ಪ್ರೇಮಿಗಳ ದಿನದಂದು ಅನೀಶ್ ಸಾರಥ್ಯದ ಹೊಸ ಚಿತ್ರದ ಟೈಟಲ್ “ಲವ್ OTP” ಅನಾವರಣ.
ಸ್ಯಾಂಡಲ್ವುಡ್ ನಲ್ಲಿ ವಿಭಿನ್ನ ಪ್ರಯತ್ನದೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಸದಾ ಮುಂದೆ ಸಾಗುವೆ ಎನ್ನುವ ನಟ , ನಿರ್ದೇಶಕ ಅನೀಶ್ ತೇಜೇಶ್ವರ್ ಸಾರಥ್ಯದ ನೂತನ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಕನ್ನಡ ತೆಲುಗು ದ್ವಿಭಾಷೆಯಲ್ಲಿ ತಯಾರಾಗ್ತಿರುವ ಚಿತ್ರ “ಲವ್ OTP”.
ಮೊನ್ನೆಯಷ್ಟೇ ಪ್ರೊಡಕ್ಷನ್ ನಂ.01 ಅನ್ನೋ ಹೆಸರಲ್ಲಿ ಥೀಮ್ ಪೋಸ್ಟರ್ ಬಿಟ್ಟು ಹುಳ ಬಿಟ್ಟಿದ್ದ ನಟ ನಿರ್ದೇಶಕ ಅನೀಶ್, ಈಗ ಅದಕ್ಕೆ ಲವ್OTP ಅಂತ ಹೆಸರಿಟ್ಟು ಟೈಟಲ್ ಅನೌನ್ಸ್ ಮಾಡಿದ್ದಾರೆ.
Over Tourcher Pressure ಅನ್ನೋ ಅಡಿ ಬರಹವಿರೋ ಲವ್ OTP 2025ರ ನವಯುವ ಪ್ರೇಮ ಕಾವ್ಯ ಎಂದು ಹೇಳಲಾಗುತ್ತಿದೆ. ಈ ತಲೆಮಾರಿನ ಇವತ್ತಿನ ಯುವ ಮನಸುಗಳ ಕನಸುಗಳ ರಿಯಾಲಿಟಿಯನ್ನ ತೆರೆದಿಡುವಂತಹ ಕಥಾಹಂದರವಿರೋ ಸಿನಿಮಾ ಲವ್ OTP.
ಆರಾಮ್ ಅರವಿಂದ ಸ್ವಾಮಿಗೆ ಸಿಕ್ಕ ಪ್ರತಿಕ್ರಿಯೇ ಪ್ರೀತಿ ಬೆಂಬಲದ ಬೆನ್ನಿಗೆ ಅನೀಶ್ ಸದ್ದಿಲ್ಲದೇ ಲವ್ OTP ಶುರು ಮಾಡಿದ್ದಾರೆ. ನಿರ್ದೇಶನದ ಜೊತೆ ನಟಿಸ್ತಿರೋ ಅನೀಶ್ ಗೆ ಭಾವಪ್ರೀತ ಪ್ರೊಡಕ್ಷನ್ಸ್ ನ ಎಂ.ವಿಜಯ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ರೆಡ್ಡಿ ಅನ್ನೋ ನಿರ್ಮಾಪಕ ಕನ್ನಡ ಚಿತ್ರದ್ಯೋಮಕ್ಕೆ ಕಾಲಿಡ್ತಿದ್ದಾರೆ. ಸದ್ಯಕ್ಕೆ ಇಷ್ಟು ಮಾತ್ರ ಬಿಟ್ಟುಕೊಟ್ಟಿರೋ ಅನೀಶ್ ಚಿತ್ರದ ಒಂದೊಂದು ವಿಚಾರವನ್ನ ಇಲ್ಲಿಂದ ಬಿಟ್ಟುಕೊಡುವುದಾಗಿ ಪೋಸ್ಟ್ ಹಾಕಿದ್ದಾರೆ.