Cini NewsSandalwood

ಲೀಲಾವತಿ ಅಮ್ಮನಿಗೆ ರಾಜಕೀಯ ಹಾಗೂ ಸಿನಿಮಾ ಗಣ್ಯರಿಂದ ಅಂತಿಮ ನಮನ

ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿಕೊಂಡಿತು. ಬಹುಭಾಷಾ ನಟಿ ಲೀಲಾವತಿ(86) ವಯೋ ಸಹಜ ಕಾಯಿಲೆಯಿಂದ ಇರಲೋಕವನ್ನು ತ್ಯಜಿಸಿದರು. ಇಂದು ಲೀಲಾವತಿ ರವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಕಲ ವ್ಯವಸ್ಥೆಯನ್ನು ಮಾಡಿದ್ದು , ಇಂದು ಸಂಜೆ ಸೋಲದೇವನಹಳ್ಳಿಯಲ್ಲಿರುವ ಅವರ ತೋಟದ ಮನೆಯ ಆವರಣದಲ್ಲಿ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ ಎಂದು ಅವರ ಪುತ್ರ ವಿನೋದ್ ರಾಜಕುಮಾರ್ ಮಾಹಿತಿಯನ್ನು ನೀಡಿದ್ದಾರೆ.

Image

ಈ ಹಿರಿಯ ನಟಿಯ ಅಂತಿಮ ದರ್ಶನವನ್ನು ಪಡೆಯಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ , ಡಿ.ಸಿ.ಎಂ ಡಿ.ಕೆ ಶಿವಕುಮಾರ್ , ಹಿರಿಯ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ಹಿರಿಯ ನಾಯಕ ವಾಟಳ್ ನಾಗರಾಜ್ , ಸೋಮಣ್ಣ ಸೇರಿದಂತೆ ಹಲವಾರು ರಾಜಕೀಯ ನಾಯಕರು ಹಾಗೂ ಹಿರಿಯ ಕಲಾವಿದರಾದ ದ್ವಾರ್ಕೀಶ್ , ಶ್ರೀನಾಥ್ , ಶ್ರೀನಿವಾಸ್ ಮೂರ್ತಿ, ಉಮಾಶ್ರೀ , ಪೂಜಾ ಗಾಂಧಿ, ಶಿವರಾಜ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ, ಶೃತಿ ಸೇರಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು , ಪದಾಧಿಕಾರಿಗಳು , ನಿರ್ದೇಶಕರ ಸಂಘ , ನಿರ್ಮಾಪಕರ ಸಂಘ , ಕಲಾವಿದರ ಸಂಘ , ಸಿನಿಮಾ ಪತ್ರಕರ್ತರ ಸಂಘ , ಒಕ್ಕೂಟದ ಹಲವರು ಆಗಮಿಸಿ ಲೀಲಾವತಿ ಅಮ್ಮನವರ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿಕೊಂಡರು.

ಕನ್ನಡ ರಂಗಭೂಮಿ , ಚಿತ್ರರಂಗದ ನಟಿ, ನಿರ್ಮಾಪಕಯಾಗಿ ಚಿತ್ರೋದ್ಯಮದ ಮಂದಿಯೊಂದಿಗೆ ಬಹಳ ಸ್ನೇಹ , ಸರಳ ಜೀವಿಯಾಗಿ ಸಾಗಿ ಬಂದ ಲೀಲಾವತಿ ರವರು ಜನರಿಗೆ ಸ್ಪಂದಿಸುವ ಕೆಲಸವನ್ನು ಮಾಡಿ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ನಂದಾದೀಪ ಹಿರಿಯ ನಟಿ ಲೀಲಾವತಿ ರವರನ್ನ ನೋಡಲು ಅಭಿಮಾನಿಗಳು , ಜನಸಾಮಾನ್ಯರು ಆಗಮಿಸಿ ಅಂತಿಮ ನಮನವನ್ನು ಸಲ್ಲಿಸಿದರು.

Image

error: Content is protected !!