ಮೊದಲ ವರ್ಷದ ಸಂಭ್ರಮದ ಎಂ.ಎಂ.ಬಿ ಲೆಗಿಸಿಯಲ್ಲಿ “ಮೈ ಮೂವಿ ಬಜಾರ್” ಅವಾರ್ಡ್ ಲೋಗೊ ಲಾಂಚ್
ಇಡೀ ಭಾರತೀಯ ಚಿತ್ರರಂಗದ ಚಟುವಟಿಕೆಗಳನ್ನು ಒಂದು ಒಂದು ಸೂರಿನಡಿ ತರುವ ಮಹತ್ವದ ಉದ್ದೇಶವನ್ನು ಹೊಂದಿರುವ ವ್ಯಕ್ತಿ ನವರಸನ್. ಆ ನಿಟ್ಟಿನಲ್ಲಿ ಹಂತ ಹಂತವಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಕಳೆದ ವರ್ಷ ನವೆಂಬರ್‌ನಲ್ಲಿ ಕನ್ನಡ ಚಿತ್ರನಿರ್ಮಾಪಕರಿಗೆ ಹೊಸ ಆಶಾಕಿರಣ ಎನ್ನುವಂತೆ ಬೆಂಗಳೂರಿನ ಮಾಗಡಿ ರಸ್ತೆಯ ಜಿ.ಟಿ. ಮಾಲ್‌ನ 4ನೇ ಮಹಡಿಯಲ್ಲಿ ಎಂ.ಎಂ.ಬಿ ಲೆಗಸಿ ಎಂಬ ಸುಸರ್ಜಿತ ವೇದಿಕೆ ಆರಂಭಿಸಿದರು.
ಆ ಒಂದು ಸ್ಥಳದಲ್ಲಿ ಚಲನಚಿತ್ರದ ಪತ್ರಿಕಾಗೋಷ್ಠಿ , ಆಡಿಯೋ , ಟ್ರೈಲರ್ ಬಿಡುಗಡೆಯಂಥ ವರ್ಣರಂಜಿತ ಕಾರ್ಯಕ್ರಮಗಳು ನಡೆಯುವುದಕ್ಕೆ ಅನುಕೂಲವನ್ನು ಮಾಡಿಕೊಡಲಾಯಿತು. ಇದೀಗ ನಿರ್ಮಾಪಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವ ‘ಎಂ.ಎಂ.ಬಿ ಲೆಗಸಿ’ ಗೆ ಒಂದು ವರ್ಷದ ಸಂಭ್ರಮ.
ಈ ಸಂಭ್ರಮದ ಕಾರ್ಯಕ್ರಮವನ್ನು ನವರಸನ್ ಅವರು ಇತ್ತೀಚೆಗೆ ಮಾಧ್ಯಮ ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದರು. ಸಿನಿಮಾ ಕಾರ್ಯಕ್ರಮಗಳಿಗಾಗಿಯೇ ಆಧುನಿಕ ತಂತ್ರಜ್ಞಾನದ ಸೌಂಡ್, ವಿಶ್ಯುಯಲ್ ಎಫೆಕ್ಟ್ ನಂಥ ಟೆಕ್ನಾಲಜಿ ಅಳವಡಿಸಿಕೊಂಡಿರುವ ಈ ಸ್ಥಳದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾ ಪ್ರೆಸ್ ಮಿಟ್ ಹಾಗೂ ಇವೆಂಟ್‌ಗಳು ನಡೆದಿವೆ.
ಕನ್ನಡ ಚಿತ್ರರಂಗದ ಲಕ್ಕಿ ಸ್ಥಳವಾಗಿ, ನಿರ್ಮಾಪಕ ಸ್ನೇಹಿ ಬಜೆಟ್ ನಲ್ಲಿ ಸ್ಟಾರ್ ಹೋಟೆಲ್ ಲೆವೆಲ್ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದಾಗಿದೆ. ಲೆಗಸಿ ಎಂದರೆ ಕನ್ನಡದಲ್ಲಿ ಪರಂಪರೆ ಎಂಬ ಅರ್ಥ ಬರುತ್ತದೆ. ಅದರಂತೆ ಇಂದು ಕನ್ನಡ ಸಿನಿಮಾಗಳ ಅಭಿವೃದ್ಧಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಎಂ.ಎಂ.ಬಿ ಲೆಗೆಸಿ ಮುಂಚೂಣಿಯಲ್ಲಿದೆ ಎನ್ನಬಹುದು.
