‘ಮಂಡ್ಯ ಹೈದ’ನ ಹಳ್ಳಿ ಸೊಗಡಿನ ಗೆಳೆತನ, ಪ್ರೀತಿಯ ಕಲರವ(ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಮಂಡ್ಯ ಹೈದ
ನಿರ್ದೇಶಕ : ಶ್ರೀಕಾಂತ್
ನಿರ್ಮಾಪಕ : ಚಂದ್ರಶೇಖರ್
ಸಂಗೀತ : ಸುರೇಂದ್ರನಾಥ್
ಛಾಯಾಗ್ರಾಹಕ : ಮನುಗೌಡ
ತಾರಾಗಣ : ಅಭಯ್ , ಭೂಮಿಕಾ , ಬಲ ರಾಜವಾಡಿ, ವಿಷ್ಣು , ಚಂದ್ರಶೇಖರ್, ಕಾಮಿಡಿ ಕಿಲಾಡಿ ಪ್ರತಿಭೆಗಳು ಹಾಗೂ ಮುಂತಾದವರು…
ಗ್ರಾಮೀಣ ಭಾಗದ ಜೀವನ ಶೈಲಿ , ಪಡ್ಡೆ ಹೈಕ್ಳುಗಳ ಕೀಟಲೆ , ತುಂಟಾಟ , ಲವ್ ಫೇಲ್ಯೂರ್ ಗ್ಯಾಂಗ್ , ಫ್ರೆಂಡ್ ಶಿಪ್ ನ ತಾಕತ್ತು , ಪ್ರೀತಿಯ ಸೆಳೆತ , ತಂದೆ ತಾಯಿಯ ಜವಾಬ್ದಾರಿ ಸೇರಿದಂತೆ ಒಂದಷ್ಟು ವಿಚಾರಗಳ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಹಳ್ಳಿ ಸೊಗಡಿನ ಚಿತ್ರ “ಮಂಡ್ಯ ಹೈದ”. ಮಂಡ್ಯದ ಗತ್ತು ಎಲ್ರಿಗೂ ಗೊತ್ತು… ಅನ್ನೋ ಹಾಗೆ, ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂತ ಚಿತ್ರದ ಕಟೌಟ್ ಹಾಕುವ ವಿಚಾರದಲ್ಲಿ ಎರಡು ಹುಡುಗರ ಗುಂಪಿನ ನಡುವೆ ನಡೆಯುವ ಗಲಾಟೆಯಲ್ಲಿ ನಾಯಕ ಶಿವು ( ಅಭಯ್ ) ಎಂಟ್ರಿ ಕೊಟ್ಟು ತನ್ನ ಗೆಳೆಯರನ್ನ ಕಾಪಾಡಿಕೊಂಡು ಎದುರಾಳಿಗೆ ತಕ್ಕ ಪಾಠ ಕಲಿಸುತ್ತಾನೆ.
ತನ್ನ ಮೂರು ಗೆಳೆಯರೇ ಎಲ್ಲಾ ಎನ್ನುತ್ತಾ , ಊರಿನಲ್ಲಿ ತಮ್ಮ ಇಷ್ಟದಂತೆ ಅಡ್ಡಾಡಿಕೊಂಡು ಪ್ರೀತಿ ಮಾಡುವವರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನ ಇಕ್ಕಟ್ಟಿಗೆ ಸಲ್ಲಿಸುವುದೇ ಇವರ ಕಾಯಕ ವಾಗಿರುತ್ತದೆ. ಅದಕ್ಕೂ ಒಂದು ಬಲವಾದ ಕಾರಣ ಇರುತ್ತೆ. ಈ ನಾಲ್ವರು ಗೆಳೆಯರ ಕ್ವಾಟಲೆ , ತರ್ಲೆಗೆ ಅವತಾರ್ ಎನ್ನುವ ಪ್ರೇಮಿಯೂ ಕೂಡ ಸಮಸ್ಯೆ ಎದುರಿಸುತ್ತಾನೆ. ಇದರ ನಡುವೆ ಊರಿನ ಗೌಡರು ಯಾವುದೇ ಸಮಸ್ಯೆ ಬಂದರೂ ಮುಂದೆ ನಿಂತು ಬಗೆಹರಿಸುತ್ತಾರೆ.
