Cini NewsSandalwood

ಸೆನ್ಸಾರ್‌ನಿಂದ ಪ್ರಶಂಸೆ ಪಡೆದ “ಬರ್ಗೆಟ್ ಬಸ್ಯಾ” ಬಿಡುಗಡೆಗೆ ರೆಡಿ

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಬರ್ಗೆಟ್ ಬಸ್ಯಾ’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ. ಯರ್ರಂರೆಡ್ಡಿ ಪಿಕ್ಚರ‍್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ನಿರ್ಮಿಸಿದ್ದಾರೆ.

ರಿಶ್‌ಹಿರೇಮಠ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಡೈರಕ್ಷನ್ ಕೋರ್ಸ್ ಮುಗಿಸಿದ ನಂತರ ಕೆಲವು ನುರಿತ ನಿರ್ದೇಶಕರ ಬಳಿ ಕೆಲಸ ಕಲಿತುಕೊಂಡು, ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಂಗೀತ. ಎನ್.ಸ್ವಾಮಿ ನಾಯಕಿ.

ಕಂಡಕಂಡ ಹುಡುಗಿಯರನ್ನೆಲ್ಲ ಲವ್ ಮಾಡಿ ಎಂಬ ಶೀರ್ಷಿಕೆ ಪಾತ್ರಧಾರಿ ಅವರನ್ನು ಹಿಂಬಾಲಿಸುವುದರ ಬಗ್ಗೆ ಸಿನಿಮಾದಲ್ಲಿ ಸಂಪೂರ್ಣ ಹಾಸ್ಯಮಯವಾಗಿ ಹೇಳಲಾಗಿದೆ. ನಲವತ್ತು ಹುಡುಗಿಯರು ಬಸ್ಯನ ಜೀವನದಲ್ಲಿ ಹೇಗೆ ಹಾದು ಹೋಗುತ್ತಾರೆ. ಇದರ ಸುತ್ತ ಹೆಣೆದಿರುವ ಕಥೆಯಾಗಿದೆ.

ಚಿತ್ರೀಕರಣವು ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ನಡೆಸಿ, ಬೆನಗನಹಳ್ಳಿಯ ಸುಂದರ ತಾಣದಲ್ಲಿ ನಡೆದಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‌ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

error: Content is protected !!