ಶೆಫ್ ಚಿದಂಬರನ ರಹಸ್ಯ…(ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : chef ಚಿದಂಬರ
ನಿರ್ದೇಶಕ : ಆನಂದರಾಜ್.ಎಂ
ನಿರ್ಮಾಪಕಿ : ರೂಪ ಡಿ.ಎನ್
ಸಂಗೀತ : ರಿತ್ವಿಕ್ ಮುರಳಿಧರ್
ಛಾಯಾಗ್ರಹಣ : ಉದಯ್ ಲೀಲ
ತಾರಾಗಣ : ಅನಿರುದ್ದ್ ಜತಕರ್, ನಿಧಿ ಸುಬ್ಬಯ್ಯ , ರೆಚೆಲ್ ಡೇವಿಡ್, ಶಿವಮಣಿ , ಶರತ್ ಲೋಹಿತಾಶ್ವ , ಸಿದ್ಲಿಂಗು ಶ್ರೀಧರ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಚಿತ್ರಗಳು ಪ್ರೇಕ್ಷಕರನ್ನ ಒಂದು ಹಂತಕ್ಕೆ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ಡಾರ್ಕ್ ಕಾಮಿಡಿ ಜಾನರ್ ನಲ್ಲಿ ಕುತೂಹಲವನ್ನು ಮೂಡಿಸುತ್ತಾ ಸಾಗುವ ಸ್ನೇಹ , ಪ್ರೀತಿ , ವಂಚನೆ , ಸಾವಿನ ಸುತ್ತಾ ಸಾಗುವ ನಿಗೂಢತೆಯ ಪಂಜರವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “chef ಚಿದಂಬರ”.
ಜೀವನದಲ್ಲಿ ತನ್ನದೇ ಒಂದು ಸ್ವಂತ ಹೋಟೆಲ್ ನಲ್ಲಿ ನೆಮ್ಮದಿ ಬದುಕು ಕಟ್ಟಿಕೊಳ್ಳುವ ತವಕ ಹೊಂದಿರುವ ವ್ಯಕ್ತಿ ಚಿದಂಬರ(ಅನಿರುದ್ದ್ ಜತಕರ್). ಕಡಲ ಕಿನಾರೆಯ ಸಮೀಪದ ಹೋಟೆಲ್ ಒಂದುಅವಿನಾಶ್ ಶೆಟ್ಟಿ(ಸಿದ್ಲಿಂಗು ಶ್ರೀಧರ್) ಸುಪರ್ದಿಯಲ್ಲಿ ಇರುತ್ತದೆ. ಅದನ್ನು ಬಿಡಿಸಿಕೊಳ್ಳಲು ಹಣ ಹೊಂಚಲು ಹರಸಾಹಸ ಪಡುವ ಚಿದಂಬರ.
ತುಂಬಾ ಮುಗ್ಧ , ಸ್ನೇಹ ಜೀವಿಯಾದ ಚಿದಂಬರನನ್ನು ಹೆಚ್ಚು ಪ್ರೀತಿಸುವ ಪ್ರೇಯಸಿ ಅನು(ರೆಚೆಲ್ ಡೇವಿಡ್). ಇನ್ನು ಬೇರೊಬ್ಬನನ್ನು ಪ್ರೀತಿಸಿರುವ ಮೊನಾ(ನಿಧಿ ಸುಬ್ಬಯ್ಯ) ಹಣದ ಆಸೆಗಾಗಿ ಶ್ರೀಮಂತ ವ್ಯಕ್ತಿ ಅವಿನಾಶ್ ಶೆಟ್ಟಿಯನ್ನು ಮದುವೆಯಾಗಿರುತ್ತಾಳೆ. ಡಾನ್ (ಶಿವಮಣಿ) ಬಳಿ ಇರುವ ಪ್ರಿಯಕರ ಆಗಾಗ ಫೋನ್ ಮಾಡಿ ಮೊನಾಳನ್ನ ಬ್ಲಾಕ್ ಮೇಲ್ ಮಾಡುತ್ತಾನೆ.
ಅವನ ಬಳಿ ಇರುವ ಫೋಟೋಸ್ , ವೀಡಿಯೋ ವನ್ನ ತರಿಸಿಕೊಳ್ಳಲು ಮೊನಾ ಚಿದಂಬರನ ಸಹಾಯ ಪಡೆಯುತ್ತಾಳೆ. ಚಿದಂಬರನ ಫ್ಲಾಟ್ ಗೆ ಬರುವ ಪ್ರೇಯಕರ ಸಾವಿಗೀಡಾಗುತ್ತಾನೆ. ಗಾಬರಿಕೊಳ್ಳುವ ಚಿದಂಬರ ಮುಂದೆ ಏನು ಮಾಡಬೇಕೆಂಬ ಆತಂಕ ಎದುರಾಗುತ್ತದೆ. ಇದರ ನಡುವೆ ಚಿದಂಬರನ ಫ್ಲಾಟ್ ಗೆ ಪ್ರೇಯಸಿ ತನ್ನ ಗೆಳೆತಿಯರೊಟ್ಟಿಗೆ ಬರ್ತಡೇ ಪಾರ್ಟಿ ಮಾಡಲು ಬರುತ್ತಾಳೆ.