ಒಮ್ಮೆ ಅವರ ಮುದ್ದಿನ ಮಗಳು ಪ್ರಿಯಾ (ಭೂಮಿಕಾ) ತನ್ನ ಗೆಳತಿಯ ಪ್ರೀತಿಯ ವಿಚಾರಕ್ಕೆ ಸಹಾಯ ಮಾಡುವಂತೆ ಶಿವು ಮತ್ತು ಗ್ಯಾಂಗ್ ಬಳಿ ಸಹಾಯ ಪಡೆಯುತ್ತಾಳೆ. ಊರು ಬಿಟ್ಟು ಹೋಗುವ ಜೋಡಿಗೆ ಸಹಾಯ ಮಾಡಲು ಶಿವು ಹಾಗೂ ಪ್ರಿಯಾ ಇಬ್ಬರೂ ಸಿಟಿಗೆ ಹೋಗುತ್ತಾರೆ. ಇವರು ಪ್ರೀತಿಸಿ ಊರು ಬಿಟ್ಟು ಹೋಗಿದ್ದಾರೆ ಎಂದು ಊರೆಲ್ಲಾ ಸುದ್ದಿ ಹರಡುತ್ತದೆ. ಇದು ಗೌಡರ ವರ್ಚಸ್ಗು ಎಡವಟ್ಟಾಗುತ್ತದೆ.
ಶಿವು ಗೆಳೆಯರಿಗೂ ಕೂಡ ಕಸಿವಿಸಿ ಆಗುತ್ತದೆ. ವಿರೋಧಿ ತಂಡವು ಕೂಡ ಶಿವು ಗೆಳೆಯರನ್ನ ಅವಮಾನಿಸುತ್ತಾರೆ. ಈ ವಿಚಾರವಾಗಿ ಗೆಳೆಯರು ಏನಾದರೂ ಮಾಡಬೇಕು ಎನ್ನುವಷ್ಟರಲ್ಲಿ ನಾಯಕ , ನಾಯಕಿ ಇಬ್ಬರು ಊರಿಗೆ ಬರುತ್ತಾರೆ. ಮುಂದೆ ಎದುರಾಗುವ ಕೆಲವು ಘಟನೆ ವಿಭಿನ್ನ ಕ್ಲೈಮಾಕ್ಸ್ ಅಂತಕ್ಕೆ ಹಂತಕ್ಕೆ ತಲುಪುತ್ತದೆ.
ಇಬ್ಬರು ಮದುವೆ ಆಗ್ತಾರಾ…
ಗೆಳೆಯರ ಪಾಡು ಏನು…
ಓಡಿ ಹೋದವರು ಸಿಕ್ತಾರಾ…
ಕ್ಲೈಮಾಕ್ಸ್ ಉತ್ತರ ಏನು…
ಈ ಎಲ್ಲಾ ವಿಚಾರಕ್ಕಾಗಿ ನೀವು ಮಂಡ್ಯ ಹೈದ ಚಿತ್ರ ನೋಡಬೇಕು.
ಯುವ ನಿರ್ದೇಶಿಕ ವಿ. ಶ್ರೀಕಾಂತ್ ಹಳ್ಳಿ ಸೊಗಡಿನ ಕಥಾನಕ ಮೂಲಕ ನಂಬಿಕೆ , ಸ್ನೇಹ , ಪ್ರೀತಿಯ , ಸಂಬಂಧಗಳ ಮಹತ್ವ , ರಕ್ಷಿಸಿಕೊಳ್ಳಲು ಸಾಹಸಕ್ಕೂ ಎನ್ನುವಂತಹ ಗೆಳೆತನದ ಬೆಸುಗೆಯನ್ನು ತರುವ ಪ್ರಯತ್ನ ಮಾಡಿದ್ದಾರೆ. ಹೊಸತನ ಇಲ್ಲದಿದ್ದರೂ ಯುವ ಪ್ರತಿಭೆಗಳಿಂದ ಉತ್ತಮ ಕೆಲಸವನ್ನು ತೆಗೆಸಿದ್ದಾರೆ. ಚಿತ್ರಕಥೆಯ ವೇಗ ಮತ್ತಷ್ಟು ಬಿಗಿ ಮಾಡಬಹುದಿತ್ತು. ಯುವ ಮನಸುಗಳ ತಲ್ಲಣ , ಗೆಳೆಯರ ಸ್ನೇಹ ಗಮನ ಸೆಳೆಯುತ್ತದೆ.
