ಮಲ್ಟಿ ಟ್ವಿಸ್ಟ್ ಲವ್ ಸ್ಟೋರಿ ಒಂದು ಸರಳ ಪ್ರೇಮಕಥೆ (ಚಿತ್ರವಿಮರ್ಶೆ – ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಒಂದು ಸರಳ ಪ್ರೇಮಕಥೆ
ನಿರ್ದೇಶಕ : ಸಿಂಪಲ್ ಸುನಿ
ನಿರ್ಮಾಪಕ : ಮೈಸೂರು ರಮೇಶ್
ಸಂಗೀತ : ವೀರ್ ಸಮರ್ಥ್
ಛಾಯಾಗ್ರಾಹಕ : ಕಾರ್ತಿಕ್
ತಾರಾಗಣ : ವಿನಯ್ ರಾಜ್ ಕುಮಾರ್ , ಮಲ್ಲಿಕಾ ಸಿಂಗ್ , ಸ್ವಾತಿಷ್ಠ ಕೃಷ್ಣನ್ , ರಾಜೇಶ್ ನಟರಂಗ, ರಾಘವೇಂದ್ರ ರಾಜ್ ಕುಮಾರ್, ಅರುಣಾ ಬಾಲರಾಜ್, ಸಾಧುಕೋಕಿಲ ಹಾಗೂ ಮುಂತಾದವರು…
ಸಾಮಾನ್ಯವಾಗಿ ಹೇಳುವಂತೆ ಪ್ರೀತಿ ಕುರುಡು , ಪ್ರೀತಿಗೆ ಸಾವಿಲ್ಲ , ಪ್ರೀತಿ ಅಜರಾಮರ ಎನ್ನುವ ಹಾಗೆ ಆಸೆ , ಆಸಕ್ತಿ ಇದ್ದರೆ ನಾವು ಬಯಸಿದ್ದು ಸಿಗುತ್ತದೆ ಎನ್ನುವ ಮಾತಿದೆ. ಅಂತಹದ್ದೇ ಒಂದು ಕಥಾನಕ ಮೂಲಕ ಕುಟುಂಬಗಳ ಭಾಂದವ್ಯ , ಗೆಳೆತನ , ಪ್ರೀತಿ , ತ್ಯಾಗದ ಜೊತೆಗೆ ಸಂಗೀತದ ಶಕ್ತಿಯ ಅನಾವರಣದ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರವೇ “ಒಂದು ಸರಳ ಪ್ರೇಮಕಥೆ”.
ಕಥಾ ನಾಯಕ ಅತಿಶಯ (ವಿನಯ್ ರಾಜ್ ಕುಮಾರ್) ತನ್ನದೇ ಒಂದು ಕನಸಿನ ಲೋಕ , ಅದರಲ್ಲೂ ಸಂಗೀತ ಅವನ ಜೀವನ. ತನಿಷ್ಠದಂತೆ ಸಾಧುಕೋಕಿಲ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸೌಂಡ್ ಇಂಜಿನಿಯರಿಂಗ್ ಕೆಲಸ. ಮನೆಯಲ್ಲಿ ತಂದೆ , ತಾಯಿ , ಅಜ್ಜಿ , ಅಣ್ಣ , ಅತ್ತಿಗೆ, ಮಕ್ಕಳು ಎಲ್ಲರ ಇದ್ದರೂ ಯಾರ ಬಗೆಯು ತಲೆಕೆಡಿಸಿ ಕೊಳ್ಳೋದು ಹುಡುಗ , ಅದೇ ಮನೆಯಲ್ಲಿ ಅವರೊಟ್ಟಿಗೆ ವಾಸವಿರುವ ಮತ್ತೊಂದು ಕುಟುಂಬ ನಾಯಕಿ ಅನುರಾಗ ( ಸ್ವಾತಿಷ್ಠ ಕೃಷ್ಣನ್) ಹಾಗೂ ಅವಳ ತಾಯಿ.
