Cini NewsSandalwood

ನವರಸನ್ ಕನಸಿನ ಕೂಸು MMB legacyಗೆ 2ನೇ ವರ್ಷದ ಸಂಭ್ರಮ

ಚಿತ್ರೋದ್ಯಮಕ್ಕೆ ಅನುಕೂಲವಾಗುವಂತಹ ಸುಸರ್ಜಿತವಾದ ಸಭಾಂಗಣವನ್ನ ನೀಡುವ ಮೂಲಕ ನಿರ್ಮಾಪಕರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ ನಿರ್ಮಾಪಕ , ನಿರ್ದೇಶಕ, ನಟ ಹಾಗೂ ಪ್ರಸ್ತುತ ಇವೆಂಟ್ ಮ್ಯಾನೇಜ್ಮೆಂಟ್ ನ ರೂವಾರಿ ನವರಸನ್.

ಸಿನಿಮಾ ರಂಗದಲ್ಲಿ ನಟನಾಗಬೇಕೆಂದು ಬಂದ ನವರಸನ್ ಚಿತ್ರರಂಗದ ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ತಿಳಿದುಕೊಳ್ಳುತ್ತಾ ವಿತರಕ , ನಿರ್ಮಾಪಕ , ನಿರ್ದೇಶಕ , ನಟನಾಗಿ ಗುರುತಿಸಿಕೊಂಡು ಚಿತ್ರ ನಿರ್ಮಾಣದ ಕಷ್ಟಗಳನ್ನ ಅರಿತು , ಚಿತ್ರ ಬಿಡುಗಡೆ ಸಮಯದಲ್ಲಿ ನಿರ್ಮಾಪಕರಿಗೆ ಬೇಕಾದಂತ ಪ್ರಮೋಷನ್ಗೆ ಸುಸರ್ಜಿತವಾದ ಸ್ಥಳವನ್ನು ಒದಗಿಸುವುವ ಉದ್ದೇಶದಿಂದ ಕಳೆದ ಎರಡು ವರ್ಷಗಳ ಹಿಂದೆ MMB legacy ಎಂಬ ಸುಸಜ್ಜಿತ ಸಭಾಂಗಣ ಆರಂಭಿಸಿದ್ದರು.

ಎರಡು ವರ್ಷಗಳಲ್ಲಿ ಬಹಳಷ್ಟು ಸಮಾರಂಭಗಳು ಈ ಸ್ಥಳದಲ್ಲಿ ನಡೆದಿದೆ. ಆ ಎಲ್ಲಾ ಕಾರ್ಯಕ್ರಮಗಳು ಚಲನಚಿತ್ರದ ಕುರಿತಾದ ಕಾರ್ಯಕ್ರಮಗಳೇ ಆಗಿರುವುದು ವಿಶೇಷ. ಈಗ MMB legacy ಯ ದ್ವಿತೀಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.

ಈ ಒಂದು ಸಂತೋಷದ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್. ಎಂ. ಸುರೇಶ್, ನಟರಾದ ಚಂದನ್ ಶೆಟ್ಟಿ , ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಗೋವಿಂದರಾಜು, ಚೇತನ್ ಗೌಡ, ರಾಜೇಶ್, ಜಿ.ಟಿ.ಮಾಲ್ ನ ಮಾಲೀಕರಾದ ಆನಂದ್, “ಜಾಲಿವುಡ್” ಸ್ಟುಡಿಯೋಸ್ ನ ಬಶೀರ್ ಹಾಗೂ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್, ನಾಗೇಂದ್ರ , ವಿಜಯ್ ಕುಮಾರ್, ಕಲ್ಲೇಶ್ , ಸುಮಂತ್ ಹಾಗೂ ಸಹಾಯಕರಾದ ವಾಸು , ಸುನಿಲ್ ಸುಧೀಂದ್ರ , ಡಿಜಿಟಲ್ ಅನಿಲ್ ಯಾದವ್ ಮುಂತಾದವರು ಸಮಾರಂಭದಲ್ಲಿ ಭಾಗವಹಸಿ ನವರಸನ್ ಅವರಿಗೆ ಶುಭ ಕೋರಿದರು.

