“ಅಪಾಯವಿದೆ ಎಚ್ಚರಿಕೆ” ಚಿತ್ರದ ಟ್ರೇಲರ್ ಬಿಡುಗಡೆ
ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಅಭಿಮಾನಿಗಳು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಒಂದೊಳ್ಳೆ ಕಂಟೆಂಟ್ ನೊಂದಿಗೆ ಹಾರಾರ್ ಜಾನರ್ ನ ಕಥಾಹಂದರವನ್ನೂ ಹೊಂದಿರುವ “ಅಪಾಯವಿದೆ ಎಚ್ಚರಿಕೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು.
“ಅಣ್ಣಯ್ಯ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ವಿಕಾಶ್ ಉತ್ತಯ್ಯ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಅಭಿಜಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿದ್ದಾರೆ. ಹಿರಿಯ ಚಲನಚಿತ್ರ ಪತ್ರಕರ್ತೆ ಸರಸ್ವತಿ ಜಾಗಿರದಾರ್, ಚಲನಚಿತ್ರ ಸ್ಥಿರ ಛಾಯಾಗ್ರಾಹಕರಾದ ಮನು, ಮೋಕ್ಷೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
ಕನ್ನಡ ಚಲನಚಿತ್ರಗಳನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡಪರ ಹೋರಾಟಗಾರರು, ಕ್ಯಾಬ್ ಹಾಗೂ ಆಟೋ ಚಾಲಕರು, ಯವಕರು ಸೇರಿದಂತೆ ವಿವಿಧ ರೀತಿಯಲ್ಲಿ ಗುರುತಿಸಿಕೊಂಡಿರುವ ಗಣ್ಯರು ಟ್ರೇಲರ್ ಬಿಡುಗಡೆಗೆ ಸಾಥ್ ನೀಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಕನ್ನಡ ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ, ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ಹಾರಾರ್ ಕೂಡ ಗಮನ ಸೆಳೆಯುತ್ತದೆ.
ನೀರು, ಬೆಂಕಿ, ಗಾಳಿ ಮೂರನ್ನು ಪ್ರತಿನಿಧಿಸುವ ಮೂರು ಪ್ರಮುಖಪಾತ್ರಗಳು ನಮ್ಮ ಚಿತ್ರದಲ್ಲಿದೆ. ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಜೊತೆ ಚುರುಕು ನೋಟವೇ ಮತ್ತು ಬ್ಯಾಚುಲರ್ ಹಾಡುಗಳ ಮೂಲಕ ಜನರನ್ನು ತಲುಪಿರುವ ನಮ್ಮ ಚಿತ್ರದ ಟ್ರೇಲರ್ ಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಫೆಬ್ರವರಿ 28 ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ ಎಂದರು. ನಮ್ಮ ಚಿತ್ರಕ್ಕೆ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಮಾಧ್ಯಮದವರಿಗೆ ಧನ್ಯವಾದ. ಈ ಹಿಂದೆ “ಆನ”, ” ಮೇರಿ” ಚಿತ್ರಗಳಲ್ಲೂ ನನಗೆ ತಾವು ನೀಡಿದ ಬೆಂಬಲಕ್ಕೆ ನಾನು ಆಬಾರಿ. ನಾನು ಈ ಚಿತ್ರದ ನಾಯಕ. ಪಕ್ಕಾ ನಾಸ್ತಿಕ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ವಿಕಾಶ್ ಉತ್ತಯ್ಯ.
ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಇಂದು ಟ್ರೇಲರ್ ಬಿಡುಗಡೆಯಾಗಿದ್ದು, ಇದೇ 28 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ. ಹೊಸತಂಡದ ಹೊಸಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕರಾದ ಮಂಜುನಾಥ್. ವಿ.ಜಿ ಹಾಗೂ ಪೂರ್ಣಿಮಾ ಗೌಡ.
ಚಿತ್ರದ ನಾಯಕಿ ರಾಧಾ ಭಗವತಿ, ನಟರಾದ ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ, ಅಶ್ವಿನ್ ಹಾಸನ್, ದೇವ್, ಛಾಯಾಗ್ರಾಹಕ – ಸಂಗೀತ ನಿರ್ದೇಶಕ ಸುನಾದ್ ಗೌತಮ್ ಹಾಗೂ ಗಾಯಕ ರಜತ್ ಹೆಗ್ಡೆ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಅಪಾಯವಿದೆ ಎಚ್ಚರಿಕೆ” ಚಿತ್ರದ ಕುರಿತು ಮಾತನಾಡಿದರು.