Cini NewsSandalwood

ಫೆ.21ಕ್ಕೆ ಬರುತ್ತಿರುವ ‘ಭಾವ ತೀರ ಯಾನ” ಚಿತ್ರಕ್ಕೆ ಬ್ಲಿಂಕ್ ಹಾಗೂ ಶಾಖಾಹಾರಿ ನಿರ್ಮಾಪಕರು ಸಾಥ್

‘ಶಾಖಾಹಾರಿ’ ಸಿನಿಮಾದ ಸಂಗೀತ ನಿರ್ದೇಶಕರಾದ ಮಯೂರ್ ಅಂಬೆಕಲ್ಲು ಭಾವ ತೀರ ಯಾನ ಮೂಲಕ ನಿರ್ದೇಶರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಮಯೂರ್ ಹಾಗೂ ತೇಜಸ್ ಕಿರಣ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಭಾವ ತೀರ ಯಾನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಫೆಬ್ರವರಿ 21ಕ್ಕೆ ತೆರೆಗೆ ಬರ್ತಿರುವ ಸಿನಿಮಾಗೆ ಬ್ಲಿಂಕ್ ಹಾಗೂ ಶಾಖಾಹಾರಿ ಚಿತ್ರಗಳ ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಬ್ಲಿಂಕ್ ನಿರ್ಮಾಪಕ ರವಿಚಂದ್ರ ಭಾವ ತೀರ ಯಾನ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದು, ಶಾಖಾಹಾರಿ ನಿರ್ಮಾಪಕರಾದ ರಾಜೇಶ್ ಕೀಲಾಂಬಿ ಹಾಗೂ ರಂಜನಿ ಪ್ರಸನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ.

ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಭಾವ ತೀರ ಯಾನ ಸಿನಿಮಾದಲ್ಲಿ ನಿರ್ದೇಶಕರಾದ ತೇಜಸ್ ಕಿರಣ್ ನಾಯಕನಾಗಿ ಅಭಿನಯಿಸಿದ್ದು, ಆರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿಯಾರಾಗಿ ಸಾಥ್ ಕೊಟ್ಟಿದ್ದಾರೆ. ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ.

ಆರೋಹ ಫಿಲ್ಮಂಸ್ ಬ್ಯಾನರ್ ನಡಿ ಮಯೂರ್ ಅಂಬೆಕಲ್ಲು, ತೇಜಸ್ ಕಿರಣ್, ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿಕೆ ನಿರ್ಮಾಣ ಮಾಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಸುಪ್ರಿತ್ ಬಿಕೆ ಸಂಕಲನ ಹಾಗೂ ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಇಡೀ ಕುಟುಂಬ ಕುಳಿತು ನೋಡುವಂತಹ ಭಾವ ತೀರ ಯಾನ ಸಿನಿಮಾ ಫೆಬ್ರವರಿ 21ಕ್ಕೆ ರಿಲೀಸ್ ಆಗಲಿದ್ದು, ಶೀಘ್ರದಲ್ಲೇ ಚಿತ್ರತಂಡ ಪ್ರಚಾರ ಕಣಕ್ಕೆ ಧುಮುಕಲಿದೆ.

error: Content is protected !!