ಪಯಣದ ಹಾದಿಯಲ್ಲಿ ಸಂಬಂಧಗಳ ಮೌಲ್ಯ… #ಪಾರು ಪಾರ್ವತಿ (ಚಿತ್ರವಿಮರ್ಶೆ : ರೇಟಿಂಗ್ – 3/5)
ರೇಟಿಂಗ್ 3/5
ಚಿತ್ರ : #ಪಾರು ಪಾರ್ವತಿ
ನಿರ್ದೇಶಕ : ರೋಹಿತ್ ಕೀರ್ತಿ
ನಿರ್ಮಾಪಕ :ಪಿ.ಬಿ. ಪ್ರೇಂನಾಥ್
ಸಂಗೀತ : ಆರ್. ಹರಿ
ಛಾಯಾಗ್ರಹಣ : ಅಬಿನ್ ರಾಜೇಶ್
ತಾರಾಗಣ : ದೀಪಿಕಾ ದಾಸ್, ಪೂನಂ ಸರ್ ನಾಯಕ್ , ಫವಾಜ್ ಅಶ್ರಫ್ , ಸಿದ್ಲಿಂಗು ಶ್ರೀಧರ್ ಹಾಗೂ ಮುಂತಾದವರು…
ಜೀವನವೇ ಒಂದು ಪಯಣ… ನಾವು ಸಾಗುವ ದಾರಿಯಲ್ಲಿ ನಾನು ಘಟನೆಗಳು ನಮ್ಮ ಬದುಕಿಗೆ ಸಾಕ್ಷಿಯಾಗಿ ಕಂಡು ಸಂಬಂಧಗಳ ಮೌಲ್ಯಗಳನ್ನು ತೆರೆದಿಡುತ್ತಾ ಹೋಗುತ್ತದೆ. ತಂದೆ , ತಾಯಿ , ಮಕ್ಕಳು , ಮೊಮ್ಮಕ್ಕಳು , ಪ್ರೀತಿಸುವ ಮನಸ್ಸಿನ ತಳಮಳ ಸುತ್ತ ಸಾಗುವ ಕಥಾನಕದಲ್ಲಿ ಜೀವನವೇ ಒಂದು ರೋಮಾಂಚಕ ಎನ್ನುವ ಎರಡು ಹೃದಯಗಳ ನೋವು , ನಲಿವಿನ ಪಯಣ #ಪಾರು ಪಾರ್ವತಿ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ.
ಎಲ್ಲರೂ ಇದ್ದು ಯಾರು ಇಲ್ಲದಂತೆ ಬದುಕುವ ಒಂಟಿತನದ ಜೀವ ಪಾರ್ವತಿ (ಪೂನಂ ಸರ್ ನಾಯಕ್). ನಾನ ಕಾರಣದಿಂದ ತನ್ನ ಗಂಡನ ಜೊತೆ ಮಾತನಾಡದ ಪಾರ್ವತಿ ತನ್ನ 50ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ದೂರದ ಉತ್ತರಕಾಂಡ್ ನ ಮಿಲಿಟರಿಯಲ್ಲಿರುವ ಗಂಡ ನನ್ನ ನೋಡುವ ತವಕ. ಇನ್ನು ಮಕ್ಕಳ ನಿರ್ಲಕ್ಷದಿಂದ ಬೇಸತ್ತ ಪಾರ್ವತಿ , ವಯಸ್ಸಿನಲ್ಲಿ ಚಿಕ್ಕವಳಾದ ಏಕಾಂಗಿ ಪ್ರಯಾಣದ ತನ್ನ ಆತ್ಮೀಯ ಗೆಳತಿ ಪಾಯಲ್ (ದೀಪಿಕಾ ದಾಸ್) ಮೂಲಕ ತನ್ನ ಗಂಡನನ್ನ ಭೇಟಿ ಮಾಡಲು ಆಸೆ ಪಡುತ್ತಾಳೆ.
ಇನ್ನು ತನ್ನ ಪ್ರೇಮಿಯಿಂದ ದೂರವಾದ ಪಾಯಲ್ ಬದುಕಿನಲ್ಲೂ ಒಂದು ನೋವಿನ ಕಥೆ ವ್ಯಥೆ. ಇದರ ಹೊರತಾಗಿಯೂ ತನ್ನ ಜೀಪ್ ನೊಂದಿಗೆ ಪಾರ್ವತಿ ಜೊತೆ ಪಯಣ ಬೆಳೆಸುತ್ತಾಳೆ. ಇನ್ನು ತಾಯಿಗೆ ಕ್ಯಾನ್ಸರ್ ಇದೆ ಎಂಬ ವಿಚಾರ ತಿಳಿದು ಆಕೆಯನ್ನು ಹುಡುಕಲು ಮಕ್ಕಳು ಪೊಲೀಸ್ ಗೆ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ಕೊಡುತ್ತಾರೆ. ದಾರಿ ಉದ್ದಕ್ಕೂ ಒಂದಷ್ಟು ಘಟನೆಗಳು ಅವರ ಬದುಕಿಗೆ ಹೊಸ ದಿಕ್ಕನ್ನ ತೋರುತ್ತಾ ಹೋಗುತ್ತದೆ.
