ಡಿಸೆಂಬರ್ 06ಕ್ಕೆ “ ಧೀರ ಭಗತ್ ರಾಯ್” ಚಿತ್ರ ಬಿಡುಗಡೆ
ಪುಷ್ಪ 2 ನಂಥ ಬಿಗ್ ಸಿನಿಮಾದೆದುರು ಕರ್ಣನ್ ಅವರ ನಿರ್ದೇಶನದ ಧೀರ ಭಗತ್‌ರಾಯ್ ಚಿತ್ರ ಬಿಡುಗಡೆಯಾಗಲಿದೆ. ಈ ಹಿಂದೆ ಬಾಹುಬಲಿಯಂಥ ದೊಡ್ಡ ಚಿತ್ರದ ಎದುರು ರಂಗಿತರಂಗ ಸಿನಿಮಾ ಗೆದ್ದಂಥ ಇತಿಹಾಸವೇ ನಮಗೆ ಧೈರ್ಯ ಎಂದು ಚಿತ್ರತಂಡ ಹೇಳಿಕೊಂಡಿದೆ. ಜೈಭೀಮ, ವಿಸಾರಣೈ ಚಿತ್ರಗಳ ಛಾಯೆ ಈ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದ್ದು, ಇದು ಅದೇ ಕಥೆಯಾ..? ಧೀರ ಭಗತ್‌ರಾಯ್ ಚಿತ್ರದ ಅಸಲಿ ಕಥೆಯೇನು..? ಎಂಬುದಕ್ಕೆ ಚಿತ್ರತಂಡ ಸಿನಿಮಾ ರಿಲೀಸಾದ ನಂತರ ಉತ್ತರ ಸಿಗಲಿದೆ ಎಂದು ಹೇಳಿದೆ, ಧೀರ ಭಗತ್ ರಾಯ್, ಯಾವ ದೊಡ್ಡ ಚಿತ್ರಕ್ಕೂ ಕಮ್ಮಿಯಿಲ್ಲ ಎಂದು ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಅವರು ಹೇಳಿದ್ದಾರೆ.
ಈ ಚಿತ್ರದಲ್ಲಿ ರಾಕೇಶ್ ದಳವಾಯಿ ಅವರು ನಾಯಕನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಸುಚಾರಿತಾ ನಟಿಸಿದ್ದಾರೆ. ಡಿಸೆಂಬರ್ 6ರಂದು ರಾಜ್ಯದಾದ್ಯಂತ ರಿಲೀಸಾಗುತ್ತಿರುವ ಈ ಚಿತ್ರದ ಪತ್ರಿಕಾಗೋಷ್ಟಿ ಅಭಿಮಾನಿ ವಸತಿ ಹೋಟೆಲ್ ನಲ್ಲಿ ನೆರವೇರಿತು,
ಈ ಚಿತ್ರವನ್ನು ಪ್ರವೀಣ್‌ಗೌಡ ಅವರು ನಿರ್ಮಾಣ ಮಾಡಿದ್ದು ಕರ್ಣನ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಹೋರಾಟಗಾರ ಭಾಸ್ಕರ ಪ್ರಸಾದ್ ಮಾತನಾಡುತ್ತ ಪರಭಾಷಾ ಸಿನಿಮಾ ಹಾವಳಿಗೆ ನಾವ್ ಬಗ್ಗಲ್ಲ, ಪುಷ್ಪ-2 ಚಿತ್ರದಿಂದ ಸಮಸ್ಯೆ ಆದ್ರೆ, ಉಗ್ರ ಹೋರಾಟ ಮಾಡೋದು ಗ್ಯಾರಂಟಿ ಎಂದು ಹೇಳಿದರು, ನಮ್ಮ ಸೊನಿಮಾ ಜೈಭೀಮಾ, ವಿಸಾರಣೈ ಹಾಗೂ ಕಾಟೇರ ರೀತಿ ಕಾಣ್ತಿದೆ ಅಂದ್ರೆ ಅದು ನಿಜ, ಅಷ್ಟು ಗುಣಮಟ್ಟದಲ್ಲಿ ಈ ಚಿತ್ರವನ್ನು ಎಲ್ಲಾ ಆಯಾಮದಲ್ಲೂ ನಿರ್ಮಿಸಲಾಗಿದೆ. ಧೀರ ಭಗತ್ ರಾಯ್ ಕನ್ನಡ ಚಿತ್ರರಂಗದಲ್ಲಿ ಹೊಸ ಪರ್ವಕ್ಕೆ ಕಾರಣವಾಗಬಹುದು ಅನ್ನೋ ನಿರೀಕ್ಷೆ ಇದೆ ಎಂದ ಚಿತ್ರತಂಡ ಹೇಳಿಕೊಂಡಿದೆ.
