Cini NewsSandalwoodUncategorized

ನಿಖಿತಾ ನಟನೆಯ ಟಕೀಲಾ ಶೀರ್ಷಿಕೆ ಗೀತೆಗೆ ಶರಣ್ ಧ್ವನಿ

ಬೆಳ್ಳಿ ಪರದೆ ಮೇಲೆ ಮತ್ತೊಂದು ಮನರಂಜನೆಯ ರಸದೌತಣ ನೀಡುವಂತಹ ಚಿತ್ರ ಬರಲು ಸಜ್ಜಾಗಿದೆ. ಹಾಗಾಗಿ ಇತ್ತೀಚಿಗೆ *ಟಕೀಲಾ* ಚಿತ್ರದ ಶೀರ್ಷಿಕೆ ಗೀತೆಗೆ ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದಲ್ಲಿ ನಟ ಶರಣ್ ಹಾಡಿರುವುದು ವಿಶೇಷ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಕೆ.ಪ್ರವೀಣ್‌ನಾಯಕ್. ಇವರು ಈ ಹಿಂದೆ ’ಜಡ್’ ’ಹೂ ಅಂತಿಯಾ ಉಹೂ ಅಂತೀಯ’ ಹಾಗೂ ’ಮೀಸೆ ಚಿಗುರಿದಾಗ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ’ವಿದ್ಯಾರ್ಥಿ’ ’ಮುನಿಯ’ ’ಜನ್‌ಧನ್’ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಮರಡಿಹಳ್ಳಿ ನಾಗಚಂದ್ರ ಹೊಸ ಅನುಭವ ಎನ್ನುವಂತೆ, ಈ ಬಾರಿ ಶ್ರೀ ಸಿದ್ದಿವಿನಾಯಕ ಫಿಲಂಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ರಾಮರೆಡ್ಡಿ ಸಹ ನಿರ್ಮಾಪಕರು.

ಧರ್ಮಕೀರ್ತಿರಾಜ್ ನಾಯಕ, ನಿಖಿತಾಸ್ವಾಮಿ ನಾಯಕಿ. ತಾರಗಣದಲ್ಲಿ ನಾಗೇಂದ್ರಅರಸ್, ಕೋಟೆಪ್ರಭಾಕರ್, ಸುಮನ್‌ಶರ್ಮ, ಅರುಣ್ ಮೇಸ್ಟ್ರು ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಸಂಗೀತ ಟಾಪ್‌ಸ್ಟಾರ್ ರೇಣು, ಸಂಕಲನ ಕೆ.ಗಿರೀಶ್‌ಕುಮಾರ್, ಸಾಹಸ ಜಾಗ್ವರ್ ಸಣ್ಣಪ್ಪ-ರಮೇಶ್, ನೃತ್ಯ ಸ್ಟಾರ್ ನಾಗಿ, ಕಲೆ ಪ್ರಶಾಂತ್, ಕಾರ್ಯಕಾರಿ ನಿರ್ಮಾಪಕರು ಆರ್.ತ್ಯಾಗರಾಜು ಅವರದು. ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ಶೂಟಿಂಗ್ ನಡೆದಿದೆ.

error: Content is protected !!