Cini NewsSandalwood

ಬೆಳಕಿನತ್ತ ದರ್ಶನ… ಡಿ ಬಾಸ್ ಅಭಿಮಾನಿಗಳಲ್ಲಿ ಸಂಭ್ರಮ.

‘ಕಾಲಾಯ ತಸ್ಮೈ ನಮಃ’ ಎನ್ನುವಂತೆ ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ. ಸರಿಸುಮಾರು 131 ದಿನಗಳ ಸೆರೆವಾಸದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಕೋರ್ಟ್‌ ದರ್ಶನ್‌ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು , ದರ್ಶನ್ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಈ ಜಾಮೀನನ್ನ ನೀಡಿದೆ.

ಸುಮಾರು ತಿಂಗಳುಗ ಳಿಂದ ಜೈಲಿನಲ್ಲಿದ್ದ ದರ್ಶನ್‌ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದು ಡಿ ಬಾಸ್ ಅಭಿಮಾನಿಗಳಿಗೆ ದೀಪಾವಳಿಯ ಹಬ್ಬಕ್ಕೆ ಸಿಕ್ಕ ದೊಡ್ಡ ಉಡುಗೊರೆಯಾಗಿ ಸಂಭ್ರಮಿಸುತ್ತಿದ್ದಾರೆ.

ಬಳ್ಳಾರಿ ಜೈಲ್ಯಿಂದ ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿದೆ. ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್, ತಮ್ಮ ಕಾರಿನಲ್ಲಿ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಹೊರಟಿದ್ದು , ಬಳ್ಳಾರಿಯ ದಾರಿ ಉದ್ದಕ್ಕೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೋಡಲು ಮುಗಿಬಿದಿದ್ದಾರೆ.

ಪೊಲೀಸ್ ವಾಹನದ ಸೆಕ್ಯೂರಿಟಿಯ ಜೊತೆಗೆ ಸಾಗುತ್ತಿರುವ ದರ್ಶನ್ ಕಾರ್ ಅನ್ನು ಹಿಂಬಾಲಿಸುತ್ತಾ ಕಾರ್ ಹಾಗೂ ಬೈಕ್ಗಳಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ತಮ್ಮ ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳಲ್ಲಿ ಇರುವ ಕಾತುರ ಎಷ್ಟಿದೆ ಎಂದು ತಿಳಿಯುತ್ತದೆ.

ಇನ್ನು ಮಧ್ಯಾಂತರ ಜಾಮೀನು ಮಂಜೂರು ಮಾಡಲು ಕೋರ್ಟ್​ 8 ಷರತ್ತುಗಳನ್ನ ವಿಧಿಸಿದೆ.
1. ಎರಡು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್.
2. ⁠ ಇಬ್ಬರು ವ್ಯಕ್ತಿಗಳ ಶ್ಯೂರಿಟಿ.
3. ⁠ ಪಾಸ್ಪೋರ್ಟ್ ಅನ್ನ ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು.
4. ⁠ಸಾಕ್ಷಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು.
5. ⁠ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸಾ ದಾಖಲೆಗಳು ಕೋರ್ಟ್ ಗೆ ಹಾಜರುಪಡಿಸಬೇಕು.
6. ⁠ ಆರೋಗ್ಯ ಸ್ಥಿತಿ ಸೇರಿದಂತೆ ಯಾವುದೇ ವಿಷಯದ ಕುರಿತು ಮುದ್ರಣ, ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದ ಮುಂದೆ ಹೇಳಿಕೆ ನೀಡಬಾರದು.
7. ⁠ಜಾಮೀನಿನ ಅವಧಿ ಮುಗಿದ ತಕ್ಷಣ ಟ್ರಯಲ್ ಕೋರ್ಟ್‌ಗೆ ಹಾಜರಾಗಬೇಕು.
8. ⁠ಮಧ್ಯಂತರ ಜಾಮೀನಿನ ಅವಧಿಯಲ್ಲಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯನ್ನ ಬಿಟ್ಟು ಹೋಗುವಂತಿಲ್ಲ.

