ಹ್ಯಾಕರ್ಸ್ ಸುಳಿಯಲ್ಲಿ ಮೈಂಡ್ ಗೇಮ್ ಆಟ ‘ಇ -ಮೇಲ್'(ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಇ -ಮೇಲ್
ನಿರ್ದೇಶಕ , ನಿರ್ಮಾಪಕ : ಎಸ್. ಆರ್ . ರಾಜನ್
ಸಂಗೀತ : ಗವಾಸ್ಕರ್
ಛಾಯಾಗ್ರಹಕ : ಸೆಲ್ವಂ
ತಾರಾಗಣ : ರಾಗಿಣಿ ದ್ವಿವೇದಿ, ಅಶೋಕ್ ಕುಮಾರ್, ಆದವ ಬಾಲಾಜಿ, ಮನೋಬಲ, ಬಿಲ್ಲಿ , ಅಕ್ಷಯ್ ರಾಜ್, ಅರತಿ ಶ್ರೀ, ಮಂಜು ಹಾಗೂ ಮುಂತಾದವರು…
ಜೀವನದಲ್ಲಿ ದುಡ್ಡು ಎಷ್ಟು ಮುಖ್ಯವೋ… ಬದುಕು ಕೂಡ ಅಷ್ಟೇ ಮುಖ್ಯ… ತಂತ್ರಜ್ಞಾನ ಬೆಳೆದಂತೆ ಲ್ಯಾಪ್ ಟ್ಯಾಪ್ , ಮೊಬೈಲ್ , ಆನ್ ಲೈನ್ ಗೇಮ್ , ಹ್ಯಾಕರ್ಸ್ ಗಳ ಹಾವಳಿಯಿಂದಾಗುವ ಎಡವಟ್ಟುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಶ್ರೀಮಂತರು , ಮುಗ್ಧರ ಸುತ್ತ ಹೆಣೆದಿರುವ ಕಥಾನಕದಲ್ಲಿ ಹೆಣ್ಣು ಒಬ್ಬಳ ಮೈಂಡ್ ಗೇಮ್ ಏನೆಲ್ಲಾ ಮಾಡುತ್ತೆ ಎಂಬುದನ್ನು ಹೇಳ ಹೊರಟಿರುವ ಚಿತ್ರ “ಇಮೇಲ್”. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಮಗು ತಾಯಿ ಸತ್ತ ನಂತರ ಮನೆ ಕೆಲಸದವರ ಮೋಸಕ್ಕೆ ಸಿಲುಕಿ ಮನೆಯಿಂದ ಹೊರ ಬರುತ್ತಾಳೆ.
ಬೆಳೆಯುತ್ತಾ ಗೆಳತಿಯವರೊಂದಿಗೆ ಪಿಜಿಯಲ್ಲಿ ವಾಸ ಮಾಡುತ್ತಾ ರಿಯಲ್ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡಿದರು ಕೈಗೆಟಿಕದ ಸಂಬಳ. ಬಾಡಿಗೆ ಕಟ್ಟಲು ಕಷ್ಟ ಪರಿಸ್ಥಿತಿ ಎದುರಿಸುತ್ತಾ ಬೇರೆ ಕೆಲಸಕ್ಕಾಗಿ ಹುಡುಕಾಟದ ಸಮಯದಲ್ಲಿ ಇಮೇಲ್ ಮೂಲಕ ಲಿಂಕ್ ಸಿಗುವ ಆನ್ಲೈನ್ ಗೇಮ್ ಗೆ ಎಂಟ್ರಿ ಕೊಡುವ ಅಭಿ (ರಾಗಿಣಿ ದ್ವಿವೇದಿ) ಆರಂಭದಲ್ಲೇ ಲಕ್ಷಗಳ ನೋಡುತ್ತಾ ಸಂಪೂರ್ಣ ಗೇಮ್ ನಲ್ಲಿ ಮುಳುಗುತ್ತಾರೆ. ನಂತರ ಹ್ಯಾಕರ್ಸ್ ಸುಳಿಗೆ ಸಿಲುಕಿ ಅವರು ಹೇಳಿದಂತೆ ಕೆಲಸ ಮಾಡುವ ಸ್ಥಿತಿಗೆ ಬರುತ್ತಾಳೆ.
ಇದು ತನ್ನ ಗೆಳತಿಯರಿಗೆ ಗೊತ್ತಿದ್ದರೂ ಏನು ಮಾಡಿದ ಪರಿಸ್ಥಿತಿ ಇರುವಾಗ ಆಚಾನಕ್ಕಾಗಿ ಭೇಟಿಯಾಗುವ ವಿಮಲ್ (ಅಶೋಕ್ ಕುಮಾರ್) ಆಕೆಯ ಸ್ನೇಹ ಸಂಪರ್ಕದಿಂದ ಅವಳನ್ನು ಇಷ್ಟಪಟ್ಟು ಮದುವೆಯು ಆಗುತ್ತಾನೆ. ಅಭಿಯ ಪರದಾಟ ನೋಡುವ ವಿಮಲ್ ಆಕೆಯನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಾನೆ. ಆದರೆ ಅಭಿ ತನ್ನದೇ ಮೈಂಡ್ ಗೇಮ್ ಪ್ಲಾನ್ ಆರಂಭಿಸುತ್ತಾಳೆ.
