Cini NewsMovie ReviewSandalwood

ಫ್ಯಾಮಿಲಿ ಸ್ಕೆಚ್ ಡ್ರಾಮಾ : ಫ್ಯಾಮಿಲಿ ಡ್ರಾಮ ಚಿತ್ರವಿಮರ್ಶೆ (ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಫ್ಯಾಮಿಲಿ ಡ್ರಾಮ
ನಿರ್ದೇಶಕ : ಆಕರ್ಷ್
ನಿರ್ಮಾಪಕ : ದಬ್ಬುಗುಡಿ ಮುರಳಿ ಕೃಷ್ಣ
ಸಂಗೀತ : ಚೇತನ್
ಛಾಯಾಗ್ರಹಣ : ಸಿದ್ಧಾರ್ಥ್
ತಾರಾಗಣ : ಅಭಯ್. ಎಸ್ , ಅನನ್ಯಾ ಅಮರ್, ಸಿಂಧು ಶ್ರೀನಿವಾಸ್ ಮೂರ್ತಿ, ರೇಖಾ ಕೂಡ್ಲಿಗಿ, ಪೂರ್ಣಚಂದ್ರ ಮೈಸೂರು ಹಾಗೂ ಮುಂತಾದವರು…

ಸಾಮಾನ್ಯವಾಗಿ ಡಾರ್ಕ್ ಕಾಮಿಡಿ ಚಿತ್ರಗಳು ಆಕರ್ಷಣೆಯೇ ವಿಭಿನ್ನ , ಅದರಲ್ಲೂ ಫ್ಯಾಮಿಲಿ ಸುತ್ತ ಆವರಿಸಿಕೊಂಡು ಸ್ವಾರ್ಥತೆಯ ನಡುವೆ , ಹಣದ ವ್ಯಾಮೋಹ, ಕೊಲೆಗೆ ಸ್ಕೆಚ್, ಪಾರ್ಟಿ, ಪ್ರೀತಿ , ದ್ರೋಹ , ಸಂಬಂಧಗಳಿಗೆ ಬೆಲೆ ಇಲ್ಲದಂತೆ ಸಾಗುವ ರೋಚಕ ಘಟನೆಗಳ ನಡುವೆ ತಿಳಿದುಕೊಳ್ಳಬೇಕಾದ ಪಾಠವನ್ನು ಸಮರ್ಥವಾಗಿ ತೆರೆ ಮೇಲೆ ತರಲು ಪ್ರಯತ್ನ ಪಟ್ಟಿದ್ದಾರೆ ಫ್ಯಾಮಿಲಿ ಡ್ರಾಮಾ ತಂಡ.

ಪ್ರಕಾಶ್ (ಪೂರ್ಣಚಂದ್ರ) ತನ್ನ ವೈರಿ ಜೋಸೆಫ್ ನನ್ನ ಹುಟ್ಟು ಹಬ್ಬದ ದಿನದಂದು ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಈ ವಿಚಾರ ತಮ್ಮ ಜಿಜಿ ಗೆ ಗೊತ್ತಾಗಿ ಬರುವಷ್ಟರಲ್ಲಿ ಅಣ್ಣ ಸಾಯುತ್ತಾನೆ. ಪ್ರತೀಕಾರ ತೀರಿಸಿಕೊಳ್ಳಲು ತಮ್ಮ ನಿರ್ಧಾರ ಮಾಡುತ್ತಾನೆ. ಇನ್ನು ಮಧ್ಯಮ ವರ್ಗದ ಕುಟುಂಬದ ಆಸೆ , ಆಕಾಂಕ್ಷೆಗಳು, ಕನಸು, ನಿರೀಕ್ಷೆಗಳು ಹೇಳತಿರದು. ಅಲ್ಲೊಂದು ಪುಡಿ ರೌಡಿಗಳ ಗ್ಯಾಂಗ್. ಅವರ ಅಕೌಂಟ್ಗಳನ್ನು ನೋಡಿಕೊಳ್ಳುವ ನಾಯಕ ಅಭಯ್ (ಅಭಯ್. ಎಸ್).

ಈ ತಂಡಕ್ಕೆ ದೇಶಪಾಂಡೆ ಎಂಬ ನಿವೃತ್ತಿ ಪೊಲೀಸ್ ಅಧಿಕಾರಿಯನ್ನ ಕೊಲ್ಲುವ ಪ್ಲಾನ್, ಒಮ್ಮೆ ಸಿಕ್ಕಿ ಕೊಲ್ಲುವಷ್ಟರಲ್ಲಿ ಎಸ್ಕೇಪ್ ಆಗುತ್ತಾನೆ. ಇದ್ದ ಅಭಯ್ ಮನೆಯಲ್ಲಿ ಬಡತನ ತಂದೆ ದುಡಿಮೆ ಬದುಕು ಒಂದೇ ರೀತಿಯಾದರೆ , ತಾಯಿಯ ವ್ಯವಹಾರ , ಮಾತುಕತೆ , ನಡುವಳಿಕೆ ಮತ್ತೊಂದು ರೀತಿ, ಇನ್ನು ಅಕ್ಕನ ಆಸೆ , ಆಕಾಂಕ್ಷೆ , ಜೀವನಶೈಲಿ ಇನ್ನೊಂದು ರೀತಿ.
ಅಭಯ್ ಕೂಡ ಹಣವಿಲ್ಲದ್ದರೂ ಪ್ರೀತಿ , ಆಸೆ , ಕನಸಿಗೇನು ಕಮ್ಮಿ ಇರುವುದಿಲ್ಲ. ಮನೆಯಲ್ಲಿ ಎಲ್ಲರಿಗೂ ಸ್ವಾರ್ಥ ಮನೋಭಾವ. ಗೌಪ್ಯ ನಡುವಳಿಕೆಯಲ್ಲಿ ತಮಗೆ ಇಷ್ಟ ಬಂದಂತೆ ಬದುಕುವ ಇವರು ಅಪ್ಪನಿಂದ ಹಣ ಗಿಟ್ಟಿಸಿಕೊಳ್ಳುವುದೇ ಕಾಯಕ.

