ದಂಪತಿಗಳು ನೋಡಲೇಬೇಕಾದ “ಅಥಿ ಐ ಲವ್ ಯು” ಚಿತ್ರದ ಟ್ರೇಲರ್ ರಿಲೀಸ್.
ಸಾಮಾನ್ಯವಾಗಿ ಬಿಡುಗಡೆಯಾಗುವ ಬಹುತೇಕ ಚಿತ್ರಗಳು ಮಾಸ್ ಹಾಗೂ ಕ್ಲಾಸ್ ಚಿತ್ರಗಳು ಎಂದು ಹೇಳಲು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಚಿತ್ರ ತಂಡ ಇದು ಪ್ರೀತಿಸುವವರಿಗೆ ಹಾಗೂ ಪ್ರೀತಿಮಾಡಿದವರಿಗೆ ಸೂಕ್ತವಾದ ಚಿತ್ರ ಎನ್ನುತ್ತಾ ಈ ಚಿತ್ರದ ಟ್ರೈಲರ್ ಯನ್ನು ಬಿಡುಗಡೆ ಮಾಡಿದೆ. ಈ ಚಿತ್ರದ ಶೀರ್ಷಿಕೆಯೇ ಚಿತ್ರದ ಒಳ ಹೂರಣವನ್ನು ಹೇಳುವಂತಿದೆ. ಅದುವೇ “ಅಥಿ ಐ ಲವ್ ಯು”. ಈಗಾಗಲೇ ಬಿಡುಗಡೆ ಗೊಂಡಿರುವ ಈ ಟ್ರೈಲರ್ ಬಾರಿ ಸದ್ದನ್ನ ಮಾಡಿದ್ದು , ಈ ಚಿತ್ರತಂಡ ಟ್ರೈಲರ್ ಹಾಗೂ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು.
ಚಿತ್ರದ ಕುರಿತು ನಿರ್ಮಾಪಕ ಸೆವೆನ್ ರಾಜ್ ಮಾತನಾಡುತ್ತಾ ನಿರ್ದೇಶಕ ಲೋಕೇಂದ್ರ ಸೂರ್ಯ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡಿದ್ದೇನೆ. ಇದು ನನ್ನ ನಿರ್ಮಾಣದ ಎರಡನೇ ಚಿತ್ರ ಸತಿಪತಿಯರ ಸಂಬಂಧದ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇನೆ. ಬಿಡುಗಡೆಯ ಸಮಯದಲ್ಲಿ ನೂತನ ಯೋಜನೆ ಹಾಕಿಕೊಂಡಿದ್ದೇನೆ. ಗಂಡ ಟಿಕೆಟ್ ತೆಗೆದುಕೊಂಡರೆ ಹೆಂಡತಿಗೆ ಟಿಕೆಟ್ ಉಚಿತ ಹಾಗೂ ಹೆಂಡತಿ ಟಿಕೆಟ್ ತೆಗೆದುಕೊಂಡರೆ ಗಂಡನಿಗೆ ಉಚಿತ. ಹೀಗೆ ಬಹಳಷ್ಟು ಯೋಚನೆಯನ್ನು ಹಾಕಿಕೊಂಡಿದ್ದೇನೆ.
ಚಿತ್ರವನ್ನು ಬಿಡುಗಡೆ ಸಮಯದಲ್ಲಿ ಎಲ್ಲವನ್ನು ತಿಳಿಸುತ್ತೇನೆ. ಸದ್ಯ ಟ್ರೈಲರ್ ಬಿಡುಗಡೆಯಾಗಿದೆ ನನಗೆ ಈ ಚಿತ್ರ ತೃಪ್ತಿ ತಂದಿದೆ. ನನ್ನ ಮುಂದಿನ ಮೂರನೇ ಚಿತ್ರ ನನ್ನ ಜೀವನ ಆಧಾರಿತ ಬಯೋಪಿಕ್ ಮಾಡುವ ಉದ್ದೇಶವಿದೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಎಂದು ನಿರ್ಮಾಪಕರು ತಿಳಿಸಿದರು.
