“ಬಿಲ್ಲಾರಿ” ಚಿತ್ರಕ್ಕೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಚಾಲನೆ
ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಬಿಲ್ಲಾರಿ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ತಾಯಿ ಲಕ್ಷೀಧನಪಾಲ್ ಕ್ಯಾಮಾರ ಆನ್ ಮಾಡಿದರು.
ಎವಿಕೆ ಪ್ರೊಡಕ್ಷನ್ ಅಡಿಯಲ್ಲಿ ರಿಶ್ವಿಕ್‌ಶೆಟ್ಟಿ ಕತೆ ಬರೆದು ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಗೋಕಾಕ್ ಮೂಲದ ಪಿ.ಎಲ್.ಭರಮಣ್ಣ ಚಿತ್ರಕತೆ-ನಿರ್ದೆಶನದ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಶಿಲ್ಪಗೌಡ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ನಿರ್ದೇಶಕ ಭರಮಣ್ಣ ಹೇಳುವಂತೆ ಇದೊಂದು ಕಾಲ್ಪನಿಕ ಅಂಶಗಳನ್ನು ಒಳಗೊಂಡಿದೆ. ನಿಘಂಟುದಲ್ಲಿ ಬಿಲ್ಲಾರಿಗೆ ಬೇರೆ ಅರ್ಥ ಇರಲಿದೆ. ಆದರೆ ನಮ್ಮ ಸಿನಿಮಾದಲ್ಲಿ ಪಾತ್ರದ ಹೆಸರು ಶೀರ್ಷಿಕೆಯಾಗಿದೆ. ಬಿಲ್ಸ್ ಬುಡಕಟ್ಟು ಜನಾಂಗದ ರಾಜನ ಐತಿಹಾಸಿಕ ಸೆಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದೆ. ಭಾರತದಲ್ಲಿ ಇವರುಗಳು ಹನ್ನೊಂದು ಲಕ್ಷ ಜನಸಂಖ್ಯೆ ಇರಲಿದ್ದು, ಹೆಚ್ಚಿನ ಭಾಗ ಗುಜರಾತ್, ರಾಜಸ್ತಾನದಲ್ಲಿ ವಾಸವಾಗಿದ್ದಾರೆ.
ಬೆಂಗಳೂರು, ಅರಸಿಕೆರೆ, ಹಾಸನ, ಅಣ್ಣಿಗೇರಿ, ಗಜೇಂದ್ರಗಡ, ಯಾಣ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಕ್ಲೈಮಾಕ್ಸ್‌ದಲ್ಲಿ ಸಿದ್ದಾಂತದೊಂದಿಗೆ ಭಾಗ-2 ಬರಲಿದೆ ಎಂಬುದಾಗಿ ತೋರಿಸಲಾಗುವುದು. ಇನ್ನು ಹೆಚ್ಚಿನ ವಿವರ ನೀಡಿದರೆ, ಸಿನಿಮಾದ ಹೂರಣ ಬಿಟ್ಟುಕೊಟ್ಟಂತೆ ಆಗುತ್ತದೆಂದು ಕುತೂಹಲ ಕಾಯ್ದಿರಿಸಿದರು.
ರಾಜ ಮತ್ತು ಅಧಿಕಾರಿಯಾಗಿ ರಿಶ್ವಿಕ್‌ಶೆಟ್ಟಿ ನಾಯಕ. ಭಟ್ಟರ ಮಗಳಾಗಿ ಮೈಸೂರು ಕಡೆಯವರಾದ ಚೈತ್ರಾಲೋಕನಾಥ್ ನಾಯಕಿ. ಉಳಿದಂತೆ ನಾಗೇಂದ್ರಅರಸ್, ಪ್ರಕಾಶ್ ತುಮ್ಮಿನಾಡು, ಎಂ.ಕೆ.ಮಠ, ಕೆಂಪೆಗೌಡ, ಬಲರಾಮ್ ಪಂಚಾಲ್, ಮಜಾಭಾರತದ ಚಂದ್ರಪ್ರಭಾ, ’ಕಾಂತಾರ’ ಖ್ಯಾತಿಯ ನವೀನ್ ಬೊಂದೆಲ್ ಸಂಭಾಷಣೆ ಹಾಗೂ ನಟನೆ. ಇವರೊಂದಿಗೆ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ.
ನಾಲ್ಕು ಹಾಡುಗಳ ಪೈಕಿ, ಒಂದು ಗೀತೆಗೆ ಪ್ರಮೋದ್ ಮರವಂತೆ ಹುರುಪು ಹೊರಪು ತುಂಬುವಂತ ಪ್ರೇಮಗೀತೆಗೆ ಪದಗಳನ್ನು ಪೋಣಿಸಿದ್ದಾರೆ. ಸಂಗೀತ ಸುಭಾಷ್, ಛಾಯಾಗ್ರಹಣ ಅಗಸ್ತ್ಯ.ಯು.ಗೌಡ, ಕಲೆ ತಿರುಪತಿ ಅವರದಾಗಿದ್ದು, ತಂತ್ರಜ್ಘರ ಆಯ್ಕೆ ಬಾಕಿ ಇದೆ.