ಒಮ್ಮೆ ಹಣದ ಮುಗ್ಗಟ್ಟಿನ ನಡುವೆ ತಂದೆ ಅಚಾನಕ್ಕಾಗಿ ಸಾಯುತ್ತಾನೆ. ಇದು ಮನೆಯವರಿಗೆ ದಿಕ್ಕಿಲ್ಲದಂತ ಸ್ಥಿತಿ. ಇದರ ನಡುವೆ ಒಬ್ಬ ವ್ಯಕ್ತಿ ಬಂದು ನಾಯಕನ ತಂದೆ ಬಗ್ಗೆ ವಿಚಾರಿಸಿ ಒಂದು ಕೊಲೆಯ ಕೊಲೆಗೆ ಸುಪಾರಿ ನೀಡುತ್ತಾನೆ.
ಇದು ಎಲ್ಲಾ ವ್ಯಕ್ತಿಗಳಿಗೂ ಕನೆಕ್ಟ್ ಆಗುತ್ತಾ ಹೋಗುತ್ತದೆ.
ಅದು ಹೇಗೆ… ಏನು…
ನಾಯಕನ ತಂದೆ ಸಾವು ಯಾರಿಂದ… ಸುಪಾರಿ ಕೊಟ್ಟಿದ್ದು ಯಾರು… ಕೊಲ್ಲಲು ಈ ಮೂವರ ಪ್ಲಾನ್ ಏನು…
ಕ್ಲೈಮಾಕ್ಸ್ ಏನು ಹೇಳುತ್ತೆ…
ಇದೆಲ್ಲದಕ್ಕೂ ಉತ್ತರ ನೀವು ಫ್ಯಾಮಿಲಿ ಡ್ರಾಮ ನೋಡಬೇಕು.

ಇನ್ನು ನಿರ್ದೇಶಕ ಆಕರ್ಷ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಭಿನ್ನವಾಗಿದೆ. ಸ್ವಾರ್ಥ ಮನೋಭಾವ , ಹಣದ ವ್ಯಾಮೋಹ , ಮಧ್ಯಮ ವರ್ಗದವರ ಕನಸು , ಆಸೆ , ಅದರಲ್ಲೊಂದು ಪ್ರೀತಿಯ ಸೆಳೆತ, ರೌಡಿಗಳ ಕಾದಾಟವನ್ನು ಹಾಸ್ಯ ಮಿಶ್ರಣದೊಂದಿಗೆ ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಮೊದಲ ಭಾಗ ಮಂದಗತಿ ಅನಿಸಿದರು, ದ್ವಿತೀಯ ಭಾಗ ಕುತೂಹಲಕಾರಿಯಾಗಿದೆ. ಯುವಕರನ್ನ ನಂಬಿ ಇಂತಹ ಚಿತ್ರಕ್ಕೆ ಹಣ ಹಾಕಿರುವ ನಿರ್ಮಾಪಕರ ಧೈರ್ಯ ಮೆಚ್ಚುವಂಥದ್ದು , ಇನ್ನು ಈ ಚಿತ್ರದ ಹೈಲೈಟ್ ಅಂದರೆ ಸಂಗೀತ ನಿರ್ದೇಶಕರ ರೀ ರೆಕಾರ್ಡಿಂಗ್ ಕೆಲಸ ಅದ್ಭುತವಾಗಿದೆ. ಛಾಯಾಗ್ರಾಹಕರ ಕೈಚಳಕ ಸೊಗಸಾಗಿ ಮೂಡಿ ಬಂದಿದೆ.

ಇನ್ನು ನಾಯಕನಾಗಿ ನಟಿಸಿರುವ ಅಭಯ್. ಎಸ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶ್ರಮಪಟ್ಟಿದ್ದಾರೆ. ನಾಯಕಿಯಾಗಿ ಅನನ್ಯ ಅಮರ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಸಿಂಧು ಶ್ರೀನಿವಾಸ್ ಮೂರ್ತಿ ಲೀಲಾಜಾಲವಾಗಿ ಅಭಿನಯಿಸಿ ಗಮನ ಸೆಳೆಯುತ್ತಾರೆ. ತಾಯಿಯ ಪಾತ್ರಧಾರಿ ರೇಖಾ ಕೂಡ್ಲಿಗಿ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ವಿಶೇಷವಾಗಿ ಡಾನ್ ಪಾತ್ರದಲ್ಲಿ ಪೂರ್ಣಚಂದ್ರ ಮೈಸೂರು ಬಹುಮುಖ ಪ್ರತಿಭೆಯಾಗಿ ಮಿಂಚಿದ್ದು ,ಈ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಇನ್ನೂ ಇವರೊಟ್ಟಿಗೆ ಅಭಿನಯಿಸಿರುವ ಬಾಡಿಗಾರ್ಡ್ಸ್ ಪಾತ್ರದಾರಿಗಳು ಕೂಡ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ

error: Content is protected !!