ಇನ್ನು ಈ ಚಿತ್ರದ ನಿರ್ದೇಶಕ ಲೋಕೇಂದ್ರ ಸೂರ್ಯ ಮಾತನಾಡುತ್ತಾ ಈ ಚಿತ್ರದಲ್ಲಿರುವುದು “ಅಥಿ”ಹಾಗೂ “ವಸಂತ್” ಎಂಬ ಎರಡು ಪಾತ್ರಗಳು ಮಾತ್ರ , ಇದು ಒಂದು ದಿನದಲ್ಲಿ ನಡೆಯುವ ಕಥೆ. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡ ದಿನ ರಾತ್ರಿ ವಾಪಸು ಬರುತ್ತಾನೆ. ಒಂದು ದಿನ ಇದಕ್ಕಿದಂತೆ ಗಂಡ ಮಧ್ಯಾಹ್ನ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಏನು ಮಾಡುತ್ತಿರುತ್ತಾಳೆ? ಎಂಬುದನ್ನು ತೆರೆಯ ಮೇಲೆ ನೋಡಬೇಕು. ನಮ್ಮ ಚಿತ್ರವನ್ನು ಮದುವೆಯಾದ ದಂಪತಿಗಳು ಹಾಗೂ ಪ್ರೀತಿ ಮಾಡುತ್ತಿರುವವರು ನೋಡಿ. ಚಿತ್ರದಲ್ಲಿ ಸಮಾಜಕ್ಕೆ ಒಂದೊಳ್ಳೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ. ನಾನು ನಿರ್ದೇಶನದೊಂದಿಗೆ ನಾಯಕನಾಗೂ ಅಭಿನಯಿಸಿದ್ದೇನೆ.
ಸಾತ್ವಿಕ ಈ ಚಿತ್ರದ ನಾಯಕಿ. ಎರಡೇ ಪಾತ್ರಗಳು ಮಾತ್ರ ನಿಮಗೆ ತೆರೆಯ ಮೇಲೆ ಕಾಣುವುದು. ಉಳಿದ ಪಾತ್ರಗಳು ಧ್ವನಿಯ ಮೂಲಕ ಚಿತ್ರಕ್ಕೆ ಜೀವ ತುಂಬಿದೆ. ಕಥೆಯನ್ನು ನಾನೇ ಬರೆದಿದ್ದೇನೆ. ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಈಗ ಟ್ರೈಲರ್ ಹೊರತಂದಿದ್ದೇವೆ. ನಮ್ಮ ಚಿತ್ರದಲ್ಲಿ ನಟಿಸಿರುವ ನಾಯಕಿ ಪ್ರಬುದ್ಧ ಕಲಾವಿದೆ , ಆದರೆ ಪ್ರಚಾರದ ಕಾರ್ಯಕ್ಕೆ ಮಾತ್ರ ಬರುತ್ತಿಲ್ಲ , ಯಾಕೆಂದು ನಮಗೂ ತಿಳಿಯುತ್ತಿಲ್ಲ. ಅವರಿಗೆ ಕೊಡಬೇಕಾದ ಸಂಭಾವನೆ ಪೂರ್ತಿ ಕೊಟ್ಟಾಗಿದೆ. ಏನೇ ಆಗಲಿ ನಮ್ಮ ಚಿತ್ರವನ್ನು ನಾವು ಸಾಧ್ಯವಾದಷ್ಟು ಪ್ರಚಾರ ಮಾಡಿ ತೆರೆ ಮೇಲೆ ತರುತ್ತೇವೆ.
