“ಘೋಸ್ಟ್” ಪತ್ರಿಕಾಗೋಷ್ಠಿಯಲ್ಲಿ ಅಮ್ಮನನ್ನು ನೆನಪಿಸಿಕೊಂಡ ಶಿವಣ್ಣ
ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ “ಘೋಸ್ಟ್” ಚಿತ್ರದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು , ಆ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುತ್ತಾ ತಮ್ಮ ತಾಯಿಯನ್ನು ನೆನಪಿಸಿಕೊಂಡರು.
ನಾನು ನಾಯಕನಾಗಿ ಬೆಳ್ಳಿ ಪರದೆ ಮೇಲೆ “ಆನಂದ್” ಚಿತ್ರದ ಮೂಲಕ ಬಂದೆ , ನನ್ನ ತಾಯಿ ನಿರ್ಮಾಣ ಮಾಡಿದಂತ ಚಿತ್ರವದು. ಈ “ಘೋಸ್ಟ್” ಚಿತ್ರದಲ್ಲಿ ನನ್ನದು ಮೂರು ಶೇಡ್ಗಳ ಪಾತ್ರ ಅದರಲ್ಲಿ ಒಂದು ನನ್ನ ಎಂಗರ್ ಲುಕ್ ಇರುವ ಪತ್ರ , ಅದು ನನಗೆ ಅನಂದ್, ರಥಸಪ್ತಮಿ ಚಿತ್ರವನ್ನ ನೆನಪಿಸುತ್ತಿತ್ತು , ನನ್ನ ತಾಯಿ ಇದ್ದಿದ್ದರೆ ಬಹಳ ಖುಷಿ ಪಟ್ಟು ಆ ಲುಕ್ ನ ನೋಡುತ್ತಿದ್ದರು ಎಂದು ತಾಯಿಯನ್ನು ನೆನಪಿಸಿಕೊಂಡರು.
ನಾನು ಈ ರೀತಿಯ ಪಾತ್ರವನ್ನು ಹಿಂದೆಂದೂ ಮಾಡಿರಲಿಲ್ಲ , ಈ ಚಿತ್ರದಲ್ಲಿ ಅನುಪಮ ಕೇರ್ ಜೊತೆ ಅಭಿನಯಿಸಿದ್ದು ಒಳ್ಳೆ ಅನುಭವ , ಅವರ ಫೇಸ್ ನಲ್ಲಿ ಎಲ್ಲಾ ರೀತಿಯ ಪಾತ್ರವನ್ನು ನಿಭಾಯಿಸುವಂತಹ ಅದ್ಭುತ ಕಲಾವಿದರು ಹಾಗೆಯೇ ಮತ್ತೊಬ್ಬ ಅದ್ಭುತ ಕಲಾವಿದ ಜಯರಾಮ್ ಅವರು ಜೊತೆ ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿದೆ. ಇನ್ನು ನಿರ್ದೇಶಕ ಶ್ರೀನಿ ಒಂದು ವಿಭಿನ್ನವಾದ ಚಿತ್ರಕಥೆಯನ್ನು ಸಿದ್ಧಪಡಿಸಿ ತೆರೆ ಮೇಲೆ ತರುತ್ತಿದ್ದಾರೆ. ಅದೇ ರೀತಿ ನಿರ್ಮಾಪಕ ಸಂದೇಶ ನಾಗರಾಜ್ ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಹಾಗೆಯೇ ಮಹೇಂದ್ರ ಸಿಂಹ ರವರ ಛಾಯಾಗ್ರಾಹಣ ಹಾಗೂ ಅರ್ಜುನ್ ಜನ್ಯ ಸಂಗೀತ ಖಂಡಿತ ಇಷ್ಟವಾಗುತ್ತದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರ. ಎಲ್ಲಾ ಕಡೆ ಅದ್ದೂರಿ ಪ್ರಚಾರವನ್ನು ಮಾಡುತ್ತಿದ್ದೇವೆ. ಕನ್ನಡ ಸೇರಿದಂತೆ ತಮಿಳು , ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಾನೇ ಡಬ್ ಮಾಡಿದ್ದೇನೆ. ಈ ಘೋಸ್ಟ್ ಚಿತ್ರ ಬೇರೆದೇ ಒಂದು ಫೀಲ್ ಖಂಡಿತ ಕೊಡುತ್ತದೆ. ಈ ವಾರ ನಮ್ಮ ಜೊತೆ ಬೇರೆ ಬೇರೆ ಚಿತ್ರಗಳು ಕೂಡ ಬರುತ್ತಿದೆ. ಅವೆಲ್ಲ ಚಿತ್ರವನ್ನು ನೋಡಿ ಹಾಗೆ ನಮ್ಮ ಚಿತ್ರಕ್ಕೆ ಸ್ವಲ್ಪ ಹೆಚ್ಚು ಪ್ರೋತ್ಸಾಹ ಕೊಟ್ಟು ಬೆಂಬಲಿಸಿ ಎಂದು ಕೇಳಿಕೊಂಡರು.
ಈ “ಘೋಸ್ಟ್” ಚಿತ್ರವು ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು , ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹಾಗೂ ಅಭಿಮಾನಿಗಳಿಗಾಗಿ ಮಧ್ಯರಾತ್ರಿಯಲ್ಲಿ ವಿಶೇಷವಾಗಿ 12 ಗಂಟೆಗೆ ಪ್ರದರ್ಶನ ಕೂಡ ಇದಲಿದೆಯಂತೆ. ಈಗಾಗಲೇ ಅದ್ದೂರಿ ಕಟೌಟ್ಗಳು ಅಭಿಮಾನಿಗಳ ಸಡಗರ ಹಿಮ್ಮಡಿಗೊಳಿಸಿದ್ದು , ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಈ 136ನೇ ಚಿತ್ರವನ್ನು ಕಟೌಟ್ , ಹಾರ , ಸ್ಟಾರ್ಗಳ ಮೂಲಕ ಹಬ್ಬವಾಗಿ ಆಚರಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.