ಡಬ್ಬಿಂಗ್ ಮುಗಿಸಿದ “ಕಬಂಧ” ಚಿತ್ರ.
ಕುಂಜಾರ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಕಬಂಧ ಚಿತ್ರಕ್ಕೆ ರಾಜರಾಜೇಶ್ವರಿ ನಗರದಲ್ಲಿರುವ ಟಾಪ್ಸ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯ ಹುಟ್ಟಿಸಿತ್ತು. ಇದರ ಜೊತೆಗೆ ಹಾರರ್ ರೂಪದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸತ್ಯನಾತ್ ಈ ಚಿತ್ರದ ನಿರ್ದೇಶಕರು. ವಿಷ್ಣು ಪ್ರಸಾದ್ ಛಾಯಾಗ್ರಹಣ , ಸತ್ಯಜಿತ್ ಸಿದ್ದಕಾಂತ್, ̧ ಸಂಗೀತ ಸಾನಿತೇಜ್, ಈ ಚಿತ್ರವನ್ನು ದಾವಣಗೆರೆ, ತುಮಕೂರು ಸೇರಿದಂತೆ ಮುಂತಾದಡೆ 40 ದಿನ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕೆ ಸಾಹಿತ್ಯ ಕೆ .ಕಲ್ಯಾಣ್ ಬರೆದಿದ್ದು, ಈ ಚಿತ್ರದ ತಾರಾಗಣದಲ್ಲಿ ಪ್ರಸಾದ್ ವಶಿಷ್ಠ , ಪ್ರಿಯಾಂಕ ಮಲ್ಲಾದಿ , ಕಿಶೋರ್ ಕುಮಾರ್, ಅವಿನಾಶ್, ನಿರ್ದೇಶಕ ಯೋಗರಾಜ್ ಭಟ್, ವಂದನ, ವಚನ, ವಿಶಾಲ್, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್ ಸಿದ್ಧಿ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.