ಈ ಚಿತ್ರವು ಖಂಡಿತ ಮದುವೆಯಾದವರು ನೋಡಲೇ ಬೇಕಾಗಿರುವಂತಹ ಅಂಶವಿದೆ. ಸತಿಪತಿಗಳ ಜಗಳ , ಡೈವರ್ಸ್ ಹಲವು ಸೂಕ್ಷ್ಮ ವಿಚಾರಗಳ ಬಗ್ಗೆ ಈ ಚಿತ್ರದಲ್ಲಿ ಹೇಳಿದ್ದೇನೆ. ಈ ಚಿತ್ರದಲ್ಲಿ ತಾಂತ್ರಿಕವಾಗಿ ನನಗೆ ಬೆನ್ನೆಲುಬಾಗಿ ನನ್ನ ಇಡೀ ತಂಡ ಸಹಕಾರ ನೀಡಿದೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಹಾಗೆ ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಆಲೋಚನೆ ಇದೆ. ನಮ್ಮ ಚಿತ್ರವನ್ನು ದಂಪತಿಗಳು ಬಂದು ನೋಡಿ ತಮ್ಮ ಅಭಿಪ್ರಾಯ ತಿಳಿಸಿ ಎಂದರು.
ಇನ್ನು ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿರುವ
ಸಂಗೀತ ನಿರ್ದೇಶಕ ಅನಂತ್ ಆರ್ಯನ್, ಕಲರಿಸ್ಟ್ ಜೇಕಬ್ ಮ್ಯಾಥ್ಯೂ, ಕಾಸ್ಟ್ಯೂಮ್ ಡಿಸೈನರ್ ಋತು ಚೈತ್ರ, ಕಲಾ ನಿರ್ದೇಶಕ ಕ್ರಿಯೇಟಿವ್ ವಿಜಯ್, ವಿತರಕ ಜೈದೇವ್ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು “ಅಥಿ ಐ ಲವ್ ಯು” ಚಿತ್ರದ ಕುರಿತು ಮಾತನಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚು ಮಾಹಿತಿಯನ್ನು ನೀಡುವುದರ ಜೊತೆಗೆ ಅದ್ದೂರಿಯಾಗಿ ಚಿತ್ರವನ್ನು ತೆರೆ ಮೇಲೆ ತರಲು ತಂಡ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ನೋಡಲೇಬೇಕಾದ “ಅಥಿ ಐ ಲವ್ ಯು” ಟ್ರೇಲರ್ ರಿಲೀಸ್.
ಸಾಮಾನ್ಯವಾಗಿ ಬಿಡುಗಡೆಯಾಗುವ ಬಹುತೇಕ ಚಿತ್ರಗಳು ಮಾಸ್ ಹಾಗೂ ಕ್ಲಾಸ್ ಚಿತ್ರಗಳು ಎಂದು ಹೇಳಲು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಚಿತ್ರ ತಂಡ ಇದು ಪ್ರೀತಿಸುವವರಿಗೆ ಹಾಗೂ ಪ್ರೀತಿಮಾಡಿದವರಿಗೆ ಸೂಕ್ತವಾದ ಚಿತ್ರ ಎನ್ನುತ್ತಾ ಈ ಚಿತ್ರದ ಟ್ರೈಲರ್ ಯನ್ನು ಬಿಡುಗಡೆ ಮಾಡಿದೆ. ಈ ಚಿತ್ರದ ಶೀರ್ಷಿಕೆಯೇ ಚಿತ್ರದ ಒಳ ಹೂರಣವನ್ನು ಹೇಳುವಂತಿದೆ. ಅದುವೇ “ಅಥಿ ಐ ಲವ್ ಯು”. ಈಗಾಗಲೇ ಬಿಡುಗಡೆ ಗೊಂಡಿರುವ ಈ ಟ್ರೈಲರ್ ಬಾರಿ ಸದ್ದನ್ನ ಮಾಡಿದ್ದು , ಈ ಚಿತ್ರತಂಡ ಟ್ರೈಲರ್ ಹಾಗೂ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು. ಚಿತ್ರದ ಕುರಿತು ನಿರ್ಮಾಪಕ ಸೆವೆನ್ ರಾಜ್ ಮಾತನಾಡುತ್ತಾ ನಿರ್ದೇಶಕ ಲೋಕೇಂದ್ರ ಸೂರ್ಯ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡಿದ್ದೇನೆ.
