“ಡಾ.ಲೀಲಾವತಿ ದೇಗುಲ” ಸ್ಮಾರಕ ಮಂದಿರ ನಿರ್ಮಿಸಿದ ಪುತ್ರ ವಿನೋದ್ ರಾಜ್.
ಹಿರಿಯ ನಟಿ ಡಾ.ಎಂ.ಲೀಲಾವತಿ ನಮ್ಮನ್ನು ಅಗಲಿ ಒಂದು ವರ್ಷ ಆಗಿದೆ. ಇದರನ್ವಯ ಪುತ್ರ ನಟ ವಿನೋದ್‌ರಾಜ್ ಒಂದು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಅಮ್ಮನ ನೆನಪಿನಲ್ಲಿ ’ಡಾ.ಲೀಲಾವತಿ ದೇಗುಲ’ ನಿರ್ಮಿಸಿದ್ದಾರೆ.
ಸೋಲದೇವನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ದೇಗುಲ ಮತ್ತು ದಾಸೋಹ ನಿಲಯವನ್ನು ಸಚಿವ ಕೆ.ಹೆಚ್.ಮುನಿಯಪ್ಪ, ಬಸವಣ್ಣ ದೇವರ ಮಠದಶ್ರೀ ಸಿದ್ದಲಿಂಗಸ್ವಾಮೀಜಿ ಮತ್ತು ಶ್ರೀ ಶ್ರೀ ಶ್ರೀ.ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್, ಹಿರಿಯ ಕಲಾವಿದರುಗಳಾದ ಎಂ.ಎಸ್.ಉಮೇಶ್, ಆದಿವಾನಿ ಲಕ್ಷೀದೇವಿ, ಶೈಲಜಸುದರ್ಶನ್, ಬ್ಯಾಂಕ್‌ಜನಾರ್ಧನ್ ಗಿರಿಜಾ ಲೋಕೇಶ್, ಹೊನ್ನವಳ್ಳಿಕೃಷ್ಣ, ಪದ್ಮವಾಸಂತಿ,ಕೀರ್ತಿರಾಜ್, ಟೆನ್ನಿಸ್‌ಕೃಷ್ಣ.
ಉಳಿದಂತೆ ಅಭಿಜಿತ್, ಧರ್ಮಕೀರ್ತಿರಾಜ್ ಮುಂತಾದವರು ಆಗಮಿಸಿದ್ದರು. ನಟ ದೊಡ್ಡಣ್ಣ ದೇಗುಲದ ದರ್ಶನ ಮಾಡಲು ಪೋಷಕ ಕಲಾವಿದರಿಗಂತಲೇ ಎರಡು ಬಸ್ಸುಗಳ ಸೌಲಭ್ಯ ಕಲ್ಪಿಸಿದ್ದರು. ನಟಿ ಲೀಲಾವತಿ ನಟಿಸಿದ್ದ 70ಕ್ಕೂ ಹೆಚ್ಚು ಫೋಟೋಗಳು ಸ್ಮಾರಕದಲ್ಲಿ ಅಳವಡಿಸಿರುವುದು ಗಮನ ಸೆಳೆಯಿತು. ಅಲ್ಲದೆ ರಕ್ತದಾನ ಶಿಬರ ಏರ್ಪಡಿಸಲಾಗಿ, ಸುಮಾರು 80 ಯೂನಿಟ್ ರಕ್ತ ಸಂಗ್ರಹವಾಯಿತು.