ಮಗನ ಸಿನಿ ಭವಿಷ್ಯಕ್ಕಾಗಿ ಚಿತ್ರ ನಿರ್ಮಿಸಿರುವ ನಿರ್ಮಾಪಕ ಚಂದ್ರಶೇಖರ್ ಕೂಡ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಸುರೇಂದ್ರನಾಥ್ ಸಂಗೀತ ಹೈಲೆಟ್ ಆಗಿದ್ದು , ಮನು ಗೌಡ ಕ್ಯಾಮೆರಾ ವರ್ಕ್ ಕೂಡ ಉತ್ತಮವಾಗಿ ಮೂಡಿ ಬಂದಿದೆ. ಅದೇ ರೀತಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಕೂಡ ಭರ್ಜರಿಯಾಗಿದೆ.
ಇನ್ನು ಗೆಳೆಯರ ಒಡನಾಟ , ಸ್ನೇಹ , ಪ್ರೀತಿ , ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಂಡ್ಯದ ಯುವಕನೊಬ್ಬ ಹೇಗೆ ಹೋರಾಡುತ್ತಾನೆ , ಏನೇನೆಲ್ಲ ಸಾಹಸ ಮಾಡುತ್ತಾನೆ ಎನ್ನುವ ಪಾತ್ರಕ್ಕೆ ನ್ಯಾಯ ನೀಡುವ ನಿಟ್ಟಿನಲ್ಲಿ ಯುವ ನಟ ಅಭಯ್ ಚಂದ್ರಶೇಖರ್ ಬಹಳ ಶ್ರಮ ಪಟ್ಟಿದ್ದಾರೆ. ಈ ಚಿತ್ರದಲ್ಲಿ ಮತ್ತಷ್ಟು ಪರಿಪಕ್ವತೆ ಕಾಣುತ್ತಾದೆ. ಆಕ್ಷನ್ ಗೂ ಸೈ.. ರೋಮ್ಯಾನ್ಸ್ ಗೂ ಜೈ.. ಎಂದಿದ್ದಾರೆ.
ಇನ್ನು ಹಳ್ಳಿಯ ಪಕ್ಕಾ ಹುಡುಗಿಯಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ ಭೂಮಿಕಾ ಭೂಮೇಶ್ಗೌಡ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಇನ್ನು ನಾಯಕಿಯ ತಂದೆಯಾಗಿ ನಟಿಸಿರುವ ಬಾಲ ರಾಜವಾಡಿ, ಗೆಳೆಯರಾಗಿ ಅಭಿನಯಿಸಿರುವ ಮನೋಹರ್ ಗೌಡ , ಚಿದಂಬರ ಪೂಜಾರಿ , ಪ್ರವೀಣ್ ಜೈನ್ ಹಾಗೂ ವಿಲನ್ ಪಾತ್ರಧಾರಿ ವಿಷ್ಣು ಸೇರಿದಂತೆ ಕಾಮಿಡಿ ಕಿಲಾಡಿ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನ ನಡುವೆ ಪ್ರೀತಿ ಹಾಗೂ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಬಂದಾಗ ಏನಾಗುತ್ತೆ ಎಂಬುವುದನ್ನು ತೆರೆಯ ಮೇಲೆ ತಂದಿರುವ ಈ ಮಂಡ್ಯ ಹೈದ ಚಿತ್ರವನ್ನು ಒಮ್ಮೆ ನೋಡುವಂತಿದೆ.