ಇದು ನನ್ನ ನಿರ್ಮಾಣದ ಎರಡನೇ ಚಿತ್ರ ಸತಿಪತಿಯರ ಸಂಬಂಧದ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇನೆ. ಬಿಡುಗಡೆಯ ಸಮಯದಲ್ಲಿ ನೂತನ ಯೋಜನೆ ಹಾಕಿಕೊಂಡಿದ್ದೇನೆ. ಗಂಡ ಟಿಕೆಟ್ ತೆಗೆದುಕೊಂಡರೆ ಹೆಂಡತಿಗೆ ಟಿಕೆಟ್ ಉಚಿತ ಹಾಗೂ ಹೆಂಡತಿ ಟಿಕೆಟ್ ತೆಗೆದುಕೊಂಡರೆ ಗಂಡನಿಗೆ ಉಚಿತ. ಹೀಗೆ ಬಹಳಷ್ಟು ಯೋಚನೆಯನ್ನು ಹಾಕಿಕೊಂಡಿದ್ದೇನೆ. ಚಿತ್ರವನ್ನು ಬಿಡುಗಡೆ ಸಮಯದಲ್ಲಿ ಎಲ್ಲವನ್ನು ತಿಳಿಸುತ್ತೇನೆ. ಸದ್ಯ ಟ್ರೈಲರ್ ಬಿಡುಗಡೆಯಾಗಿದೆ ನನಗೆ ಈ ಚಿತ್ರ ತೃಪ್ತಿ ತಂದಿದೆ. ನನ್ನ ಮುಂದಿನ ಮೂರನೇ ಚಿತ್ರ ನನ್ನ ಜೀವನ ಆಧಾರಿತ ಬಯೋಪಿಕ್ ಮಾಡುವ ಉದ್ದೇಶವಿದೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಎಂದು ನಿರ್ಮಾಪಕರು ತಿಳಿಸಿದರು.
ಇನ್ನು ಈ ಚಿತ್ರದ ನಿರ್ದೇಶಕ ಲೋಕೇಂದ್ರ ಸೂರ್ಯ ಮಾತನಾಡುತ್ತಾ ಈ ಚಿತ್ರದಲ್ಲಿರುವುದು “ಅಥಿ”ಹಾಗೂ “ವಸಂತ್” ಎಂಬ ಎರಡು ಪಾತ್ರಗಳು ಮಾತ್ರ , ಇದು ಒಂದು ದಿನದಲ್ಲಿ ನಡೆಯುವ ಕಥೆ. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡ ದಿನ ರಾತ್ರಿ ವಾಪಸು ಬರುತ್ತಾನೆ. ಒಂದು ದಿನ ಇದಕ್ಕಿದಂತೆ ಗಂಡ ಮಧ್ಯಾಹ್ನ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಏನು ಮಾಡುತ್ತಿರುತ್ತಾಳೆ? ಎಂಬುದನ್ನು ತೆರೆಯ ಮೇಲೆ ನೋಡಬೇಕು. ನಮ್ಮ ಚಿತ್ರವನ್ನು ಮದುವೆಯಾದ ದಂಪತಿಗಳು ಹಾಗೂ ಪ್ರೀತಿ ಮಾಡುತ್ತಿರುವವರು ನೋಡಿ. ಚಿತ್ರದಲ್ಲಿ ಸಮಾಜಕ್ಕೆ ಒಂದೊಳ್ಳೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ. ನಾನು ನಿರ್ದೇಶನದೊಂದಿಗೆ ನಾಯಕನಾಗೂ ಅಭಿನಯಿಸಿದ್ದೇನೆ.
