ಈ ವಾರ “ಬರ್ಗೆಟ್ ಬಸ್ಯಾ” ಚಿತ್ರ ಬಿಡುಗಡೆ.
ಹೊಸಬರ ’ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿ ಎಲ್ಲಾ ಕಡೆಗಳಲ್ಲೂ ಪ್ರಶಂಸೆ ವ್ಯಕ್ತವಾಗಿದೆ. ಯರ್ರಂರೆಡ್ಡಿ ಪಿಕ್ಚರ‍್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್.ಕೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ’ಕಂಡ್ ಕಂಡ್ ಹುಡ್ಗ ಹುಡ್ಗೀರ್ಗೆಲ್ಲ …?’ ಎಂಬ ಅಡಿಬರಹವಿದೆ.
ರಿಶ್ ಹಿರೇಮಠ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ನೋಡಿದಂತ ಸೀನ್‌ಗಳು ನಿಜ ಜೀವನದಲ್ಲಿ ನಡೆಯುತ್ತಿದೆ. ನಿಮ್ಮೋಳಗಡೆ ಇನ್ನೋಬ್ಬ ಪಾತ್ರಧಾರಿ ಇರುತ್ತಾನೆ. ಹುಡುಗಿರನ್ನು ನೋಡಿದಾಗ ಪಾತ್ರದಿಂದ ಹೊರಗೆ ಬರುತ್ತಾನೆ. ಯಾರೂ ಹೇಳಿಕೊಳ್ಳದೆ ಇರುವುದನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. 55 ಹುಡುಗಿರು ಕೆಲವೇ ನಿಮಷದಲ್ಲಿ ಬಂದರೂ ನಾಯಕಿಯರಂತೆ ಬಿಂಬಿಸಲಾಗಿದೆ.
ಚಿತ್ರೀಕರಣವು ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ನಡೆಸಿ, ಬೆನಗನಹಳ್ಳಿಯ ಸುಂದರ ತಾಣದಲ್ಲಿ ನಡೆದಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‌ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಅಂದಹಾಗೆ ಸಿನಿಮಾವು ಇದೇ ವಾರದಲ್ಲಿ ತೆರೆ ಕಾಣುತ್ತಿದೆ.