ದರ್ಶನ್ ಅವರ ಕಾಟೇರನಂತೆಯೇ ಧೀರ ಭಗತ್‌ರಾಯ್ ಅದೇ ಕಾಲಘಟ್ಟದಲ್ಲಿ ನಡೆಯೋ ಬೇರೆ ಆಯಾಮದ ಚಿತ್ರ. ಸ್ಯಾಂಡಲ್‌ವುಡ್ ಸಲಗ ವಿಜಯ್‌ಕುಮಾರ್ ಅವರು ನಮ್ಮ ಬೆನ್ನಿಗೆ ನಿಂತಿದ್ದಾರೆ, ನಮಗೆ ಅವ್ರು ದೊಡ್ಡ ಶಕ್ತಿ. ಧೀರ ಭಗತ್‌ರಾಯ್ ಟ್ರೈಲರ್ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದೆ. ಮಾಧ್ಯಮದ ಸಹಕಾರ ನಮಗೆ ಈ ಧೈರ್ಯ ಕೊಟ್ಟಿದೆ. ಡಿಸೆಂಬರ್ 6ಕ್ಕೆ ನಾವು ನಿಮ್ಮ ಮುಂದೆ ಬರ್ತಿದ್ದೀವಿ.
ಕಾಟೇರ ಚಿತ್ರದಲ್ಲಿ ಕೆಲಸ ಮಾಡಿದ ಸೌಂಡ್ ಡಿಸೈನರ್ ನಮ್ಮ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಮ್ಯೂಸಿಕಲಿ ಇದೊಂದು ದೊಡ್ಡ ಕಮರ್ಷಿಯಲ್ ಪ್ರಯೋಗವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕರ್ಣನ್ ಅನ್ನೋ ಯುವ ನಿರ್ದೇಶಕ ಈ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಯುವನಟ ರಾಕೇಶ್ ದಳವಾಯಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸೋದಕ್ಕೆ ಸಜ್ಜಾಗಿದ್ದು, ನಾಯಕಿಯಾಗಿ ಸುಚರಿತಾ ಎಂಬ ಹೊಸ ಮುಖ ಪರಿಚಯವಾಗ್ತಿದೆ.
ಇವರ ಜೊತೆಗೆ ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಪ್ರವೀಣ್‌ಗೌಡ ಹೆಚ್.ಸಿ, ಹರಿರಾಮ್ , ಕೆ.ಎಮ್. ಸಂದೇಶ್ ಸೇರಿದಂತೆ ಪ್ರತಿಭಾನ್ವಿತರ ತಾರಾಬಳಗವೇ ಈ ಚಿತ್ರದಲ್ಲಿದೆ. ವೈಟ್ ಲೋಟಸ್ ಎಂಟರ್‌ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ತಾಂತ್ರಕವಾಗಿ ಸಖತ್ ಸ್ಟ್ರಾಂಗ್ ಆಗಿ ಮೂಡಿಬಂದಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಎನ್.ಎಂ. ವಿಶ್ವ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.