ಸಾತ್ವಿಕ ಈ ಚಿತ್ರದ ನಾಯಕಿ. ಎರಡೇ ಪಾತ್ರಗಳು ಮಾತ್ರ ನಿಮಗೆ ತೆರೆಯ ಮೇಲೆ ಕಾಣುವುದು. ಉಳಿದ ಪಾತ್ರಗಳು ಧ್ವನಿಯ ಮೂಲಕ ಚಿತ್ರಕ್ಕೆ ಜೀವ ತುಂಬಿದೆ. ಕಥೆಯನ್ನು ನಾನೇ ಬರೆದಿದ್ದೇನೆ. ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಈಗ ಟ್ರೈಲರ್ ಹೊರತಂದಿದ್ದೇವೆ. ನಮ್ಮ ಚಿತ್ರದಲ್ಲಿ ನಟಿಸಿರುವ ನಾಯಕಿ ಪ್ರಬುದ್ಧ ಕಲಾವಿದೆ , ಆದರೆ ಪ್ರಚಾರದ ಕಾರ್ಯಕ್ಕೆ ಮಾತ್ರ ಬರುತ್ತಿಲ್ಲ , ಯಾಕೆಂದು ನಮಗೂ ತಿಳಿಯುತ್ತಿಲ್ಲ. ಅವರಿಗೆ ಕೊಡಬೇಕಾದ ಸಂಭಾವನೆ ಪೂರ್ತಿ ಕೊಟ್ಟಾಗಿದೆ. ಏನೇ ಆಗಲಿ ನಮ್ಮ ಚಿತ್ರವನ್ನು ನಾವು ಸಾಧ್ಯವಾದಷ್ಟು ಪ್ರಚಾರ ಮಾಡಿ ತೆರೆ ಮೇಲೆ ತರುತ್ತೇವೆ. ಈ ಚಿತ್ರವು ಖಂಡಿತ ಮದುವೆಯಾದವರು ನೋಡಲೇ ಬೇಕಾಗಿರುವಂತಹ ಅಂಶವಿದೆ. ಸತಿಪತಿಗಳ ಜಗಳ , ಡೈವರ್ಸ್ ಹಲವು ಸೂಕ್ಷ್ಮ ವಿಚಾರಗಳ ಬಗ್ಗೆ ಈ ಚಿತ್ರದಲ್ಲಿ ಹೇಳಿದ್ದೇನೆ. ಈ ಚಿತ್ರದಲ್ಲಿ ತಾಂತ್ರಿಕವಾಗಿ ನನಗೆ ಬೆನ್ನೆಲುಬಾಗಿ ನನ್ನ ಇಡೀ ತಂಡ ಸಹಕಾರ ನೀಡಿದೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಹಾಗೆ ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಆಲೋಚನೆ ಇದೆ. ನಮ್ಮ ಚಿತ್ರವನ್ನು ದಂಪತಿಗಳು ಬಂದು ನೋಡಿ ತಮ್ಮ ಅಭಿಪ್ರಾಯ ತಿಳಿಸಿ ಎಂದರು.
ಇನ್ನು ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿರುವ
ಸಂಗೀತ ನಿರ್ದೇಶಕ ಅನಂತ್ ಆರ್ಯನ್, ಕಲರಿಸ್ಟ್ ಜೇಕಬ್ ಮ್ಯಾಥ್ಯೂ, ಕಾಸ್ಟ್ಯೂಮ್ ಡಿಸೈನರ್ ಋತು ಚೈತ್ರ, ಕಲಾ ನಿರ್ದೇಶಕ ಕ್ರಿಯೇಟಿವ್ ವಿಜಯ್, ವಿತರಕ ಜೈದೇವ್ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು “ಅಥಿ ಐ ಲವ್ ಯು” ಚಿತ್ರದ ಕುರಿತು ಮಾತನಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚು ಮಾಹಿತಿಯನ್ನು ನೀಡುವುದರ ಜೊತೆಗೆ ಅದ್ದೂರಿಯಾಗಿ ಚಿತ್ರವನ್ನು ತೆರೆ ಮೇಲೆ ತರಲು ತಂಡ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.