ಸ್ಟೂಡೆಂಟ್ ಲೈಫ್ ನ ತುಂಟಾಟ ತರ್ಲೆ… ( ಬ್ಯಾಕ್ ಬೆಂಚರ್ಸ್ ಚಿತ್ರವಿಮರ್ಶೆ – ರೇಟಿಂಗ್ :3.5/5 )
ರೇಟಿಂಗ್ :3.5/5
ಚಿತ್ರ : ಬ್ಯಾಕ್ ಬೆಂಚರ್ಸ್
ನಿರ್ದೇಶಕ : ರಾಜಶೇಖರ್
ನಿರ್ಮಾಪಕಿ : ರಮ್ಯಾ ರಾಜಶೇಖರ್
ಸಂಗೀತ : ನಕುಲ್ ಅಭಯಂಕರ್
ಛಾಯಾಗ್ರಹಣ : ಮನೋಹರ್ ಜೋಶಿ
ತಾರಾಗಣ : ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಹಾಗೂ ಮುಂತಾದವರು…
ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಅನ್ನು ಮಾತಿನಂತೆ ಹದಿಹರಿಯದ ಹುಡುಗ ಹುಡುಗಿಯರ ತುಂಟಾಟ , ತರ್ಲೆ , ಮೋಜು , ಮಸ್ತಿ , ಕಾಲೇಜ್ ಕ್ಯಾಂಪಸ್ ನಲ್ಲಿ ಪುಂಡಾಟ , ತಂದೆ ತಾಯಿಯನ್ನು ಯಾಮಾರಿಸುತ್ತಾ ತಮ್ಮ ಇಷ್ಟದಂತೆ ಎಂಜಾಯ್ ಮಾಡುವ ಹುಡುಗರ ಎಡವಟ್ಟಿನಲ್ಲಿ ಪೋಲಿಸ್ ಎಂಟ್ರಿ ಆದಾಗ ಎದುರಿಸುವ ಸಮಸ್ಯೆಯಲ್ಲಿ ಅವರ ಲೈಫ್ ಜರ್ನಿ ಏನಾಗುತ್ತೆ ಎಂದು ಮನೋರಂಜಾತ್ಮಕವಾಗಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಬ್ಯಾಕ್ ಬೆಂಚರ್ಸ್”.
ರೇಪ್ ಆರೋಪದ ಮೇಲೆ ನಾಲ್ವರು ಹುಡುಗರು ಪೊಲೀಸ್ ಕಸ್ಟಡಿ ಸೇರುತ್ತಾರೆ. ಶೂಟ್ ಔಟ್ ಸ್ಪೆಶಲಿಸ್ಟ್ ಪೊಲೀಸ್ ಇನ್ಸ್ಪೆಕ್ಟರ್ ಗೆ ಕೊಲ್ಲಲು ಅನುಮತಿ ಇದು ವಿಚಾರಣೆ ಸಂದರ್ಭ ಫ್ಲಾಶ್ ಬ್ಯಾಕ್ ತೆರೆಯುತ್ತದೆ. ಕಾಲೇಜ್ ಕ್ಯಾಂಪಸ್ ನಲ್ಲಿ ತಮ್ಮದೇ ಜೋಶ್ , ಹವಾ ಮೂಲಕ ತುಂಟಾಟ ಮಾಡಿದರೂ ಓದುವುದರಲ್ಲಿ ಸದಾ ಮುಂದೆ ಎನ್ನುವ ಫ್ರಂಟ್ ಬೆಂಚ್ ಗೆಳೆಯರಿಗೆಲ್ಲಾ ಗೆಳತಿಯರ ಒಡನಾಟ ಜೋರಾಗಿ ಇರುತ್ತದೆ.
ಒಬ್ಬೊಬ್ಬರದು ಒಂದೊಂದು ಪ್ರೀತಿಯ ಲವ್ ಟ್ರ್ಯಾಕ್. ಇದರ ನಡುವೆ ಮತ್ತೊಂದು ವಿದ್ಯಾರ್ಥಿಗಳ ಗ್ಯಾಂಗ್ ಹಾವಳಿ . ಇದು ಪಾಠ ಮಾಡುವ ಶಿಕ್ಷಕರಿಗೂ ಕಾಟವಾಗುತ್ತದೆ. ಇದನ್ನು ಗಮನಿಸುವ ಪ್ರಿನ್ಸಿಪಾಲ್ ಫ್ರಂಟ್ ಬೆಂಚ್ ಗೆ ವಿದ್ಯಾರ್ಥಿಗಳನ್ನು ಬ್ಯಾಕ್ ಬೆಂಚಿಗೆ , ಬ್ಯಾಕ್ ಬೆಂಚಸ್ನ ಫ್ರೆಂಟ್ಗೆ ಕುರಿಸುತ್ತಾರೆ. ಇದರಿಂದ ಎರಡು ಗ್ಯಾಂಗ್ ಫ್ರೆಂಡ್ ಶಿಪ್ ಗಟ್ಟಿಯಾಗುತ್ತದೆ. ಮೋಜು , ಮಸ್ತಿ , ಎಣ್ಣೆ , ಕುಣಿತದ ಕಡೆಗೆ ಒಳ್ಳೆ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ. ಇನ್ನು ತಂದೆ ತಾಯಿ ಮನೆಯಿಂದ ಹೋದರೆ ಸಾಕು ಫ್ರೆಂಡ್ಸ್ ಅನ್ನ ಕರೆದು ಪಾರ್ಟಿ ಮಾಡುವ ಗ್ಯಾಂಗ್ ಹಾವಳಿ.
ಅಲ್ಲಿ ಹುಡುಗ ಹುಡುಗಿಯರ ಜೋಶ್ , ಮೋಹ ಅತಿರೇಕಕ್ಕೆ ಇರುತ್ತದೆ. ಜೊತೆಯಲ್ಲಿ ಇದ್ದು ಮತ್ತೊಂದು ಗ್ಯಾಂಗ್ ತಮ್ಮ ಸ್ನೇಹಿತರನ್ನು ಸಿಕ್ಕಿಹಾಕಿಸುವ ಪ್ಲಾನ್ ಮಾಡಿ ಕುಡಿಸಿ ಮದುವೆ ಕಾರ್ಯಕ್ರಮ ಒಂದಕ್ಕೆ ಕಳಿಸುತ್ತಾರೆ. ಅಲ್ಲಿ ಆಗುವ ಎಡವಟ್ಟು ಒಂದಷ್ಟು ಗೊಂದಲಕ್ಕೆ ದಾರಿ ಮಾಡುತ್ತದೆ.ಮುಂದೆ ಆಗುವ ಅನಾಹುತ ಏರುಪೇರು ಕ್ಲೈಮ್ಯಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ.
ವಿದ್ಯಾರ್ಥಿಗಳು ಭವಿಷ್ಯ ಏನಾಗುತ್ತೆ…
ರೇಪಿಸ್ಟ್ ಗಳು ಯಾರು…
ಪೊಲೀಸರ ಕೈಗೆ ಸಿಕ್ತಾರಾ…
ಬ್ಯಾಕ್ ಬೆಂಚರ್ಸ್ ಗತಿ ಏನು..
ಇದಕ್ಕಾಗಿ ನೀವು ಈ ಚಿತ್ರವನ್ನು ನೋಡಲೇಬೇಕು.
ಈ ಚಿತ್ರದ ನಿರ್ದೇಶಕ ಬಿ. ಆರ್. ರಾಜಶೇಖರ್ ಒಂದು ಕಾಲೇಜ್ ಯೂತ್ ಕಂಟೆಂಟ್ ಅನ್ನು ಬೆಸೆದುಕೊಂಡು ಹದಿಹರೆಯದ ಹುಡುಗ ಹುಡುಗಿಯರ ತುಂಟಾಟ , ತರ್ಲೆ , ಒದ್ದಾಟ , ತವಕಗಳ ಜೊತೆಗೆ ಇವತ್ತಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ವ್ಯವಸ್ಥೆ ಇದೆಲ್ಲದರ ಬಗ್ಗೆ ಮನೋರಂಜನತ್ಮಕವಾಗಿ ಹೇಳುವ ಪ್ರಯತ್ನ ಅಚ್ಚುಕಟ್ಟಾಗಿದೆ.
ವಿದ್ಯಾಭ್ಯಾಸದಕ್ಕಿಂತ ಮೋಜು , ಮಸ್ತಿ ಬಗ್ಗೆ ಹೆಚ್ಚು ಗಮನಿಸಿದಂತಿದೆ. ಅದರಲ್ಲೂ ಅತಿರೇಕದ ವ್ಯಾಮೋಹ ಕೊಂಚ ಮುಜುಗರ ಎನಿಸುತ್ತದೆ. ಆದರೂ ಎಂಜಾಯ್ ಮಾಡುವ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶ ಕಾಣುತ್ತದೆ. ಇನ್ನು ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಅದೇ ರೀತಿ ಹಾಡುಗಳು ಕೂಡ ಓಟಕ್ಕೆ ಪೂರಕವಾಗಿ ಸಾಗಿದೆ.
ಇನ್ನು ಈ ಚಿತ್ರದಲ್ಲಿ ವಿದ್ಯಾರ್ಥಿಗಳಾಗಿ ಅಭಿನಯಿಸಿರುವ ರಂಜನ್ ಅಪ್ಪ ಅಮ್ಮನನ್ನ ಯಾಮಾರಿಸಿ ಗೆಳೆಯರೊಟ್ಟಿಗೆ ಮಾಡುವ ಪಾರ್ಟಿ ಗಮನ ಸೆಳೆಯುತ್ತದೆ. ಹಾಗೆ ಜತಿನ್ ಆರ್ಯನ್ ಡೈಲಾಗ್ ಡೆಲಿವರಿ , ಟೈಮಿಂಗ್ಸ್ ಮಜವಾಗಿದ್ದು , ಛೋಟಾ ಭೀಮ್ ಆಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಅಭಿನಯಿಸಿರುವ ಆಕಾಶ್ ಎಂ.ಪಿ, ಶಶಾಂಕ್ ಸಿಂಹ , ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅರವಿಂದ್ ಕುಪ್ಳೀಕರ್ ಗಮನ ಸೆಳೆಯುತ್ತಾರೆ. ಇನ್ನು ವಿಶೇಷವಾಗಿ ಸುಚೇಂದ್ರ ಪ್ರಸಾದ್ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಅಭಿನಯಿಸಿ ಮಿಂಚಿದ್ದಾರೆ. ಒಂದು ಕಾಲೇಜ್ ಯೂತ್ ಕಂಟೆಂಟ್ ಚಿತ್ರವಾಗಿದ್ದು , ಮನೋರಂಜನೆ ದೃಷ್ಟಿಯಿಂದ ಈ ಚಿತ್ರ ಇಷ್ಟವಾಗುತ್ತದೆ.