ಅದಕ್ಕೂ ಒಂದು ದೊಡ್ಡ ಹಿನ್ನೆಲೆ ಇದೆ. ಅತಿಶಯಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಹಾಗೂ ತನ್ನ ಮನಸ್ಸಿಗೆ ಒಪ್ಪುವಂತಹ ಹುಡುಗಿಯ ಜೊತೆ ಬದುಕು.ಇನ್ನು ಅದೇ ಮನೆಯಲ್ಲಿರುವ ಅನುರಾಗ ನ್ಯೂಸ್ ಚಾನೆಲ್ ಒಂದರ ರಿಪೋರ್ಟರ್ , ರಾಜಕೀಯದ ಕರ್ಮಕಾಂಡವನ್ನು ಸ್ಟ್ರಿಂಗ್ ಆಪರೇಷನ್ ಮೂಲಕ ಸತ್ಯವನ್ನು ಹೊರಹಾಕಲು ಮುಂದಾಗುವ ದಿಟ್ಟ ಹುಡುಗಿ ಒಂದು ಅನಾಹುತದಿಂದ ಪಾರಾಗಿ ಬಂದಿರುತ್ತಾಳೆ. ಆದರೆ ಮನೆಯಲ್ಲಿ ಇವರಿಬ್ಬರದು ಕೋಲ್ಡ್ ವಾರ್. ಇನ್ನು ನಾಯಕನ ಮನಸ್ಸಿನಲ್ಲಿ ಸದಾ ಕಾಡುವಂತಹ ಒಂದು ಹಾಡು , ಅಚಾನಕ್ಕಾಗಿ ಒಮ್ಮೆ ಕೇಳುವ ಆ ಧ್ವನಿ ಅವನ ಮನಸ್ಸನ್ನು ಸೆಳೆಯುತ್ತದೆ.
ಆಕೆಯನ್ನ ಹುಡುಕುತ್ತಾ ಹೋದಾಗ ಕಾಣುವ ಮುದ್ದಾದ ಬೆಡಗಿ ಮಧುರ ( ಮಲ್ಲಿಕಾ ಸಿಂಗ್). ಸಾಧು ಕೋಕಿಲ ಅಂಡ್ ಟೀಮ್ ರವರ ರಿಯಾಲಿಟಿ ಶೋ ಆಡಿಷನ್ ಗೆ ಬರುವ ಮಧುರ ಪಾರ್ಟಿ ಒಂದರಲ್ಲಿ ಅತಿಶಯಗೆ ಕಾಣುತ್ತಾಳೆ. ಆಕೆಯ ಸ್ನೇಹ , ಸಂಪರ್ಕ ಪಡೆಯಲು ಗೆಳೆಯರೊಟ್ಟಿಗೆ ಒಂದು ಪ್ಲಾನ್ ಮಾಡುತ್ತಾನೆ. ಆಕೆಗೆ ಹಾಡಲು ಅವಕಾಶ ನೀಡುವುದರ ಜೊತೆಗೆ ತನ್ನ ಪ್ರೀತಿಯ ನಿವೇದನೆ ಹೇಳಲು ಚಡಪಡಿಸುತ್ತಾನೆ.
ಇದೇ ಸಂದರ್ಭದಲ್ಲಿ ನಾಯಕನ ಅಜ್ಜಿಗೆ ಆನಾರೋಗ್ಯದ ಕಾರಣ ಒಂದೇ ಮನೆಯಲ್ಲಿ ವಾಸವಿರುವ ಅತಿಶಯ ಹಾಗೂ ಅನುರಾಗ ಗೆ ಬೇರೆಯದೆ ಕಾರಣ ಹೇಳಿ ಹಾಸ್ಪಿಟಲ್ ನಲ್ಲಿ ಮದುವೆ ಮಾಡಿಸುತ್ತಾರೆ. ಆದರೆ ಈ ಮದುವೆ ಇವರಿಬ್ಬರಿಗೂ ಇಷ್ಟವಿಲ್ಲ. ಇಬ್ಬರು ಡೈವರ್ಸ್ ಪಡೆಯಲು ನಿರ್ಧರಿಸಿ , ಈಗಾಗಲೇ ಪ್ರೀತಿಸುತ್ತಿರುವವರು ಮದುವೆಯಾಗಲು ನಿರ್ಧರಿಸುತ್ತಾರೆ. ಇಲ್ಲಿಂದ ಚಿತ್ರದ ಓಟ ಮತ್ತೊಂದು ಟ್ವಿಸ್ಟ್ ಪಡೆದುಕೊಳ್ಳುತ್ತದೆ.