ಡಾನ್ ತನ್ನ ಫೋನ್ ಶಿಷ್ಯನ ಬಳಿ ಸೇರಿಕೊಂಡಿದೆ ಅದು ಇಂಪಾರ್ಟೆಂಟ್ ಹುಡುಕಿಕೊಟ್ಟರೆ ಹಣ ನೀಡುವುದಾಗಿ ಪೊಲೀಸ್ ಇನ್ಸ್ಪೆಕ್ಟರ್ ಗೆ ಹೇಳುತ್ತಾನೆ. ಜೊತೆಗೆ ಇವನ ಶಿಷ್ಯಂದರು ಹುಡುಕಲು ಮುಂದಾಗುತ್ತಾರೆ. ಇನ್ನು ಫೋಟೋ , ವೀಡಿಯೋಸ್ ಸಿಗದ ಮೊನಾ ಕೂಡ ಇನ್ನೊಂದು ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾಳೆ. ಇದೆಲ್ಲವೂ ಒಂದಕ್ಕೊಂದು ಲಿಂಕ್ ಆಗುತ್ತಾ ಕ್ಲೈಮ್ಯಾಕ್ಸ್ ಕುತೂಹಲ ಹಂತಕ್ಕೆ ಬಂದು ನಿಲ್ಲುತ್ತದೆ.
ಫೋಟೋ ವಿಡಿಯೋ ಸಿಗುತ್ತಾ…
ಪ್ರಿಯಕರ ಸತ್ತಿದ್ದು ಹೇಗೆ…
ಮೊನಾ ಏನಾಗ್ತಾಳೆ…
ಚಿದಂಬರ ಕಥೆ ಏನಾಗುತ್ತೆ…
ಇದಕ್ಕೆಲ್ಲ ಉತ್ತರ ಈ ಚಿತ್ರ ನೋಡಬೇಕು .
ಇನ್ನೂ ನಿರ್ದೇಶಕ ಅನಂದರಾಜ್ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದ್ದು , ಚಿತ್ರಕಥೆಯ ಶೈಲಿಯು ಗಮನ ಸೆಳೆಯುವಂತಿದೆ. ಸುಂದರ ಬದುಕು ಕಟ್ಟಿಕೊಳ್ಳುವವನ್ನ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ಬಹಳ ಕುತೂಹಲಕಾರಿ ತೆರೆ ಮೇಲೆ ತಂದಿದ್ದಾರೆ. ವಿಧಿಯ ಆಟದಂತೆ ಬದುಕು ಎನ್ನುವ ಹಾಗೆ ನಿರ್ದೇಶಕ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನು ಇಂತಹ ಕುತೂಹಲಕಾರಿ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕಿ ರೂಪ ಧೈರ್ಯವನ್ನು ಮೆಚ್ಚುವಂಥದ್ದು, ಇನ್ನು ಈ ಚಿತ್ರದ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದ್ದು , ಛಾಯಾಗ್ರಾಹಕರ ಕೈಚಳಕವು ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮಪಟ್ಟಿರುವುದು ಕಾಣುತ್ತದೆ.
ಇನ್ನು ನಾಯಕನಾಗಿ ಅಭಿನಯಿಸಿರುವ ಅನಿರುದ್ದ್ ಜತಕರ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬುವುದರಲ್ಲಿ ಬಹಳಷ್ಟು ಶ್ರಮಪಟ್ಟಿದ್ದಾರೆ. ಇನ್ನಷ್ಟು ಲೀಲಾಜಾಲವಾಗಿ ಮಿಂಚಬಹುದಿತ್ತು. ಇನ್ನು ನಾಯಕಿಯರಾದ ನಿಧಿ ಸುಬ್ಬಯ್ಯ , ರೆಚೆಲ್ ಡೇವಿಡ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ವಿಭಿನ್ನ ಪಾತ್ರದಲ್ಲಿ ಶಿವಮಣಿ , ಇನ್ಸ್ಪೆಕ್ಟರ್ ಪಾತ್ರದಲ್ಲಿ ಶರತ್ ಲೋಹಿತಾಶ್ವ , ಶ್ರೀಮಂತ ಒಡೆಯನಾಗಿ ಸಿದ್ಲಿಂಗು ಶ್ರೀಧರ್ , ಕರಿಸುಬ್ಬು , ಮಾಲ್ತೇಶ್ ಹಿರೇಮಠ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಎಲ್ಲರೂ ಒಮ್ಮೆ ಈ ಚಿತ್ರ ನೋಡಬಹುದು