ಯುವ ಪ್ರತಿಭೆಗಳ “ಕ್ರಷ್” ಚಿತ್ರದ ಟ್ರೈಲರ್ ಹಾಗೂ ಹಾಡು ರಿಲೀಸ್
ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಪ್ರತಿಭೆಗಳು ವಿಭಿನ್ನ ಕಥಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಆ ನಿಟ್ಟಿನಲ್ಲಿ ಒಂದು ಯೂಥ್ ಕಂಟೆಂಟ್ ನೊಂದಿಗೆ ಅಪ್ಪ – ಮಗ , ತಾಯಿ – ಮಗಳ ಬಾಂಧವ್ಯದ ಕಥೆಯ ಮೂಲಕ ಬೆಳ್ಳಿ ಪರದೆ ಮೇಲೆ ಬರಲು ಸಿದ್ಧವಾಗಿರುವಂತಹ ಚಿತ್ರವೇ “ಕ್ರಷ್”. ಮಾಸ್ತಿ ಗುಡಿ ಚಿತ್ರದ ನಿರ್ಮಾಪಕ ಸುಂದರ್ ರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಈ “ಕ್ರಷ್” ಚಿತ್ರದ ಟ್ರೈಲರ್ ಹಾಗೂ ಒಂದು ಹಾಡನ್ನು ಬಿಡುಗಡೆ ಮಾಡಿ ಯುವ ಪ್ರತಿಭೆಗಳು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೊಂದು ಪ್ರಾಮಿಸ್ ಟ್ರೈಲರ್ ಅನ್ಸುತ್ತೆ , ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು. ಈ ಚಿತ್ರದ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಯೋಜನೆ ಮಾಡಿತ್ತು.
ಈ ಕ್ರಷ್ ಚಿತ್ರದ ಕುರಿತು ನಿರ್ದೇಶಕ ಅಭಿ.ಎನ್ ಮಾತನಾಡುತ್ತಾ ನಾನು ನಿರ್ಮಾಪಕರು ಆರು ವರ್ಷದ ಸ್ನೇಹಿತರು , ಅವರ ಮಗಳ ಅಭಿನಯದ ಒಂದು ವೆಬ್ ಸೀರೀಸ್ ಮಾಡಿದ್ದೆ. ಅವರು ಮಾತು ಕೊಟ್ಟಿದ್ದರು, ಅದರಂತೆ ಇವತ್ತು ನಾನು ನಿರ್ದೇಶಕನಾಗಿದ್ದೇನೆ. ಒಂದಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ.
ಇನ್ನು ಚಿತ್ರದ ಬಗ್ಗೆ ಹೇಳಬೇಕಾದರೆ ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನರ ಜೀವನದಲ್ಲಿ ಕ್ರಷ್ ಅನ್ನೋದು ಇರುತ್ತದೆ. ಈ ಸಿನಿಮಾ ಮಾಡೋದಕ್ಕೆ ಜಗ್ಗೇಶ್ ಸರ್ ಇನ್ಸ್ಪಿರೇಷನ್ , ಯಾಕೆಂದರೆ ಒಂದು ಟಿವಿ ಶೋಲಿ ಮಾತನಾಡುತ್ತಾ ನನ್ನ ತಂದೆ ತಾಯಿಯ ಜೊತೆ ಚಿಕ್ಕ ಹುಡುಗ ನಾನು ಮದುವೆ ಫಂಕ್ಷನ್ ಗೆ ಹೋದಾಗ ನಾನು ಯಾವಾಗ ಮದುವೆ ಆಗೋದು ಅನ್ಕೊಂಡಿದ್ದೆ ಎಂಬ ಜಗ್ಗೇಶ್ ಮಾತು ಕೇಳಿ, ಆ ಒಂದು ಲೈನ್ ಇಟ್ಕೊಂಡು ಚಿಕ್ಕ ಹುಡುಗ ಈ ನಡುವಳಿಕೆ ಹೇಗಿರುತ್ತೆ , ಮುಂದೆ ಅವನ ಜೀವನದಲ್ಲಿ ಏನೆಲ್ಲಾ ಎದುರಿಸುತ್ತಾನೆ, ಅವನಿಗೆ ಬಹಳಷ್ಟು ಜನರ ಮೇಲೆ ಕ್ರಷ್ ಆಗುತ್ತದೆ.