ಈ ಒಂದು ಎಂ.ಎಂ. ಬಿ. ಲಗಸಿಯ ಬಗ್ಗೆ ಮುಖ್ಯಸ್ಥ ನವರಸನ್ ಮಾತನಾಡುತ್ತಾ ಇದೀಗ ಒಂದು ವರ್ಷವನ್ನು ಯಸಸ್ವಿಯಾಗಿ ಪುರೈಸಿದ್ದು, ಈ ಯಶಸ್ಸಿನ ಹಿಂದೆ ಚಿತ್ರರಂಗ ಹಾಗೂ ಮಾದ್ಯಮಗಳ ಸಹಕಾರ ತುಂಬಾನೇ ಇದೆ. ಇಂಡಿಯನ್ ಸಿನಿಮಾನ ಒಂದು ಸಿಂಗಲ್ ಬಟನ್‌ನಲ್ಲಿ ತರುವುದು ನಮ್ಮ ಗುರಿಯಾಗಿದೆ. ಆ ವೇದಿಕೆಗಾಗಿ ಈ ಎಂ.ಎಂ.ಬಿ ಲೆಗಸಿಯನ್ನು ಶುರು ಮಾಡಿದೆ.
ಇದೀಗ “ಮೈ ಮೂವಿ ಬಜಾರ್ ಅವಾರ್ಡ್” ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸುತ್ತಿದ್ದೇವೆ. ಈ ಅವಾರ್ಡ್ ಕಾರ್ಯಕ್ರಮದ ಲೋಗೋವನ್ನು ಇಂದು ಸೆಲಬ್ರಟಿಗಳ ಕೈಲಿ ಲಾಂಚ್ ಮಾಡಿಸಲಾಗುತ್ತಿದೆ ಎಂದರು. ನಂತರ ಮೈ ಮೂವಿ ಬಜಾರ್ ಅವಾರ್ಡ್ ಬಗ್ಗೆ ಮಾಹಿತಿ ನೀಡಿದ ನವರಸನ್ ಈ ಅವಾರ್ಡ್ ಕಾರ್ಯಕ್ರಮವು ಡಿಸೆಂಬರ್ 16 ರಂದು ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ವರ್ಷ ನಾವು ಚಿತ್ರರಂಗದಲ್ಲಿ 40 ರಿಂದ 60 ವರ್ಷಗಳವರೆಗೆ ತೆರೆಯ ಹಿಂದೆ ಮುಂದೆ ಕೆಲಸ ಮಾಡಿದ, ಕಾರ್ಮಿಕರಿಗೆ, ತಂತ್ರಜ್ಞರಿಗೆ ನೀಡಲಿದ್ದೇವೆ. ಈ ಪ್ರಶಸ್ತಿಗಳನ್ನು ಹಿರಿಯರಿಗೆ ಕಿರಿಯರು ಕೊಡಬೇಕು ಎಂಬುದು ನಮ್ಮ ಆಶಯವಾಗಿರುತ್ತದೆ. ಮುಖ್ಯವಾಗಿ ಹಿರಿಯರನ್ನು ಗೌರವಿಸುವುದು ನಮ್ಮ ಉದೇಶವಾಗಿದೆ. ಸಿನಿಮಾ ಪೋಸ್ಟರ್ ಅಂಟಿಸುವವರಿಂದ ಹಿಡಿದು ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ ಹಿರಿಯರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಇನ್ನು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ
ನಟರಾದ ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ , ನಟಿಯರಾದ ಸಂಜನಾ ಆನಂದ್ ಹಾಗೂ ಅಪೂರ್ವ ‘ಮೈ ಮೂವಿ ಬಜಾರ್’ ಪ್ರಶಸ್ತಿಯ ಲೋಗೊ ಲಾಂಚ್ ಮಾಡಿ, ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಎಂ.ರಮೇಶ್ ರೆಡ್ಡಿ , ಟಿ.ಆರ್. ಚಂದ್ರಶೇಖರ್, ಚೇತನ ಗೌಡ, ಜಗದೀಶ್, ಗೋವಿಂದ್ ರಾಜ್, ಕೃಷ್ಣ ಸಾರ್ಥಕ್, ನಿರ್ದೇಶಕರಾದ ಹರಿ ಸಂತು, ಮಹೇಶ್ ಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಮಾಜಿ ಅಧ್ಯಕ್ಷ ಬಾ.ಮ ಹರೀಶ್, ಬಾ.ಮ ಗಿರೀಶ್, ಕೆ.ವಿ .ಚಂದ್ರಶೇಖರ್, ಗಿರೀಶ್ ಕುಮಾರ್ ಮುಂತಾದವರು ನವರಸನ್ ಅವರ ಈ ಸಾಹಸದ ಕೆಲಸವನ್ನು ಮೆಚ್ಚಿ ಮಾತನಾಡುತ್ತ ಕನ್ನಡ ಚಿತ್ರರಂಗ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಶುಭ ಹಾರೈಸಿದರು.
ಒಟ್ಟಿನಲ್ಲಿ ಚಿತ್ರರಂಗಕ್ಕೆ ಅನುಕೂಲವಾಗುವಂತ ಕೆಲಸಕ್ಕೆ ಮುಂದಾಗಿರುವ ನವರಸನ್ ಧೈರ್ಯವನ್ನು ಮೆಚ್ಚುವಂಥದ್ದು, ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿರುವ ಇವರ ಹಾದಿಗೆ ಯಶಸ್ಸು ಸಿಗಲಿ.