಿಭಿನ್ನವಾಗಿದೆ.

ಟ್ರೈಲರ್ ಕೂಡ ಗಮನ ಸೆಳೆಯುವಂತಿದೆ ಎನ್ನುತ್ತಲೇ ನಿರ್ದೇಶಕ ಕಿರಣ್ .ಎಸ್. ಸೂರ್ಯ ಹಾಗೂ ತಂಡದ ಪರಿಶ್ರಮಕ್ಕೂ ಮೆಚ್ಚುಗೆ ಸೂಚಿಸಿದರು. ವಿಶೇಷ ಎಂದರೆ ಈ ಚಿತ್ರದಲ್ಲಿ ಖುದ್ದು ತಾವೇ ಈ ಸಿನಿಮಾಕ್ಕಾಗಿ ಹಾಡಿರುವ ಹಾಡಿನ ಕುರಿತು ಮಾತನಾಡಿದ ಕಿಚ್ಚ , ನಾಯಕ , ನಾಯಕಿಯರು ಸೇರಿದಂತೆ ಇಡೀ ಚಿತ್ರದಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದ್ದಾರೆ.

ನಾಯಕ ನಟ ಅಭಿಮನ್ಯು ಕಾಶಿನಾಥ್ ಮಾತನಾಡುತ್ತಾ ಈ ಚಿತ್ರ ಆರಂಭಗೊಂಡ ರೀತಿ ಹಾಗೂ ಚಿತ್ರೀಕರಣದಲ್ಲಿ ನಡೆದಂತಹ ಘಟನೆಗಳ ವಿವರವನ್ನು ಎಳೆ ಎಳೆಯಾಗಿ ತೆರೆದಿಟ್ಟರು. ಅದರಲ್ಲೂ ಕಿಚ್ಚ ಸುದೀಪ್ ರವರು ಆರಂಭದಿಂದ ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ತಮಗೆ ನೀಡುತ್ತಾ ಬಂದಿರುವ ಬೆಂಬಲವನ್ನು ನೆನಪಿಸಿಕೊಂಡು ಧನ್ಯವಾದಗಳು ತಿಳಿಸಿದರು.

ಇನ್ನು ವಿಶೇಷವಾಗಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸುವ ಪ್ರಯತ್ನದ ಫಲವಾಗಿ ತಮ್ಮ ತಂದೆ ಕಾಶಿನಾಥ್ ರವರ ಧ್ವನಿಯ ಅನುಕರಣೆಯನ್ನ ಮಾಡುವ ಮೂಲಕ ಅವರ ನೆರಳಿನ ಛಾಯೆಗೆ ಓಲುವಂತ ವ್ಯಕ್ತಿಯನ್ನ ಕರೆಸಿ ವಿಶೇಷವಾಗಿ ಚಿತ್ರಿಕರಿಸುವ ನಿಟ್ಟಿನಲ್ಲಿ ಪ್ರೇಕ್ಷಕರಿಗೆ ಬಿಡುಗಡೆ ದಿನಾಂಕವನ್ನು ಹೇಳುವ ರೂಪದಲ್ಲಿ ‘ದೇವಸ್ಥಾನಕ್ಕೆ ಹೋಗಿ ದೇವರನ್ನ ನೋಡುವಂತೆ… ಥಿಯೇಟರ್ ಗೆ ಹೋಗಿ ಸಿನಿಮಾವನ್ನು ನೋಡಿ…’ ಎಂಬ ಧ್ವನಿ ಮೂಲಕ ಅಕ್ಟೋಬರ್ 25 ಚಿತ್ರ ಬಿಡುಗಡೆಯಾಗುತ್ತಿದೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎನ್ನುವ ಮಾತು ಬಹಳ ವಿಶೇಷವಾಗಿತ್ತು. ಇನ್ನು ನಿರ್ದೇಶಕರ ಈ ಮಹಾದಾಸೆ ಹಾಗೂ ನಿರ್ಮಾಪಕರ ಸಹಕಾರ ಹಾಗೂ ನಾಯಕಿಯರ ಸಪೋರ್ಟ್ ಸೇರಿದಂತೆ ತಂಡ ಕೆಲಸ ಮಾಡಿದ ರೀತಿಯನ್ನ ಕೊಂಡಾಡಿ , ನಮ್ಮ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಸಹಕರಿಸಿ ಎಂದು ಕೇಳಿಕೊಂಡರು.