ಪಾಯಲ್ ಗುರಿ ಏನು…
ಪಾರ್ವತಿ ಆಸೆ ಈಡೇರುತ್ತಾ..
ಪೋಲಿಸ್ ಹಾಗು ಮಕ್ಕಳಿಗೆ ಸಿಗುವ ಉತ್ತರ…
ಕ್ಲೈಮಾಕ್ಸ್ ಹೇಳೋದು ಏನು…
ಇದಕ್ಕಾಗಿ ಈ ಚಿತ್ರವನ್ನು ನೋಡಲೇಬೇಕು.
ಪ್ರತಿಯೊಬ್ಬರ ಬದುಕಿನಲ್ಲೂ ಒಂದು ಆಸೆ , ಕನಸು , ಗುರಿ ಇದ್ದೇ ಇರುತ್ತೆ. ಅದನ್ನು ಈಡೇರಿಸಿಕೊಳ್ಳಲು ಅವಕಾಶ ಸಿಗಬೇಕು. ವಯಸ್ಸಿನ ತಾರತಮ್ಯ ಇಲ್ಲದೆ ಎಲ್ಲರಲಿ ಒಬ್ಬರಾಗಿ ಬದುಕಬಹುದು ಎಂಬ ಸೂಕ್ಷ್ಮತೆಯನ್ನು ಬಹಳ ಸೊಗಸಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಸುಂದರ ಸ್ಥಳಗಳ ಜೊತೆ ಅಲ್ಲಿನ ಆಚಾರ , ವಿಚಾರ ಪದ್ದತಿಗಳನ್ನು ಹೇಳುತ್ತಾ ಸಾಗುವ ಪಯಣ ಕೊಂಚ ಸುಧೀರ್ಘವಾಗಿ ಸಾಗಿದಂತಿದೆ.
ಚಿತ್ರಕಥೆ ಇನ್ನಷ್ಟು ಹಿಡಿತ ಗೊಳಿಸಿದರೆ ಚೆನ್ನಾಗಿರುತ್ತಿತ್ತು. ಇಂತಹ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇ ಬೇಕು. ಇಡೀ ಚಿತ್ರದ ಹೈಲೈಟ್ ಛಾಯಾಗ್ರಹಕರ ಕೈಚಳಕ. ಸಂಗೀತ , ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ.
ಸಾಹಸ , ಸೌಂಡ್ ಡಿಸೈನಿಂಗ್ ಉತ್ತಮವಾಗಿದೆ. ಇನ್ನು ಪೂನಂ ಸರ್ ನಾಯಕ್ ಪಾರ್ವತಿ ಪಾತ್ರಕ್ಕೆ ಜೀವ ತುಂಬಿ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಲಿಪ್ ಸಿಂಕ್ ಬಗ್ಗೆ ಗಮನ ಹರಿಸಬೇಕಿತ್ತು. ನಟಿ ದೀಪಿಕಾ ದಾಸ್ ಒಬ್ಬಂಟಿ ಟ್ರಾವೆಲರ್ ಯಾಗಿ, ಗೋಡೆಗಳ ಮೇಲೆ ಆರ್ಟಿಸ್ಟ್ ಚಿತ್ರಗಳ ಬಿಡಿಸುವ ಕಲೆಯ ಜೊತೆಗೆ ಪ್ರೀತಿಸುವ ಮನಸ್ಸಿಗೆ ಆಸರೆ ಆಗುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಕ್ಷನ್ ಗೆ ಜೈ ಎನ್ನುವಂತೆ ಆರ್ಭಟಿಸಿದ್ದಾರೆ.
ಇನ್ನು ಮಲಯಾಳಿ ಹುಡುಗನ ಪಾತ್ರದಲ್ಲಿ ಫೇವಾಜ್ ಅಶ್ರಫ್ ಉತ್ತಮವಾಗಿ ಅಭಿನಯಿಸಿದ್ದು , ಸ್ಕೇಟಿಂಗ್ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ ಅಭಿನಯಿಸಿರುವ ಕೆ. ಎಸ್. ಶ್ರೀಧರ್ , ಮಹಾಂತೇಶ್ ಹಿರೇಮಠ , ರಘು ರಾಮನಕೊಪ್ಪ , ಪ್ರಶಾಂತ್ ನಟನ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಸಾತ್ ನೀಡಿದ್ದಾರೆ. ಯಾವುದೇ ಒತ್ತಡವಿಲ್ಲದೆ ತಾಳ್ಮೆಯಿಂದ ನೋಡುವವರಿಗೆ ಖಂಡಿತ ಈ ಚಿತ್ರ ಇಷ್ಟವಾಗಲಿದ್ದು ಎಲ್ಲರೂ ಒಮ್ಮೆ ನೋಡಬಹುದು.