“1990s” ಪ್ರೇಮಕಥೆ ಈ ವಾರ ಬಿಡುಗಡೆ
ಸ್ಯಾಂಡಲ್ ವುಡ್ ಗೆ ಬಹಳಷ್ಟು ಯುವ ಪ್ರತಿಭೆಗಳು ಬರುತಿದ್ದು, ತಮ್ಮ ನಟನ ಸಾಮರ್ಥ್ಯದ ಮೂಲಕ ಭದ್ರ ನೆಲೆಯನ್ನ ಕಾಣಲು ಪ್ರಯತ್ನ ಪಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಯುವ ಪಡೆಗಳ ಬಳಗ ಸೇರಿಕೊಂಡು 90ರ ಕಾಲಘಟ್ಟದ ಪ್ರೇಮಕಥೆಯ ಜೊತೆಗೆ ಸಂಬಂಧಗಳ ಮೌಲ್ಯ , ನೋವು – ನಲಿವಿನ ತಳಮಳ , ಅನಿರೀಕ್ಷಿತ ತಿರುವುಗಳ ಸುತ್ತ ಒಂದು ವಿಭಿನ್ನ ಕಥೆಯನ್ನು ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬರುತ್ತಿರುವಂತಹ ಚಿತ್ರ “1990s”. ಈ ಚಿತ್ರವನ್ನು ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು , ನಂದಕುಮಾರ್. ಸಿ . ಎಂ. ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಅರುಣ್ ನಾಯಕನಾಗಿದ ಹಾಗೂ ರಾಣಿ ವರದ್ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಇದೇ ವಾರ ರಾಜದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತದೆ.
“1990s” ಚಿತ್ರವು 5 ಭಾಷೆಗಳಲ್ಲಿ ಸಿದ್ದವಾಗಿದ್ದು, ಈ ಚಿತ್ರಕ್ಕೆ ಮಹಾರಾಜ ಸಂಗೀತ ಸಂಯೋಜನೆ ಮಾಡಿದ್ದು , ಈಗಾಗಲೇ ಚಿತ್ರದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆಯಾಗಿ ಎಲ್ಲೆಡೆ ಬಾರಿ ವೈರಲ್ ಆಗಿ ಸದ್ದು ಮಾಡುತ್ತಿದೆ. 90ರ ಕಾಲಘಟ್ಟದ ಈ ಕಥೆ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.
ಇನ್ನು ಈ ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣ, ಕೃಷ್ಣ ಸಂಕಲನ, ಅಶೋಕ್ ಸಾಹಸ ನಿರ್ದೇಶನ ಹಾಗೂ ಸಾದಿಕ್ ಸರ್ದಾರ್ ನೃತ್ಯ ನಿರ್ದೇಶನವಿದೆ. ಇನ್ನು ಚಿತ್ರ ತಂಡದ ಪ್ರಕಾರ ಈ ಕಥೆಯು ಬಹುತೇಕ ತೊಂಬತ್ತರ ಕಾಲಘಟ್ಟ ದಾಗಿದ್ದು , ಎಲ್ಲಾ ಭಾಷೆಗಳಿಗೂ ಸಲ್ಲುವಂತಹ ಚಿತ್ರವಾಗಿದೆಯಂತೆ. ಗೆಳೆಯರೆಲ್ಲ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.
ಇದೊಂದು ಮುಗ್ಧ ಪ್ರೇಮಿಗಳ ಕಥಾನಕವಾಗಿದ್ದು , ಪ್ರೀತಿಸುವ ಮನಸ್ಸುಗಳನ್ನು ಬಹಳ ಬೇಗ ಸೆಳೆಯುವ ಎಲ್ಲಾ ಲಕ್ಷಣವೂ ಕಾಣುತಿದೆ. ಈ “1990s” ಚಿತ್ರವು ಅದ್ದೂರಿಯಾಗಿ ಇದೇ 28ರಂದು ಬಿಡುಗಡೆಯಾಗುತ್ತಿದೆ.