ಯುವ ಕ್ರಿಕೆಟಿಗ ನೆಟ್ ಬೌಲರ್ ಭಾಗ್ ರಾಜ್.
ಜೀವನದಲ್ಲಿ ಗುರಿ ಸಾಧಿಸುವುದಕ್ಕೆ ಮುಖ್ಯವಾಗಿ ಗುರುವಿರಬೇಕು ಜೊತೆಗೆ ಶ್ರದ್ಧೆ , ನಿಷ್ಠೆ , ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ. ಅಂತದ್ದೇ ಹಾದಿಯಲ್ಲಿ 20 ವರ್ಷದ ಯುವ ಕ್ರಿಕೆಟಿಗ ಭಾಗ್ ರಾಜ್. ಜೆ. ನಿರಂತರ ಕಠಿಣ ಅಭ್ಯಾಸದ ಮೂಲಕ ಮುಂದೆ ಸಾಗುತ್ತಿದ್ದಾರೆ. ಗುಲ್ಬರ್ಗ ಮೂಲದ ಈ ಯುವ ಆಟಗಾರ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ತಂದೆ ಜಗನ್ನಾಥ್ ಹಾಗೂ ತಾಯಿ ಜಯಶ್ರೀ ಆಸೆಯಂತೆ ಕ್ರಿಕೆಟ್ ನಲ್ಲಿ ಉತ್ತಮ ಭವಿಷ್ಯ ಕಾಣಲು ಸಜ್ಜಾಗಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು , ಗಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದು ಟೆನಿಸ್ ಬಾಲ್ ನಲ್ಲೂ ಪಳಗಿ 17ನೇ ವಯಸ್ಸಿನಲ್ಲಿ ಜವರಸ್ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡು ಬ್ಯಾಟ್ಸ್ಮನ್ ಹಾಗೂ ಬೋಲಿಂಗ್ ನಲ್ಲಿ ತರಬೇತಿ ಪಡೆಯುತ್ತಾ ಬೃಹತ್ ಕ್ರಿಕೆಟ್ ಅಂಗಳದಲ್ಲಿ ಪ್ರವೇಶ ಪಡೆದರು.
ತದನಂತರ ಕರ್ನಾಟಕ ಇನ್ಸ್ಟಿಟ್ಯೂಷನ್ ಆಫ್ ಕ್ರಿಕೆಟ್ ಪ್ರವೇಶ ಪಡೆದ ಕ್ರಿಕೆಟಿಗ ಭಾಗ್ ರಾಜ್ ಮುಂದೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ನೆಟ್ ಬೋಲರ್ ಆಗಿ ಸೇರಿಕೊಳ್ಳುತ್ತಾರೆ. ಮುಂದೆ ಉಜ್ವಲ ಭವಿಷ್ಯದ ದಾರಿ ತೆರೆಯುತ್ತಾ ಹೋಗುತ್ತದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಗಳಿಗೆ (WPL) ನೆಟ್ ಬೌಲರ್ ಟ್ರೈನರ್ ಆಗಿ ಆಯ್ಕೆಯಾಗುತ್ತಾರೆ. ಅಂಡರ್ 19 ಆಟಗಾರ್ತಿಗಳಿಗೆ ತರಬೇತಿ ನೀಡುತ್ತಾ ಸಾಗುವ ಭಾಗರಾಜ್ ಮುಂದೆ ಇಂಡಿಯನ್ ಟೂರ್ ಆಫ್ ಸೌತ್ ಆಫ್ರಿಕಾ ತಂಡಕ್ಕೂ ತಮ್ಮ ಬೋಲಿಂಗ್ ತರಬೇತಿಯನ್ನು ನೀಡುತ್ತಾರೆ. ಸುಮಾರು 120 ರಿಂದ 150ರ ವೇಗದವರೆಗೂ ಬೋಲಿಂಗ್ ಎಸೆತಗಳ ತರಬೇತಿ ನೀಡುವ ಈ ಪಟು ಪುರುಷರ ತಂಡದಲ್ಲಿ ಆಯ್ಕೆ ಆಗುವ ಹಂತದಲ್ಲಿ ಬಹಳಷ್ಟು ತಾಲಿಮು ನಡೆಸುತ್ತಿದ್ದಾರೆ.
ಇದಲ್ಲದೆ ಈ ಯುವ ಕ್ರಿಕೆಟ್ ಆಟಗಾರ ಸಿನಿಮಾ , ಸೀರಿಯಲ್ ಕ್ಷೇತ್ರದ ಕಲಾವಿದರು , ತಂತ್ರಜ್ಞಾನರ ಜೊತೆ ಕೂಡ ಒಗ್ಗೂಡಿ ಅಲ್ಲಿರುವ ಆಟಗಾರರಿಗೆ ಬೋಲಿಂಗ್ ತರಬೇತಿಯನ್ನ ನೀಡುತ್ತಾ ಮುಂದೆ ಸಾಗಿದ್ದಾರೆ. ಈಗಾಗಲೇ IPL , TPL , RAJ CUP & Chamundeshwari preimer league ಸೇರಿದಂತೆ ಹಲವಾರು ಮ್ಯಾಚ್ಗಳಲ್ಲಿ ತೊಡಗಿಸಿಕೊಂಡಿರುವ ಭಾಗ್ ರಾಜ್ ಉದ್ಯಮಿ ನಕ್ಷತ್ರ ಮಂಜುನಾಥ್ ರವರ ಕ್ರಿಕೆಟ್ ನಕ್ಷತ್ರ ತಂಡದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ಪ್ರೀತಿ , ವಿಶ್ವಾಸವನ್ನ ಗಳಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಮುಖ್ಯ ಕ್ರಿಕೆಟ್ ಆಟಗಾರರಿಗೂ ಹಾಗೂ ರೀಲ್ ಕ್ರಿಕೆಟ್ ಆಟಗಾರರಿಗೂ ತರಬೇತುದಾರ. ಈ ಚಿಕ್ಕ ವಯಸ್ಸಿನಲ್ಲಿ ಬಹಳ ಶ್ರಮಪಟ್ಟು ಉಜ್ವಲ ಭವಿಷ್ಯಕ್ಕಾಗಿ ಮುಂದೆ ಸಾಗಿರುವ ಈ ಪ್ರತಿಭೆಗೆ ಯಶಸ್ಸು ಸಿಕ್ಕಿ ಉತ್ತಮ ಕ್ರಿಕೆಟಿಗರನಾಗಿ ಹೊರಹೊಮ್ಮಲಿ.