ನಂತರ ಹೀರೋಯಿನ್ ಮೇಲು ಕ್ರಷ್ ಆ. ಇದರ ಜೊತೆಗೆ ತಂದೆ ಮಗನ ಸೆಂಟಿಮೆಂಟ್ , ತಾಯಿ ಮಗಳ ಬಾಂಧವ್ಯ , ಲವ್ , ಸೆಂಟಿಮೆಂಟ್ , ಕುತೂಹಲವು ಒಳಗೊಂಡಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಅಭಿನಯ ರವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ಮಂಜುನಾಥ್ ಹೆಗಡೆ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ , ಹೀರೋಯಿನ್ , ಸೇರಿದಂತೆ ಎಲ್ಲರೂ ತುಂಬಾ ಸಹಕಾರ ನೀಡಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದೆ. ಎರಡು ಮಾಂಟೆಜ್ ಸಾಂಗ್ ಗೆ ನಾನೇ ಕೊರಿಯೋಗ್ರಾಫಿಕ್ ಮಾಡಿದ್ದೇನೆ. ಈ ಚಿತ್ರವು ಡೈಲಾಗ್ ಮೇಲೆ ನಿಂತಿದೆ. ಹೀರೋಯಿನ್ ಹೈಲೈಟ್ ಆಗುತ್ತಾರೆ. ಈ ಚಿತ್ರ ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ. ನೀವೆಲ್ಲರೂ ನೋಡಿ ನಮ್ಮನ್ನ ಬೆಳೆಸಿ ಎಂದರು.
ಈ ಚಿತ್ರದ ನಿರ್ಮಾಪಕರಾದ ಎಸ್ .ಚಂದ್ರ ಮೋಹನ್ ಮಾತನಾಡುತ್ತಾ ತುಂಬಾ ಫ್ಯಾಷನ್ ಆಗಿ ಈ ಸಿನಿಮಾ ಮಾಡಬೇಕು ಅಂತ ಬಂದೆ. ಅದರಂತೆ ಸಿನಿಮಾ ಮೂಡಿ ಬಂದಿದೆ. ನಮ್ಮ ಸಿನಿಮಾಗೆ ನಟಿ ಅಭಿನಯ ರವರ ಪಾತ್ರ ಪ್ರಮುಖವಾಗಿದೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಇಷ್ಟಪಟ್ಟು ಸಿನಿಮಾ ಚಿತ್ರಮಂದಿರಕ್ಕೆ ಬಂದು ನೋಡಬೇಕು, ಈ ಚಿತ್ರ 2020 ರಲ್ಲಿ ಆರಂಭ ಗೊಂಡಿದ್ದು, ನಮಗೆ ಸೆನ್ಸರ್ನಿಂದ ಯು/ಎ ಸಿಕ್ಕಿದೆ. ತಂದೆ, ಮಗ, ತಾಯಿ ಮಗಳ ನಡುವಿನ ಕಥೆಯನ್ನು ಆದರಿಸಿ ಚಿತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ನಾನು ಒಂದು ಪಾತ್ರವನ್ನು ಮಾಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದು ಕೇಳಿಕೊಂಡು ಎಂದರು.
ಇನ್ನು ಚಿತ್ರದ ನಾಯಕ ಪಂಚಾಕ್ಷರಿ (ಆರ್ಯ) ಮಾತನಾಡುತ್ತಾ ನಾನು 2018 ರಲ್ಲಿ ರಂಗ್ ಬಿ ರಂಗಿ ನಂತರ ಎರಡನೇ ಸಿನಿಮಾ ಇದೆ ಅಂತರಂಗ ಶುದ್ದಿ, ಈಗ ನನ್ನ ಕನಸು ಕ್ರಷ್ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ. ನಿರ್ಮಾಪಕರು ತುಂಬಾ ಸಹಕಾರ ನೀಡಿ ಎಲ್ಲಾ ಕೆಲಸದಲ್ಲೂ ತುಂಬಿಸಿಕೊಂಡು ಈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ಮಿಸಿದ್ದಾರೆ. ನಿರ್ದೇಶಕರು ಕೂಡ ಬಹಳ ಶ್ರಮಪಟ್ಟು ಈ ಚಿತ್ರವನ್ನು ಮಾಡಿದ್ದಾರೆ.