ಮುಂದೆ ಎದುರಾಗುವ ಈ ಹ್ಯಾಕರ್ಸ್ ಹಾವಳಿಯ ಸಂಚಿಗೆ ಒಂದು ಹಾರ್ಡ್ ಡಿಸ್ಕ್ ಕೇಂದ್ರವಾಗುತ್ತದೆ. ಅದರಲ್ಲಿ ಏನಿದೆ… ಯಾರಿಗೆ ಸಂಬಂಧಪಟ್ಟಿದ್ದು… ಹಾರ್ಡ್ ಡಿಸ್ಕ್ ಸಿಗುತ್ತಾ.. ಇಲ್ವಾ… ಅಭಿ ಪ್ಲಾನ್ ಏನು… ಎಂಬುದನ್ನು ನೋಡಬೇಕಾದರೆ ಇಮೇಲ್ ಚಿತ್ರ ವೀಕ್ಷಸಬೇಕು.
ಪ್ರಸ್ತುತ ನಡೆಯುತ್ತಿರುವ ಆನ್ಲೈನ್ ಗೇಮ್ , ಹ್ಯಾಕರ್ಸ್ಗಳ ಕುತಂತ್ರ, ಸುಳಿವಿಲ್ಲದಂತೆ ಅಮಾಯಕರನ್ನ ಇಕ್ಕಟ್ಟಿಗೆ ಸಿಲುಕಿಸುವ ತಂತ್ರ, ಟಾರ್ಗೆಟ್ ಮಾಡಲು ಹಾಕುವ ಪ್ಲಾನ್,
ಅದು ಎಷ್ಟು ಮಾರಕ, ಯಾರೆಲ್ಲಾರ ಕೈವಾಡ ಇರಬಹುದು ಎಂಬ ಒಂದಷ್ಟು ಸೂಕ್ಷ್ಮ ವಿಚಾರವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ಮಾಪಕ ಹಾಗೂ ನಿರ್ದೇಶಕ ಎಸ್. ಆರ್. ರಾಜನ್.
ಇನ್ನು ಕಥೆ ವಿಶೇಷ ಅನಿಸಿದರೂ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬೇಕಿತ್ತು , ತಾಂತ್ರಿಕವಾಗಿ ತಂಡ ಇನ್ನೂ ಅಚ್ಚುಕಟ್ಟಾಗಿ ಕೆಲಸ ಮಾಡಬಹುದಿತ್ತು. ಇಡೀ ಚಿತ್ರದ ಹೈಲೈಟ್ ಅಂದರೆ ನಟಿ ರಾಗಿಣಿ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಆಕ್ಷನ್ ದೃಶ್ಯಗಳಲ್ಲಿ ಸೈ ಎನ್ನುವಂತೆ ಹೊಡೆದಾಡಿದ್ದಾರೆ. ದುಷ್ಟರ ವಿರುದ್ಧ ಮಾಡುವ ಮೈಂಡ್ ಗೇಮ್ ಪ್ಲಾನ್ ಗಮನ ಸೆಳೆಯುತ್ತದೆ. ಗೆಳೆಯನ ಪಾತ್ರದಲ್ಲಿ ಅಶೋಕ್ ಕುಮಾರ್ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ.
ಇನ್ನು ಉಳಿದಂತೆ ಮನೋಬಲ , ಬಿಲ್ಲಿ, ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು, ಸುನಿಲ್ ಸಫಿ, ರಾಮ್ ಸನ್ನಿ, ಅಜಿತ್ ಕುಮಾರ್, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ ಚಿತ್ರದ ಓಟಕ್ಕೆ ಸಹಕಾರಿಯಾಗಿದ್ದಾರೆ. ಒಟ್ನಲ್ಲಿ ಮೊಬೈಲ್ ಗೇಮ್ ನಿಂದ ಬದುಕಿಗೆ ಎದುರಾಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿರುವ ಈ ಚಿತ್ರವನ್ನು ವಿತರಕ ಸ್ಕೈ ಲೈನ್ ದಿಲೀಪ್ ಕುಮಾರ್ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳು ಸೇರಿದಂತೆ ವಿದೇಶಗಳಲ್ಲೂ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದು ಈ ಚಿತ್ರವನ್ನು ಒಮ್ಮೆ ನೋಡಬಹುದು.