ಏಪ್ರಿಲ್ 4 ರಂದು “ಬೆಂಕಿಯ ಬಲೆ ಪ್ರೀತಿಯ ಕೊಲೆ” ಚಿತ್ರ ಬಿಡುಗಡೆ
“ಪರಚಂಡಿ”, “ಆಘಾತ್ ಹ್ಯಾಂಗರ್”, ” ಕುಚುಕು”, “ಅಲೆಕ್ಸಾ”, “ಕುಂಟೆಬಿಲ್ಲೆ”, ” ಫಾದರ್” ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಮೈಸೂರಿನ ಶಿವಾಜಿ ನಿರ್ಮಿಸಿ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರದು ನಿರ್ದೇಶಿಸಿ, ನಟಿಸಿರುವ “ಬೆಂಕಿಯ ಬಲೆ ಪ್ರೀತಿಯ ಕೊಲೆ” ಚಿತ್ರ ಇದೇ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ.
ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಭಯಂಕರ ಕರೋನ ಲಾಕ್ ಡೌನ್ ನಂತರ ಬೆಂಗಳೂರಿನ ಕಲಾವಿದರ ಸಂಫದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವಿದು. ಅಷ್ಟೇ ಅಲ್ಲ. ರಾಷ್ಟ್ರದ ಹಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಕುಟುಂಬದವರು ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ವಿಶೇಷ. ಶಿವಾಜಿ ಅವರು ಗುಜರಾತ್ ನ ಮೋದಿ ಅವರ ನಿವಾಸಕ್ಕೆ ತೆರಳಿದಾಗ ಈ ಚಿತ್ರದ ಬಗ್ಗೆ ವಿವರಿಸಿದ್ದರು. ಚಿತ್ರದ ಬಗ್ಗೆ ತಿಳಿದ ಮೋದಿ ಅವರ ಕುಟುಂಬದ ಚಿತ್ರಕ್ಕೆ ಯಶಸ್ಸನ್ನು ಹಾರೈಸಿದ್ದರು.
ಹೀಗೆ ಹಲವು ವಿಶೇಷಗಳಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವಾಜಿ, ಮಂಡ್ಯ ರಮೇಶ್. ಜಿ.ಬಿ ಸಿದ್ದೇ ಗೌಡ್ರು, ಧೀರಜ, ಮಹಾದೇವಮೂರ್ತಿ, ಶಿವಲಿಂಗೇಗೌಡ. ಮಲ್ಲಿಕಾರ್ಜುನ್, ನಿರಂಜನ್ ದೇಶಪ್ರೇಮಿ. ಸಲ್ಮಾನ್ ಲೋಕೇಶ್. ಮಿರ್ಲೆ ಮಂಜು. ವರ್ಣ ಸಿದ್ದರಾಜು ಪ್ರೀತಿ ಎಶಿಕಾ ಪವಿತ್ರ, ಸುಮ ಮುಂತಾದವರಿದ್ದಾರೆ.