ಎಂಗ್ ಟ್ಯಾಲೆಂಟ್ ಡೈರೆಕ್ಟರ್ ಜೊತೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ನಮ್ಮನ್ನ ಚೆನ್ನಾಗಿ ಮೋಲ್ಡ್ ಮಾಡಿ ಪಾತ್ರವನ್ನು ತೆಗೆಸಿದ್ದಾರೆ. ಕ್ರಷ್ ಚಿತ್ರ ಭಾವನೆಗಳ ತಿರುವಿನ ಸೇತುವೆ, ಕರ್ಣ ಎನ್ನುವ ಪಾತ್ರ, ತಂದೆಯೇ ಸರ್ವಸ್ವ, ಸಿಕ್ಕ ಸಿಕ್ಕವರೇ ಪ್ರಪೋಸ್ ಮಾಡ್ತಾನೆ. ಹುಡುಗಿ ಸಿಕ್ಕಾಗ ಜರ್ನಿ ಮಾಡ್ತಾನೆ. ಒಂದಷ್ಟು ತಿರುವು ಈ ಚಿತ್ರದಲ್ಲಿ ಇದೆ. ಖಂಡಿತ ನಿಮಗೆಲ್ಲರಿಗೂ ಇಷ್ಟವಾಗುತ್ತೆ ಎಂದರು.
ನಾಯಕಿ ಪ್ರತಿಭಾ ಸೂಫಿಮಟ್ ಮಾತನಾಡುತ್ತಾ ಇದು ನನ್ನ ಎರಡನೇ ಸಿನಿಮಾ ಈ ಹಿಂದೆ ನಾನು ಅಂತರಂಗ ಶುದ್ದಿ ಅನ್ನೋ ಸಿನಿಮಾ ಮಾಡಿದೆ. ತುಂಬಾ ಬೋಲ್ಡ್ ಹುಡುಗಿಯ ಪಾತ್ರ ನನ್ನದು , ಹಾಗೆ ತಾಯಿ ಮಗಳ ಸೆಂಟಿಮೆಂಟ್ ಇದೆ. ತಾಯಿಯನ್ನು ಹುಡುಕೊಂಡು ಹೋಗುವ ನನಗೆ ಸಿಕ್ತಾರಾ ಇಲ್ವಾ ಅನ್ನೋದು ಒಂದು ಮುಖ್ಯ ಕಥೆಯಾಗಿದೆ. ಹೀರೋ ಮೂಲಕ ಈ ತಂಡಕ್ಕೆ ಸೇರಿಕೊಂಡೆ, ಆಡಷನ್ ಮೂಲಕ ಆಯ್ಕೆಯಾಗಿದ್ದೇನೆ ಎಂದರು.
ಇನ್ನು ನಟಿ ಅಭಿನಯ ಮಾತನಾಡುತ್ತಾ ನಿರ್ಮಾಪಕ , ನಿರ್ದೇಶಕರು ನನ್ನ ಮನೆಗೆ ಬಂದು ಪಾತ್ರದ ಬಗ್ಗೆ ವಿವರಿಸಿದಾಗ ಬಹಳ ಖುಷಿಯಾಯಿತು. ನನ್ನ ಕ್ಯಾರೆಕ್ಟರ್ ಬಹಳ ಡಿಫ್ರೆಂಟ್ ಆಗಿ ಮೂಡಿ ಬಂದಿದೆ. ತಾಯಿಯ ಪಾತ್ರ ಬಹಳ ವಿಭಿನ್ನವಾಗಿದೆ, ಕೆಲವು ಸೀನ್ ನಲ್ಲಿ ಗ್ಲಿಸರಿನ್ ಇಲ್ಲದೆ ಕಣ್ಣೀರು ಹಾಕುವ ಪಾತ್ರವ ನೀಡಿದ್ದಾರೆ. ತುಂಬಾ ಕ್ರಿಯೇಟಿವ್ ಡೈರೆಕ್ಟರ್, ಹೀಗೆ ಬೇಕು ಎಂದು ಕೆಲಸ ಮಾಡಿಸಿಕೊಂಡಿದ್ದಾರೆ.
ನಿರ್ಮಾಪಕರು ಎಲ್ಲಾ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ವಹಿಸಿಕೊಂಡಿದ್ದಾರೆ. ಇದರಲ್ಲಿ ಎಮೋಷನ್ , ಪರಿಶುದ್ಧ ಪ್ರೀತಿ ಒಳಗೊಂಡಿದೆ. ಈ ಚಿತ್ರವನ್ನು ಎಲ್ಲರೂ ನೋಡಿ ಬೆಂಬಲಿಸಿ ಎಂದರು. ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ನೀಡಿದ್ದು , ಸಿ . ಎಸ್. ಸತೀಶ್ ಛಾಯಾಗ್ರಹಣ , ಸಂಭಾಷಣೆ ವಸಂತ್ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು, ಮುಂದಿನ ಫೆಬ್ರವರಿಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ.