Cini NewsMovie ReviewSandalwood

ಸಸ್ಪೆನ್ಸ್ , ಥ್ರಿಲ್ಲರ್ ಹಾಗೂ ಸಾವಿನ ಹಿಂದಿರುವ ರಹಸ್ಯ. “BAD” (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : BAD
ನಿರ್ದೇಶಕ : ಪಿ.ಸಿ.ಶೇಖರ್
ನಿರ್ಮಾಪಕ : ವೆಂಕಟೇಶ್ ಗೌಡ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಶಕ್ತಿ ಶೇಖರ್
ತಾರಾಗಣ : ನಕುಲ್ ಗೌಡ , ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ, ಪದ್ಮ ಶಿವಮೊಗ್ಗ, ಕಡ್ಡಿಪುಡಿ ಚಂದ್ರು , ಜಗ್ಗೇಶ್ ಮಲ್ನಾಡ್ ಹಾಗೂ ಮುಂತಾದವರು…

ಜೀವನದಲ್ಲಿ ಯಾರನ್ನು ನಂಬೋದು , ಯಾರನ್ನ ಬಿಡೋದು , ಯಾವುದು ಸತ್ಯ.. ಯಾವುದು ಸುಳ್ಳು.. ಎಂಬುವ ಯಕ್ಷಪ್ರಶ್ನೆ ಕಾಡುವುದು ಸರ್ವೇ ಸಾಮಾನ್ಯ. ಅಂತದ್ದೇ ಒಂದು ಕುತೂಹಲಕಾರಿ ಮರ್ಡರ್ ಮಿಸ್ಟರಿಯ ಕಥೆಯಲ್ಲಿ ಪ್ರೀತಿ , ಸಂಬಂಧ , ದ್ವೇಷ , ಹಣ , ರಾಜಕೀಯ , ಟ್ರಾಫಿಂಗ್ ಸುತ್ತ ಹಿಂದಿರುವ ನೋವಿನ ವೇದನೆಗೆ ಪ್ರತ್ಯುತ್ತರವಾಗಿ ಮಾಡಿರುವ ಸಂಚಿನ ಕಥಾನಕವಾಗಿ ಈ ವಾರ ಪರದೆಯ ಮೇಲೆ ಬಂದಿರುವಂತಹ ಚಿತ್ರ “BAD”.
ಪ್ರಖ್ಯಾತ ರಾಜಕಾರಣಿ ಶ್ರೀನಿವಾಸಮೂರ್ತಿ (ಜಗ್ಗೇಶ್ ಮಲ್ನಾಡ್) ಸಾವು ಯುವ ರಾಜಕೀಯ ನಾಯಕರುಗಳಿಗೆ ದಾರಿ ಮಾಡಿಕೊಟ್ಟರೆ , ಮತ್ತೊಂದೆಡೆ ಮಗಳು ಅನು (ಅಪೂರ್ವ ಭಾರದ್ವಾಜ್)ಗೆ ದೊಡ್ಡ ಸಮಸ್ಯೆ ಉದ್ಭವವಾಗುತ್ತದೆ. ಇನ್ನು ಶ್ರೀನಿವಾಸ್ ಮೂರ್ತಿಯ ಆಸ್ತಿ ಹಾಗೂ ಅಧಿಕಾರದ ಹಿಂದೆ ಕೆಲವರ ಕೈವಾಡ ಚಾಲ್ತಿಯಾಗುತ್ತದೆ. ಅನು ಳನ್ನ ನೋಡಿಕೊಳ್ಳಲು ಇರುವ ನಾಗಸಿಂಹ (ಸಾಯಿ ಕೃಷ್ಣ) , ಮಿನಿಸ್ಟರ್ ಮಣಿ ಶರ್ಮ( ಕಡಿಪುಡಿ ಚಂದ್ರು) ಸೇರಿದಂತೆ ಹಲವಾರ ಟ್ರ್ಯಾಪ್ ನಿಗೂಢ. ಇನ್ನೂ ತನ್ನ ಗ್ಯಾರೇಜೆ ಬದುಕು ಎನ್ನುವ ವೇದ ( ನಕುಲ್ ಗೌಡ) ತನ್ನ ಚಾಣಾಕ್ಷತನದಿಂದ ಅಸಾಧ್ಯವನ್ನ ಸಾಧ್ಯ ಮಾಡುವ ಶಕ್ತಿ ಹೊಂದಿದ್ದು, ‘ವೇದ ಹೇಳಿದ್ದೆ ವೇದ ವಾಕ್ಯ’… ಎನ್ನುವಂತೆ ಅಬ್ಬರಿಸುತ್ತಾನೆ. ಆಕಸ್ಮಿಕವಾಗಿ ಹಳ್ಳಿಯಲ್ಲಿ ಪವಿತ್ರ (ಮಾನ್ವಿತಾ ಹರೀಶ್) ಳನ್ನ ಭೇಟಿಯಾಗುವ ವೇದ ಸ್ನೇಹ , ಸಲುಗೆಯ ಮೂಲಕ ಪ್ರೀತಿಸಿ ಮದುವೆಯಾಗುತ್ತಾನೆ. ಆದರೆ ಅವನ ಬಾಳಲ್ಲೂ ಒಂದು ದುರಂತ ಘಟನೆ ನಡೆಯುತ್ತದೆ. ಇದರ ನಡುವೆ ಮಿನಿಸ್ಟರ್ ಮಣಿ ಶರ್ಮ ಒಂದು ಡೀಲನ್ನ ವೇದನೆಗೆ ನೀಡುತ್ತಾನೆ. ಈ ಕೆಲಸಕ್ಕೆ ಮುಂದಾಗುವ ವೇದ ನಿಗೆ ಗೆಳೆಯನ ಸಾತ್ ಕೂಡ ಸಿಗುತ್ತದೆ. ಒಂದಕ್ಕೊಂದು ಕೊಂಡಿಯಂತೆ ಸಾಗುವ ಈ ಸಾವಿನ ಹಿಂದಿನ ರಹಸ್ಯದ ಹಿಂದೆ ಫ್ಲಾಶ್ ಬ್ಯಾಕ್ ಗಳ ಕಥೆ ತೆರೆದುಕೊಳ್ಳುತ್ತಾ ಬೇರೆಯದೆ ಸತ್ಯವನ್ನ ಹೊರ ಹಾಕುತ್ತದೆ.
ಸಾವಿನ ರಹಸ್ಯ ಏನು…
ರಾಜಕಾರಣಿಗಳ ಕೈವಾಡನಾ…
ಸುಪಾರಿ ಕೊಟ್ಟಿದ್ದು ಯಾಕೆ…
ಕ್ಲೈಮಾಕ್ಸ್ ಹೇಳುವ ಉತ್ತರ…
ಇದಕ್ಕೆಲ್ಲ ಉತ್ತರ BAD ಚಿತ್ರ ನೋಡಬೇಕು.

ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು, ಸಸ್ಪೆನ್ಸ್ , ಥ್ರಿಲ್ಲರ್ ಮೂಡಿಸುತ್ತಾ ಸಾಗುತ್ತದೆ. ಸ್ನೇಹ , ಪ್ರೀತಿ , ನಂಬಿಕೆಯ ಸುತ್ತಾ ದ್ರೋಹ , ಪಿತೂರಿಯ ಕೈಚಳಕ ತೋರಿಸಿರುವ ರೀತಿ ಗಮನ ಸೆಳೆಯುತ್ತದೆ. ಆದರೆ ಚಿತ್ರಕಥೆ ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಉತ್ತಮವಾಗಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ನಕುಲ್ ಗೌಡ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ನಾಯಕಿಯಾಗಿ ಮಾನ್ವಿತ ಹರೀಶ್ ಜೀವ ತುಂಬಿ ಅಭಿನಯಿಸಿದ್ದಾರೆ. ಅದೇ ರೀತಿ ಮತ್ತೊಬ್ಬ ನಟಿ ಅಪೂರ್ವ ಭಾರದ್ವಾಜ್ ಡೇರ್ ಅಂಡ್ ಬೋಲ್ಡ್ ಆಗಿ ನಟಿಸಿದ್ದಾರೆ. ಅದೇ ರೀತಿ ನಟ ಸಾಯಿ ಕೃಷ್ಣ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಕಡ್ಡಿಪುಡಿ ಚಂದ್ರು ನಟನೆ ನೋಡುವಾಗ ವಾಯ್ಸ್ ಡಬ್ಬಿಂಗ್ ಮಿಸ್ ಆಗಿದ್ದು ಕಾಣುತ್ತದೆ. ನಾಯಕಿಯ ತಾಯಿಯ ಪಾತ್ರದಲ್ಲಿ ಪತ್ರಕರ್ತೆ ಪದ್ಮ ಶಿವಮೊಗ್ಗ ಸಿಕ್ಕಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಎಲ್ಲರೂ ಕೂಡ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಸಸ್ಪೆನ್ಸ್ , ಮರ್ಡರ್ ಮಿಸ್ಟ್ರಿ ಪ್ರಿಯರಿಗೆ ಇಷ್ಟವಾಗುವ ಈ ಚಿತ್ರ ಎಲ್ಲರೂ ಒಮ್ಮೆ ನೋಡಬಹುದು.

error: Content is protected !!