ಮಹೇಶ್ ಬಾಬು ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಫ್ಯಾಷನೇಟೆಡ್ ಪ್ರೊಡ್ಯೂಸರ್ ಆಗಮನ.
ಸಿನಿಮಾ ನಿರ್ಮಾಣವೆಂದರೇನೇ ಅದೊಂದು ಉದ್ಯಮ. ಬರೀಯ ಲಾಭದ ದೃಷ್ಟಿಯಿಂದ, ಕೇವಲ ಬ್ಯುಸಿನೆಸ್‌ನ ಭಾಗವಾಗಿಯಷ್ಟೇ ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅವರ ನಡುವಲ್ಲಿಯೇ ಬಹಳ ವರ್ಷಗಳ ಸಿನಿಮಾ ಕನಸನ್ನು ಬಚ್ಚಿಟ್ಟುಕೊಂಡು, ಅಪ್ಪಟ ಕಲಾ ಪ್ರೇಮದೊಂದಿಗೆ ನಿರ್ಮಾಣ ಮಾಡುವವರೂ ಇದ್ದಾರೆ. ಅಂಥವರ ಸಾಲಿಗೆ ಸೇರ್ಪಡೆಯಾಗಬಲ್ಲ ಅನುರಾಗ್ ಆರ್ ಹಾಗೂ ಮಿಥುನ್ ಕೆಎಸ್.
ಎ ಕ್ಲಾಸ್ ರಿಯಲ್ ಎಟರ್ಸ್ಸ್ ಸಂಸ್ಥಾಪರಾಗಿರುವ ಅನುರಾಗ್ ಆರ್ ಅತೀವ ಸಿನಿಮಾ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಮೂಲತಃ ಬೆಂಗಳೂರಿನವರಾಗಿರುವ ಅನುರಾಗ್ ಸಿನಿಮಾ ಮೇಲಿನ ಒಲವು ಅವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದೆ. ಈ ಮೂಲಕ ಚಿತ್ರರಂಗಕ್ಕೆ ಓರ್ವ ಸದಭಿರುಚಿ ನಿರ್ಮಾಪಕರ ಆಗಮನವಾಗುತ್ತಿದೆ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿ ಅವರಲ್ಲಿದೆ. ಮಹೇಶ್ ಬಾಬುವರಂತಹ ದಿಗ್ಗಜ ನಿರ್ದೇಶಕರ ಜೊತೆ ಅವರೀಗ ಕೈ ಜೋಡಿಸಿದ್ದಾರೆ. ಎ ಕ್ಲಾಸ್ ಸಿನಿ ಫಿಲ್ಮಂಸ್ ಹಾಗೂ ಎಂಎಂಎಂ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ದಕ್ಷಿಣ ಭಾರತ ಪ್ರತಿಷ್ಠಿತ ಸ್ಟ್ಯಾಂಡಿ ಮೇಕರ್ಸ್ಸ್ ಎಂಎಂಎಂ ಗ್ರೂಪ್ಸ್ ನ ಒಡೆಯ ಮಿಥುನ್ ಕೆ.ಎಸ್ ಕೂಡ ಅನುರಾಗ್ ಗೆ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಮೂಲಕ ಮಿಥುನ್ ಚಿತ್ರ ನಿರ್ಮಾಣದಲ್ಲಿ ಅವರು ಅನುರಾಗ್ ಜೊತೆ ಕೈ ಜೋಡಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡಿ ಅನುಭವವಿರುವ ಮಿಥುನ್ ಈಗ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ.
ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸ್ಮೈಲ್ ಗುರು ರಕ್ಷಿತ್ ಈಗ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ ‘ಆಕಾಶ್’, ‘ಅರಸು’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ವೀರ ಮದಕರಿಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮಹೇಶ್ ಬಾಬು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ ಅದಕ್ಕೆ ಬೇಕಾಗಿರೋ ಸಂಪೂರ್ಣ ತಯಾರಿಯನ್ನು ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲಿರುವ ಚಿತ್ರತಂಡ, ಮತ್ತೊಬ್ಬ ಹೀರೋಯಿನ್ ಇಂಟ್ರೂಡ್ಷನ್ ಮಾಡಲಿದ್ದಾರೆ. ಜೂನ್ 15ರಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.