ಇನ್ನು ಈ ಸಂಸ್ಥೆಯ ರೂವಾರಿಯಾದಂತ ನವರಸನ್ ಮಾತನಾಡುತ್ತಾ , ಕಳೆದ ಕೆಲವು ವರ್ಷಗಳ ಹಿಂದೆ ಚಿತ್ರರಂಗದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಚಲನಚಿತ್ರಗಳ ಕುರಿತಾದ ಸಮಾರಂಭಗಳನ್ನು ನಡೆಸಲು ಸೀಮಿತ ಬಜೆಟ್ ನಲ್ಲಿ ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇದೆ‌.
ಅದು ನಿರ್ಮಾಪಕರಿಗೆ ಅನುಕೂಲವಾಗುವಂತಹದು ಆಗಿರಬೇಕು ಎಂದರು.

ಆ ಕೂಡಲೆ ನಾನು ಈ ವಿಷಯದ ಕುರಿತು ಯೋಚಿಸ ತೊಡಗಿದೆ. ಜಿ.ಟಿ.ಮಾಲ್ ನ ನಾಲ್ಕನೇ ಅಂತಸ್ತಿನಲ್ಲಿ ವಿಶಾಲವಾದ ಸ್ಥಳವಿತ್ತು. ಇದರ ಮಾಲೀಕರಾದ ಆನಂದ್ ಅವರ ಬಳಿ ಈ ವಿಷಯದ ಬಗ್ಗೆ ಮಾತನಾಡಿದೆ. ಅವರು ಜಾಗ ನೀಡಿದರು. ಕೆಲವೇ ತಿಂಗಳಲ್ಲಿ ಚಲನಚಿತ್ರಗಳ ಟೀಸರ್, ಟ್ರೇಲರ್, ಹಾಡು ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸುವಂತಹ ಸುಸಜ್ಜಿತ MMB legacy ಸಭಾಂಗಣ ಸಿದ್ದವಾಯಿತು. ನಿರ್ಮಾಪಕರಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗದಂತಹ ದರವನ್ನು ನಿಗದಿಪಡಿಸಲಾಯಿತು‌‌.

ಎರಡು ವರ್ಷಗಳಲ್ಲಿ ಸುಮಾರು 300 ಸಮಾರಂಭಗಳು ಇಲ್ಲಿ ನಡೆದಿದೆ. ಹಾಗಂತ ಇದರಿಂದ ನನಗೆ ಆರ್ಥಿಕವಾಗಿ ತುಂಬಾ ಲಾಭ ಅಂತ ಇಲ್ಲ. ಕೆಲವೊಮ್ಮೆ ನಾನೇ ಕೈಯಿಂದ ಬಾಡಿಗೆ ಕಟ್ಟಿದ್ದು ಇದೆ. ಆದರೆ ಚಿತ್ರರಂಗಕ್ಕೆ ಅದರಲ್ಲೂ ವಿಶೇಷವಾಗಿ ನಿರ್ಮಾಪಕರಿಗಾಗಿ ಈ ಜಾಗವನ್ನು ಆರಂಭಿಸಿದ್ದೇ‌ನೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ.

ಇನ್ನೂ ಹೆಚ್ಚಿನ ನಿರ್ಮಾಪಕರು ಈ ಸಭಾಂಗಣದ ಅನುಕೂಲತೆಯನ್ನು ಬಳಸಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಕಲಾವಿದರಿಗೆ, ಚಿತ್ರರಂಗದ ಗಣ್ಯರಿಗೆ, ಪಿ.ಆರ್.ಓ ಗಳಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಈ MMB legacy ಯ ಸಭಾಂಗಣವನ್ನು ಚಿತ್ರೋದ್ಯಮದವರು ಹೆಚ್ಚು ಹೆಚ್ಚು ಬಳಸಿಕೊಂಡರೆ ಉತ್ತಮ, ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಯೋಜನೆಗಳೊಂದಿಗೆ ಚಿತ್ರರಂಗಕ್ಕೆ ಅನುಕೂಲ ವಾಗುವ ಹಾಗೆ ಈ ಸಂಸ್ಥೆ ಹೊರಬರಲು ನಿರ್ಧರಿಸಿದೆ.

error: Content is protected !!