Cini NewsSandalwood

ಪ್ರೀತಿಯ ಹೊಸ ಆಯಾಮ ‘ಭಾವ ತೀರ ಯಾನ’ ಇದೇ 21ಕ್ಕೆ ಬಿಡುಗಡೆ

ಭಾವನೆಗಳ ಬೆಸೆದ ಸುಂದರ ಪ್ರೇಮಕಥೆಯ ಭಾವ ತೀರ ಯಾನ ಸಿನಿಮಾಗೆ ಈ ವಾರ ತೆರೆಗೆ ಬರ್ತಿದೆ. ಹೊಸ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರಕ್ಕೆ ನಿರ್ದೇಶಕರಾದ ಮಯೂರ್‌ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಸಾರಥಿಗಳು. ಇದೇ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭಾವ ತೀರ ಯಾನ ಬಿಡುಗಡೆಯಾಗುತ್ತಿದ್ದು, ಈ ಕುರಿತು ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಚಿತ್ರಮಂದಿರದಲ್ಲಿ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ನಿರ್ದೇಶಕ ಮಯೂರ್‌ ಅಂಬೆಕಲ್ಲು ಮಾತನಾಡಿ, ಶುಕ್ರವಾರ ಭಾವ ತೀರ ಯಾನ ಸಿನಿಮಾ ಬಿಡುಗಡೆಯಾಗುತ್ತಿದೆ. ಎರಡು ವರ್ಷಗಳ ಪ್ರಯತ್ನದ ಫಲ ಇಂದು ರಿಲೀಸ್ ವರೆಗೂ ಬಂದು ನಿಂತಿದೆ. ಇಲ್ಲಿವರೆಗೂ ಯಾರು ಮಾಡಿರದ ಪ್ರೇಮಕಥೆಯೊಂದನ್ನು ತೋರಿಸುವ ಪ್ರಯತ್ನಪಟ್ಟಿದ್ದೇವೆ. ಲವ್ ಸ್ಟೋರಿ ಅಂದಾಗ ಕಾಮನ್ ಕ್ಲೈಮ್ಯಾಕ್ಸ್ ಇರುತ್ತದೆ. ಪ್ರೀತಿಯ ಹೊಸ ಆಯಾಮವನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಪ್ರೀತಿ ಆಳವನ್ನು ಮನರಂಜನೆ ಜೊತೆಗ ಹೆಣೆದಿದ್ದೇವೆ. 21ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಇದು ಎಂದರು,

ನಾಯಕ ತೇಜಸ್ ಕಿರಣ್ ಮಾತನಾಡಿ, 21ರಂದು ಭಾವ ತೀರ ಯಾನ ರಿಲೀಸ್ ಆಗುತ್ತಿದೆ. ಇದು ರೂಟಿನ್ ಸ್ಟೋರಿ ಅಲ್ಲ. ಇದರಲ್ಲಿ ಹೊಸ ವಿಷಯವನ್ನು ಹೇಳೋದಿಕ್ಕೆ ಹೊರಟಿದ್ದೇವೆ. ಇಬ್ಬರು ಕುಳಿತು ಸ್ಟೋರಿ ಎಣೆದು ಈ ಚಿತ್ರ ಮಾಡಿದ್ದೇವೆ. ನಿಮ್ಮ ಬೆಂಬಲ ನಮ್ಮ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದರು.

ನಿರ್ದೇಶಕನದ ಜೊತೆಗೆ ತೇಜಸ್ ಕಿರಣ್ ನಾಯಕನಾಗಿಯೂ ಅಭಿನಯಿಸಿದ್ದು, ಆರೋಹಿ ನೈನಾ, ಅನುಷಾ ಕೃಷ್ಣ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಮೇಶ್ ಭಟ್ ಇಲ್ಲಿಯವರೆಗೂ ಕಾಣಿಸಿದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಚಂದನಾ ಆನಂತಕೃಷ್ಣ , ವಿದ್ಯಾಮೂರ್ತಿ ತಾರಾಬಳಗದಲ್ಲಿದ್ದಾರೆ.

ಆರೋಹ ಫಿಲಂಸ್ ಬ್ಯಾನರ್ ನಡಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿಕೆ ನಿರ್ಮಾಣ ಮಾಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಸುಪ್ರಿತ್ ಬಿಕೆ ಸಂಕಲನ, ಮಯೂರ್ ಸಂಗೀತ ನಿರ್ದೇಶನ ಭಾವ ತೀರ ಯಾನ ಸಿನಿಮಾಕ್ಕಿದೆ. ಈ ಚಿತ್ರವನ್ನು ಬ್ಲಿಂಕ್ ಸಿನಿಮಾ ನಿರ್ಮಾಪಕರಾದ ರವಿಚಂದ್ರ ವಿತರಣೆ ಮಾಡುತ್ತಿದ್ದು, ಶಾಖಾಹಾರಿ ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಹಾಗೂ ರಂಜನಿ ಪ್ರಸನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ.

error: Content is protected !!