ಹಿರಿಯ ನಟ ನಿರ್ಮಾಪಕ ದ್ವಾರಕೇಶ್ ಇನ್ನಿಲ್ಲ..
ಕರ್ನಾಟಕದ ಕುಳ್ಳ ಎಂದೆ ಖ್ಯಾತಿ ಪಡೆದ ಹಿರಿಯ ನಟ , ನಿರ್ಮಾಪಕ , ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ. ಇಂದು ಅವರ ನಿವಾಸದಲ್ಲಿ ವಯೋ ಸಹಜ ಕಾಯಿಲೆಯಿಂದ 81 ವರ್ಷದ ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದಾರೆ. ಸರಿಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಈ ಹಿರಿಯ ನಟ ಕನ್ನಡ ಚಿತ್ರರಂಗದ ಮೇರು ನಟರುಗಳಾದ ನಟ ಡಾ. ರಾಜ್ ಕುಮಾರ್ , ವಿಷ್ಣುವರ್ಧನ್ , ಅಂಬರೀಶ್, ಶಂಕರ್ ನಾಗ್, ಸೇರಿದಂತೆ ಹಲವಾರು ಯುವ ನಟರ ಜೊತೆ ಕೂಡ ಅಭಿನಯಿಸಿ ಎಲ್ಲರ ಪ್ರೀತಿ , ವಿಶ್ವಾಸವನ್ನು ಗಳಿಸಿದಂತ ಹಾಸ್ಯ ನಟರು.
ಬೆಳ್ಳಿ ಪರದೆಯ ಮೇಲೆ ಮೇಯರ್ ಮುತ್ತಣ್ಣ , ಭಾಗ್ಯವಂತರು , ಗುರು ಶಿಷ್ಯರು, ನ್ಯಾಯ ಎಲ್ಲಿದೆ, ಕಿಟ್ಟು ಪುಟ್ಟು, ನೀ ಬರೆದ ಕಾದಂಬರಿ , ಗೆದ್ದ ಮಗ , ಪೋಲಿಸ್ ಪಾಪಣ್ಣ , ಆಫ್ರಿಕಾದಲ್ಲಿ ಶೀಲಾ, ಪ್ರಚಂಡ ಕುಳ್ಳ , ಸಿಂಗಾಪುರ್ ನಲ್ಲಿ ರಾಜಾಕುಳ್ಳ , ಶೃತಿ, ಡ್ಯಾನ್ಸ್ ರಾಜ ಡ್ಯಾನ್ಸ್ , ಆಪ್ತಮಿತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಮತ್ತು ಕೆಲವು ಸಿನಿಮಾ ನಿರ್ದೇಶನ , ನಿರ್ಮಾಣದ ಜೊತೆ ತಮಿಳು , ಹಿಂದಿ ಚಿತ್ರವನ್ನು ಕೂಡ ನಿರ್ಮಿಸಿರುವ ಈ ಹಿರಿಯ ಕೊಂಡಿ ಕಳಚಿಕೊಂಡಿರುವುದು ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಆಗಿದೆ.
ದ್ವಾರಕೇಶ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ , ರಾಜಕೀಯ ರಂಗದ ಹಲವಾರು ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇದು ಅಭಿಮಾನಿಗಳು ಹಾಗೂ ಚಿತ್ರ ಪ್ರೇಮಿಗಳಿಗೆ ತುಂಬಲಾರದ ನಷ್ಟವಾಗಿದ್ದು , ಈ ಹಿರಿಯ ನಟನ ಅಂತಿಮ ವಿಧಿ ವಿಧಾನ ಕಾರ್ಯ ಟಿ. ಆರ್ರ್ ಮಿಲ್ ನ ಹರಿಶ್ಚಂದ್ರ ಘಾಟ್ನೋ ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದರು. ಬಹಳಷ್ಟು ಅಭಿಮಾನಿಗಳನ್ನ ಹೊಂದಿರುವ ಹಿರಿಯ ನಟ ದ್ವಾರಕೀಶ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.