ಈ ವಾರ ತೆರೆಗೆ ಥ್ರಿಲ್ಲರ್ “ಎವಿಡೆನ್ಸ್”
ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೊಂದು ತ್ರಿಕೋನ ಪ್ರೇಮಕಥಾಹಂದರ ಒಳಗೊಂಡ ಚಿತ್ರ ಎವಿಡೆನ್ಸ್ ಈ ಶುಕ್ರವಾರ (ಮೇ.24) ರಾಜ್ಯಾದ್ಯಂತ ತೆರೆ ಕಾಣಲಿದೆ. ನಟ, ನಿರ್ದೇಶಕ ಉಪೇಂದ್ರ ಅವರ ಜೊತೆ ಷ್.. ಚಿತ್ರದಿಂದ ಉಪೇಂದ್ರ-2 ವರೆಗೂ ಕೆಲಸ ಮಾಡಿದ ಪ್ರವೀಣ್ ಸಿ. ಪಿ. ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಶ್ರೀಧೃತಿ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಕೊಡ್ಲಾಡಿ ಸುರೇಂದ್ರ ಶೆಟ್ಟಿ ಅವರು ಅರ್ಪಿಸಿ, ಶ್ರೀನಿವಾಸ್ ಪ್ರಭು ಕೆ.ಮಾದೇಶ್(ಕೋಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಅವರ ನಿರ್ಮಾಣದ ಎವಿಡೆನ್ಸ್ ಚಿತ್ರಕ್ಕೆ ಅರವಿಂದ್ ಅಚ್ಚು, ಎಂ.ಎನ್. ರವೀಂದ್ರರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್ಬಾಬು ಮತ್ತು ನರಸಿಂಹಮೂರ್ತಿ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕನಾಗಿ ಜೋಶ್ ಖ್ಯಾತಿಯ ರೋಬೊ ಗಣೇಶನ್ ಅವರು ನಟಿಸಿದ್ದು, ನಟಿ ಮಾನಸ ಜೋಶಿ ಇಂಟರಾಗೇಶನ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್ಚಂದ್ರ, ಪವನ್ಸುರೇಶ್, ಶಶಿಧರ ಕೋಟೆ, ಮನಮೋಹನ್ ರೈ, ಶಿವಕುಮಾರ್ ಆರಾಧ್ಯ ನಟಿಸಿದ್ದಾರೆ. ಆರೋನ್ ಕಾರ್ತಿಕ್ ವೆಂಕಟೇಶ್ ಅವರ ಸಂಗೀತ, ರವಿ ಸುವರ್ಣ ಅವರ ಛಾಯಾಗ್ರಹಣ, ಆರ್.ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.