ಪ್ರೀತಿಸಿದವರು ಸಿಕ್ತಾರಾ…
ಇವರಿಗೆ ಡೈವರ್ಸ್ ಸಿಗುತ್ತಾ…
ಎದುರಾಗುವ ತಿರುವುಗಳು ಏನು…
ಸಂಗೀತದ ಕನಸು ಏನಾಗುತ್ತೆ…
ಕ್ಲೈಮ್ಯಾಕ್ಸ್ ಏನು ಅನ್ನೋದನ್ನ ನೋಡಬೇಕಾದರೆ ಈ ಚಿತ್ರವನ್ನು ನೋಡಲೇಬೇಕು.
ಇನ್ನೂ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಆಯ್ಕೆ ಮಾಡಿಕೊಂಡಿರುವ ಕಥೆಗೆ ವಿಭಿನ್ನವಾಗಿ ಚಿತ್ರಕಥೆ , ಸಂಭಾಷಣೆ ಬೆಸೆದು ತೆರೆಯ ಮೇಲೆ ತಂದಿದ್ದಾರೆ. ಒಂದು ಸಂಗೀತಕ್ಕಿರುವ ಶಕ್ತಿ , ಕುಟುಂಬಗಳ ಒಡನಾಟ , ಪ್ರೀತಿಗಿರುವ ಸೆಳೆತ , ಹೀಗೆ ಒಂದಷ್ಟು ಅಂಶಗಳ ಮೂಲಕ ಗಮನ ಸೆಳೆಯುತ್ತಾರೆ. ಇಂಟರ್ವಲ್ ಭಾಗ ಕುತೂಹಲವನ್ನ ಮೂಡಿಸಿದರೆ. ಕ್ಲೈಮ್ಯಾಕ್ಸ್ ತಿರುವುಗಳ ರೋಚಕತೆ ಎದ್ದು ಕಾಣುತ್ತದೆ. ಆದರೆ ಚಿತ್ರದ ಓಟ ಇನ್ನಷ್ಟು ಕಡಿತ ಮಾಡಬಹುದಿತ್ತು.
ವೀರ್ ಸಮರ್ಥ್ ರವರ ಸಂಗೀತ ಈ ಚಿತ್ರದ ಪ್ರೆಸ್ ಪಾಯಿಂಟ್ ಎನ್ನುವಂತಿದೆ. ಅದೇ ರೀತಿ ಛಾಯಾಗ್ರಾಹಕ ಕಾರ್ತಿಕ್ ಕೈಚಳಕ ಸೊಗಸಾಗಿದೆ. ಇನ್ನು ನಾಯಕನಾಗಿ ಕಾಣಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಬಹಳ ಸರಳವಾಗಿ ಪಾತ್ರಕ್ಕೆ ಜೀವ ಕೊಟ್ಟಿದ್ದಾರೆ. ಹಾಗೆಯೇ ಡೈಲಾಗ್ ಮತ್ತು ಹವಾ ಭಾವ ಉತ್ತಮವಾಗಿದೆ. ಇನ್ನು ನಾಯಕಿಯರಾಗಿ ಅಭಿನಯಿಸಿರುವ ಸ್ವಾತಿಷ್ಠ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ.
ವಿಶೇಷ ಪಾತ್ರ ಒಂದರಲ್ಲಿ ಮಗನ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಕೂಡ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಬಂದು ನೋಡುವಂತ ಚಿತ್ರ ಇದಾಗಿದೆ.