Cini NewsSandalwood

“ಬರ್ಗೆಟ್ ಬಸ್ಯಾ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಟಿ ಪ್ರೇಮಾ

ಚಂದನವನಕ್ಕೆ ಮತ್ತೊಂದು ಯುವಪಡೆಗಳ ಬಳಗ ಎಂಟ್ರಿ ಪಡೆದುಕೊಂಡಿದೆ. ಈ ತಂಡ ಬರ್ಗೆಟ್ ಬಸ್ಯಾ ಎಂಬ ಚಿತ್ರದ ಟೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದು , ಈ ಕಾರ್ಯಕ್ರಮಕ್ಕೆ ನಟಿ ಪ್ರೇಮ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾಹೊಸ ಕಾಶಿನಾಥ್ ಹುಟ್ಟಿಕೊಂಡರು ಎನ್ನುತ್ತಾ , ಖಂಡಿತವಾಗಿಯೂ ಚಿತ್ರಮಂದಿರದಲ್ಲಿ ಸಿನಿಮಾ ನೋಡುವೆ ಎಂದರು.

ಹಾಗೆಯೇಮೊದಲು ಪ್ರಶ್ನೆ ಮಾಡಿದ್ದು ನಿರ್ದೇಶಕ ಮತ್ತು ನಾಯಕ ರಿಶ್ ಹಿರೇಮಠ್ ಅವರನ್ನು ಈ ತರಹದ ಆಲೋಚನೆ ಹೇಗೆ ಬಂತು. ಈಗಾಗಲೇ ಉಪೇಂದ್ರ ತೋರಿಸಿದ್ದಾರೆ. ಈ ಕಾಲದಲ್ಲಿ ಒಂದು ಹುಡುಗಿರನ್ನು ನೋಡಿ ಖಿನ್ನತೆಗೆ ಹೋಗುತ್ತಾರೆ. ಅಂತಹುದರಲ್ಲಿ 55 ಹುಡುಗೀರನ್ನು ಸಂಭಾಳಿಸಿದ್ದೀರಾ ಅಂದರೆ ನಿಜಕ್ಕೂ ಮೆಚ್ಚುವಂತದ್ದು.

ನಾನು ಎಷ್ಟೋ ಇಂತಹ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ಇದು ವಿಭಿನ್ನವಾಗಿದೆ. ಕೂತಿದ್ದಾಗಲೇ ಕಾಶಿನಾಥ್ ಪ್ರತಿರೂಪ ಅಂತ ಹೇಳಿದೆ. ಬಾ.ಮ.ಹರೀಶ್ ಸಹ ಅದನ್ನೆ ಧ್ವನಿಗೂಡಿಸಿದರು. ಒಂದು ಕಾಮಿಡಿ ಮಾಡಿ ನಗಿಸುವುದು ಅಂದರೆ ಅಷ್ಟು ಸುಲಭವಲ್ಲ. ಅದು ಸ್ವಾಭಾವಿಕವಾಗಿರಬೇಕು.

ನಾನು ನೋಡಿ ಅಷ್ಟು ನಕ್ಕಿದ್ದೀನಿಅಂದರೆ, ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಬಂದಿದೆ. ನಾನಂತೂ ಸಿನಿಮಾ ನೋಡುತ್ತೇನೆ. ಇಂತಹ ಪ್ರತಿಭೆಗಳು ಹೊರಬರಬೇಕು. ಕೆಲವರಿಗೆ ನಿರ್ದೇಶನ, ನಟನೆ ಮಾಡುವಾಗ ಭಯ ಇರುತ್ತದೆ. ನಿಮಗೆ ಅದೆಲ್ಲವು ತೆರೆ ಮೇಲೆ ಕಾಣಿಸಿಲ್ಲ. ನಿಮ್ಮ ಪರಿಕಲ್ಪನೆ ಚೆನ್ನಾಗಿದೆ ಒಳ್ಳೆಯದಾಗಲಿ ಎಂದರು.