ಈಗಾಗಲೇ ಚಿತ್ರರಂಗದಲ್ಲಿ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಕಿರಣ್. ಎಸ್. ಸೂರ್ಯ ನಿರ್ದೇಶನದ ಮೊದಲ ಚಿತ್ರ ಇದಾಗಿದೆ. ಇದೊಂದು ಲವ್ ಕಮ್ ಥ್ರಿಲ್ಲರ್ ಜಾನರ್ ಕಥೆ ಇದ್ದರೂ ಸಹ , ಹಲವಾರು ವಿಚಾರಗಳು ಬೇರೆದೇ ದೃಷ್ಟಿಕೋನದಲ್ಲಿ ಕಥೆ ಸಾಗಲಿದೆಯಂತೆ.

ನಿರ್ದೇಶಕ ಕಿರಣ್ ಕಾಶಿನಾಥ್ ರವರ ಅಭಿಮಾನಿ, ಅವರ ಮಗನ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಅವರಿಗೆ ಖುಷಿ ಕೊಟ್ಟಿದ್ದು , ಈ ಒಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ವಿಭಿನ್ನವಾಗಿ ತರುವ ಪ್ರಯತ್ನವಾಗಿ ಸಿದ್ಧಪಡಿಸಿದ್ದಾರಂತೆ. ನಿರ್ಮಾಪಕರು , ಕಲಾವಿದರು , ತಂತ್ರಜ್ಞರು ಎಲ್ಲರ ಸಹಕಾರದಿಂದ ಈ ಚಿತ್ರ ಮೂಡಿ ಬಂದಿದ್ದು, ನೀವೆಲ್ಲರೂ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ.

ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಜತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಜತಿನ್ ಅವರು ಈ ಸಿನಿಮಾ ನಿರ್ಮಾಣದ ಅನುಭವಗಳ ಬಗ್ಗೆ ಮಾತಾಡುತ್ತಲೇ, ಇಂಥಾ ಚೆಂದದ ಚಿತ್ರ ಮಾಡಲು ಸಾಥ್ ಕೊಟ್ಟವರನ್ನೆಲ್ಲ ಸ್ಮರಿಸಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ಸ್ಫೂರ್ತಿ ಉಡಿಮನೆ ಕಾಣಿಸಿಕೊಂಡಿದ್ದು , ಚಿತ್ರೀಕರಣದಲ್ಲಿ ತಂಡ ನೀಡಿದ ಸಹಕಾರ ಹಾಗೂ ತಮ್ಮ ಪಾತ್ರದ ವಿಶೇಷತೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಇನ್ನು ಮತ್ತೊಬ್ಬ ನಟಿ ವಿಜಯಶ್ರೀ ಕಲಬುರ್ಗಿ ಮಾತನಾಡುತ್ತಾ ನಾನು ಆಲ್ಬಮ್ ಸಾಂಗ್ ಮಾಡಿದ್ದೆ, ನಂತರ ನನಗೆ ಈ ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದೆ.

ಒಂದು ಕ್ಯೂಟ್ ಚೈಲ್ಡ್ಲಿಷ್ ಕ್ಯಾರೆಕ್ಟರ್, ಕೂರ್ಗ್ , ವಿರಾಜಪೇಟೆ , ಕೊಪ್ಪ ಸ್ಥಳಗಳಲ್ಲಿ ನಡೆದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಇನ್ನು ಕೆಲವು ಕಲಾವಿದರು ತಮ್ಮ ಪಾತ್ರಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉಳಿದಂತೆ ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ.

ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಪ್ರಣವ್ ರಾವ್ ಸಂಗೀತ ನಿರ್ದೇಶನದಲ್ಲಿ ಎರಡು ಹಾಡು ಹಾಗೂ ಹಲವು ಬೀಟ್ಸ್ ಗಳನ್ನ ಒಳಗೊಂಡಿದೆ. ವಿಶೇಷವಾಗಿ ಕಿಚ್ಚ ಸುದೀಪ್ ಒಂದು ಹಾಡನ್ನು ಹಾಡಿದ್ದಾರೆ. ಹಾಗೆಯೇ ಸತ್ಯ ರಾಮ್ ಛಾಯಾಗ್ರಹಣ, ಗಣೇಶ್ ನೀರ್ಚಲ್ ಸಂಕಲನವಿದೆ. ಈಗಾಗಲೇ ಬಹಳಷ್ಟು ಕುತೂಹಲವನ್ನು ಮಾಡಿಸಿರುವ ಈ ಚಿತ್ರ ಇದೆ 25 ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ.

error: Content is protected !!