ನಯನತಾರಗೆ ವಿಲನ್ ಸಲಗ ವಿಜಯ್ ಕುಮಾರ್
ಟಾಲಿವುಡ್ ಆಯ್ತು ಈಗ ಕಾಲಿವುಡ್ ನಲ್ಲಿ ದುನಿಯಾ ವಿಜಯ್ ಯುಗಾರಂಭ. ನಯನತಾರ ಅಭಿನಯದ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಸಲಗ ವಿಜಯ್ ಕುಮಾರ್
ತಮಿಳಿನ ಲೇಡಿ ಸೂಪರ್ ಸ್ಟಾರ್ ಚಿತ್ರದಲ್ಲಿ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸಿ ಸೈಮಾ ಮುಡಿಗೇರಿಸಿಕೊಂಡಿದ್ದ ವಿಜಯ್ ಕುಮಾರ್ ಗೆ ಈಮೂಲಕ ಮತ್ತೊಂದು ದೊಡ್ಡ ಅವಕಾಶ ಬಂದಿದೆ.
ಸದ್ಯ ಕನ್ನಡದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ವಿಜಯ್ ಕುಮಾರ್ ಜೊತೆಗೆ ತಮ್ಮದೇ ನಿರ್ದೇಶನದ ಸಿಟಿ ಲೈಟ್ಸ್ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಅಭಿನಯಿಸ್ತಿದ್ದಾರೆ.