ರ‍್ರAರೆಡ್ಡಿ ಪಿಕ್ರ‍್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್.ಕೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ಕಂಡ್ ಕಂಡ್ ಹುಡ್ಗ ಹುಡ್ಗೀರ್ಗೆಲ್ಲ …?’ ಎಂಬ ಅಡಿಬರಹವಿದೆ. ರಿಶ್‌ ಹಿರೇಮಠ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ.

ಇವರು ಹೇಳುವಂತೆ ನೀವುಗಳು ನೋಡಿದಂತ ಸೀನ್‌ಗಳು ನಿಜ ಜೀವನದಲ್ಲಿ ನಡೆಯುತ್ತಿದೆ.ನಿಮ್ಮೋಳಗಡೆ ಇನ್ನೋಬ್ಬ ಪಾತ್ರಧಾರಿ ಇರುತ್ತಾನೆ. ಹುಡುಗಿರನ್ನು ನೋಡಿದಾಗ ಪಾತ್ರದಿಂದ ಹೊರಗೆ ಬರುತ್ತಾನೆ. ಯಾರೂ ಹೇಳಕೊಳ್ಳದೆ ಇರುವುದನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. 55 ಹುಡುಗಿರು ಕೆಲವೇ ನಿಮಷದಲ್ಲಿ ಬಂದರೂ ನಾಯಕಿಯರಂತೆ ಬಿಂಬಿಸಲಾಗಿದೆ.

ಹೀರೋ, ಡೈರಕ್ಟರ್ ಆಗಬೇಕೆಂದು ಕನಸಿನಲ್ಲೂ ಆಸೆ ಪಟ್ಟಿರಲಿಲ್ಲ. 12 ವರ್ಷದ ಹಿಂದೆ ಪ್ರೀತಿ ಮಾಡುತ್ತಿರುವಾಗ ಅವಳು ಜೀವನದಲ್ಲಿ ದೊಡ್ಡ ವ್ಯಕ್ತಿ ಅಗುವುದನ್ನು ನೋಡಬೇಕು ಅಂತ ಆಸೆ ಪಟ್ಟಳು. ಕಾರಣಾಂತರದಿAದ ಮುಂದಿನ ವರ್ಷವೇ ಬೇರೆಯವರ ಜತೆ ಮದುವೆ ಆದಳು. ಪ್ರೀತಿ ದಕ್ಕಲಿಲ್ಲವೆಂದು ಸಾಯಲು ಹೋದಾಗ ಅವಳ ಸಂದೇಶಗಳು ಧೈರ್ಯ ತಂದು ಕೊಟ್ಟಿತ್ತು. ಆಕೆಯ ಸ್ಪೂರ್ತಿಯೇ, ಇಲ್ಲಿಯವರೆಗೂ ತಂದು ನಿಲ್ಲಿಸಿದೆ.

ಇದು ಆರಂಭ ಅಷ್ಟೇ. ಅಂತ್ಯ ನೀವೇ ನೋಡುತ್ತಿರಾ. ಮುಂದೆ ಬರ್ಗೆಟ್ ಬಸ್ಯಾ ಪಾರ್ಟ್-೨ ಬರುತ್ತೆ ಎಂದು ಹೇಳುವಾಗ ಪ್ರೇಮ ಅವರನ್ನೇ ನೋಡುತ್ತಾ ನಗುತ್ತಲೇ ಇದ್ದರು. ಸುಂದರ ವಾತಾವರಣದಲ್ಲಿ ಬಾ.ಮ.ಹರೀಶ್, ಬಾ.ಮ.ಗಿರೀಶ್, ಗಿಲ್ಲಿನಟ ಮುಂತಾದವರು ಉಪಸ್ತಿತರಿದ್ದರು. ಚಿತ್ರೀಕರಣವು ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ನಡೆಸಿ, ಬೆನಗನಹಳ್ಳಿಯ ಸುಂದರ ತಾಣದಲ್ಲಿ ನಡೆದಿದೆ.

ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‌ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

error: Content is protected !!