ದರ್ಶನ್ ಗೆ ಜಾಮೀನು ಸಿಗುತ್ತಿದ್ದಂತೆ ಚಿತ್ರೋದ್ಯಮದ ತಾರೆಯರು , ತಂತ್ರಜ್ಞರು ಸಂತಸವನ್ನ ವ್ಯಕ್ತಪಡಿಸಿದ್ದಾರೆ.
ಕೆಲವು ಆತ್ಮೀಯರು , ಹಿತೈಷಿಗಳು ಅವರ ಆರೋಗ್ಯ ಸುಧಾರಿಸಿ ಗುಣಮುಖರಾಗಲಿ , ದೇವರು ಖಂಡಿತ ಅವರನ್ನು ಕಾಪಾಡುತ್ತಾನೆ. ಅವರ ಎಲ್ಲಾ ಕಷ್ಟ , ಸಮಸ್ಯೆಗಳಿಂದ ಹೊರಬರಲಿ ಎಂದರು.
ಈ ಬೆಳಕಿನ ಹಬ್ಬದಂದು ಡಿ ಬಾಸ್ ಹೊರಬರುತ್ತಿರುವುದು ಅಭಿಮಾನಿಗಳಿಗೆ ಸಂತಸ ಮನೆ ಮಾಡಿದೆ. ಮತ್ತೊಂದು ವಿಶೇಷ ಏನೆಂದರೆ ದರ್ಶನ್ ರವರ ಪುತ್ರ ವಿನೀಶ್ ತನ್ನ ಹುಟ್ಟು ಹಬ್ಬವನ್ನು ತಂದೆಯ ಜೊತೆ ಸಂಭ್ರಮಿಸಿದ್ದಾರೆ. ದರ್ಶನ್ ರವರ ಪತ್ನಿ , ಪುತ್ರ , ತಾಯಿ , ತಮ್ಮ ಸೇರಿದಂತೆ ಕುಟುಂಬದವರೂ ಹಾಗೂ ಅಭಿಮಾನಿಗಳ ನಿರಂತರ ಪ್ರಾರ್ಥನೆಯ ಫಲವಾಗಿ ಈ ಮಧ್ಯಂತರ ಜಾಮೀನು ದೊರಕಿದೆ ಎನ್ನಬಹುದು.ಇನ್ನೂ ತನಗೆ ಬೇಲ್‌ ಸಿಕ್ಕ ವಿಚಾರ ಗೊತ್ತಾಗುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದಾರೆ. ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಜೈಲಿನ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರಂತೆ. ನಟ ದರ್ಶನ್ ಗೆ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಗಿದೆಯಂತೆ. ಆಸ್ಪತ್ರೆಗೆ ಸೇರಿದ ಕೂಡಲೇ ಪರೀಕ್ಷೆಯ ವರದಿಯನ್ನ ಪಡೆದು ಶಸ್ತ್ರಚಿಕಿತ್ಸೆಯ ಸಂಭವನೀಯ ನಮೂದಿಸಿದ ದಿನಾಂಕವನ್ನ ಅರ್ಜಿದಾರರ ಒಂದು ವಾರದೊಳಗೆ ಕೋರ್ಟ್ ಗೆ ಸಲ್ಲಿಸಬೇಕಾಗುತ್ತದೆ. ಸದ್ಯದ ದರ್ಶನ್ ಆರೋಗ್ಯದ ಸ್ಥಿತಿ ಸುಧಾರಿಸಬೇಕಿದ್ದು , ಚಿಕಿತ್ಸೆ ಯಶಸ್ವಿಯಾಗಿ ಆರೋಗ್ಯ ಸುಧಾರಿಸಿ ತಮ್ಮ ನೋವು , ಕಷ್ಟಗಳಿಂದ ಬೇಗ ಹೊರಬರುವಂತಾಗಲಿ.

error: Content is protected !!