ವಿನೋದ್ ಪ್ರಭಾಕರ್ ಅಭಿನಯದ “ಫೈಟರ್ ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು,ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ . ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ನೂತನ್ ಉಮೇಶ್ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ನೂತನವಾಗಿ ಅನಾವರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು, ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರಲಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇ ಗೌಡ, ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್ ಕುಮಾರ್, ರಮೇಶ್ ಗೌಡ (ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ), ಕೆ.ಸಿ.ಮೂರ್ತಿ(ಕರ್ನಾಟಕ, ಕನ್ನಡ ರಕ್ಷಣಾ ವೇದಿಕೆ), ವೆಂಕಟ್ ಸ್ವಾಮಿ (ಸಮತಾ ಸೈನಿಕ ದಳ), ಶಿವಾನಂದ ಶೆಟ್ಟಿ(ಕ ರಾ ವೇ ಬೆಂಗಳೂರು), ಭಾರತಿ ನಾಯಕ್(ಹ್ಯೂಮನ್ ರೈಟ್ಸ್ ಮಹಿಳಾ ಅಧ್ಯಕ್ಷರು), ಕೆ.ಕೆ.ಮೋಹನ್ (ನಾಡ ಸೇನಾನಿ ಕೆಂಪೇಗೌಡ ಟ್ರಸ್ಟ್), ಮಲ್ಲಿಕಾರ್ಜುನ, ವಿಜಯಕುಮಾರ್, ಸೋಮಶೇಖರ್, ರವಿಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಜೆ ಆಗಮಿಸಿ, “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
“ಫೈಟರ್” ಚಿತ್ರದಲ್ಲಿ ನಾನು ರೈತರ ಪರ ಹೋರಾಟಗಾರ ಎಂದು ತಿಳಿಸಿದ ನಾಯಕ ವಿನೋದ್ ಪ್ರಭಾಕರ್ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ನಮಸ್ಕಾರ ತಿಳಿಸಿದರು.ನಿಜವಾದ ಫೈಟರ್ ಗಳೆಂದರೆ ನಮ್ಮ ನಾಡು,ನುಡಿ,ಜಲ, ಸಂಸ್ಕೃತಿ, ದೇಶಕ್ಕಾಗಿ ಹೋರಾಡಿದ ಹೋರಾಟಗಾರರು ಹಾಗಾಗಿ ನಾವು ಈ ನಮ್ಮ ಹೋರಾಟಗಾರರಿಂದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ತೀರ್ಮಾನಿಸಿದೆವು ಎಂದು ನಿರ್ದೇಶಕ ನೂತನ ಉಮೇಶ್ ಹೇಳಿದರು
ನಮ್ಮ ಚಿತ್ರ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಇಷ್ಟು ಜನ ಹೋರಾಟಗಾರರು ಬಂದು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ಸಂತೋಷವಾಗಿದೆ. ಅಕ್ಟೋಬರ್ 6 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ. ನಾಯಕಿ ಲೇಖಾಚಂದ್ರ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
#Fighter, #Movie, #ReleaseDate,