ಫ್ಯಾನ್ಸ್ ಕ್ರಿಕೆಟ್ ಲೀಗ್ ಟ್ರೋಫಿ ಲಾಂಚ್ ಮಾಡಿದ ನಟ ವಸಿಷ್ಠ ಸಿಂಹ
ನಮ್ ಟಾಕೀಸ್ ಸಂಸ್ಥೆಯ ಆಯೋಜನೆಯಲ್ಲಿ ಸತತ ಹತ್ತು ಯಶಸ್ವಿ ಸೀಸನ್ ಗಳನ್ನ ಪೂರೈಸಿಕೊಂಡು ಬಂದಂತಹ ಈ ಪಂದ್ಯಾಟ ಇದೀಗ ಆನಂದ್ ಸ್ಪೋರ್ಟ್ಸ್ ಇಂಡಿಯಾದ ಸಹಕಾರದ ಜೊತೆಗೆ ತನ್ನ ಹನ್ನೊಂದನೇ ಆವೃತ್ತಿಯ ತಯಾರಿಯಲ್ಲಿದೆ. ಇದೇ ಜನವರಿ 27 ಹಾಗು 28ರಂದು ವಿಜಯನಗರದ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಕ್ರಿಕೆಟ್ ಕೂಟದ ಟ್ರೋಫಿ ಲಾಂಚ್ ಅನ್ನ ಕನ್ನಡ ಚಿತ್ರರಂಗದ ಹೆಸರಾಂತ ನಟ, ವಸಿಷ್ಠ ಸಿಂಹ ಅವರು ಅನಾವರಣ ಮಾಡಿಕೊಟ್ಟರು.
ಈ ವೇಳೆ ಮಾತನಾಡಿದ ಅವರು, ಬಹಳ ಹಿಂದೆ ಈ ಪಂದ್ಯಾಟ ಆರಂಭಿಸುವಾಗ ಭರತ್ ಅವರು ಬಂದಾಗಲೂ ಇದೊಳ್ಳೆ ಉದ್ದೇಶ, ಒಳ್ಳೆಯ ಪ್ರಯತ್ನ ಒಳ್ಳೆಯದಾಗಲಿ ಎಂದು ಹಾರೈಸಿ ಕಳಿಸಿದ್ದೆ. ಅದೇ ಪಂದ್ಯಾಟ ಇಷ್ಟು ಯಶಸ್ವಿಯಾಗಿ, ಸತತವಾಗಿ ನಡೆಯುತ್ತಾ ಬರುತ್ತದೆ ಎಂಬ ನಿರೀಕ್ಷೆ ಅಂದು ಇರಲಿಲ್ಲ. ಆದರೆ ಇಂದು ತುಂಬಾ ಅದ್ಭುತವಾಗಿ, ಅಷ್ಟೇ ಯಶಸ್ವಿಯಾಗಿ ಈ ಪಂದ್ಯಾಟವನ್ನ ನಡೆಸಿಕೊಂಡು ಬಂದಿರುವುದು ನೋಡಲು ಸಂತೋಷವಾಗುತ್ತಿದೆ. ಇದೊಂದು ಒಳ್ಳೆಯ ಯೋಜನೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಶುಭಹಾರೈಸಿದರು.
ಈ ಸಮಾರಂಭದಲ್ಲಿ PRO ಸುಧೀಂದ್ರ ವೆಂಕಟೇಶ್, KKR ಮೀಡಿಯಾದ ಲಕ್ಷ್ಮೀಕಾಂತ್ , ಪ್ರಾಯೋಜಕ ರಾಗಿರುವ ಸ್ವಸ್ತಿಕ್ , ಜೊತೆಗೆ ಈ ಪಂದ್ಯಾಟದ ಅತ್ಯದ್ಭುತ ಜರ್ಸಿಗಳನ್ನ ಪ್ರಾಯೋಜಿಸಿರುವ ದಿನೇಶ್ ಅವರು ಸೇರಿದಂತೆ ಹಲವು ಗಣ್ಯವ್ಯಕ್ತಿಗಳ ಹಾಜರಿಯಲ್ಲಿ ಈ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಿತು. ಹಾಗಯೇ MMB ಲೆಗಸಿಯ ವೇದಿಕೆಯನ್ನ ನೀಡಿದ ಮೈ ಮೂವೀ ಬಜಾರ್ ಸಂಸ್ಥೆಯ ನವರಸನ್ ಅವರಿಗೂ ತಂಡ ಕೃತಜ್ಞತೆಗಳನ್ನ ಸಲ್ಲಿಸುತ್ತದೆ. ಜೊತೆಯಲ್ಲಿ ಈ ಯಶಸ್ವಿ ಪಂದ್ಯಾಟದ ಆಯೋಜಕರುಗಳಿಗೆ, ಆಡುವ ತಂಡಗಳ ನಾಯಕರುಗಳ ಸಹಕಾರವನ್ನು ಕೂಡ ತಂಡ ಸ್ಮರಿಸುತ್ತದೆ.
ಇದೆಲ್ಲದರಲ್ಲೂ ಜೊತೆಯಾಗಿ ತಂಡಕ್ಕೆ, ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ಮುಖ್ಯ ಆಧಾರವಾಗಿ ನಿಂತಿರುವಂತಹ ಆನಂದ್ ಸ್ಪೋರ್ಟ್ಸ್ ಇಂಡಿಯಾ ಸಂಸ್ಥೆಯ ಸಂಪೂರ್ಣ ಸಹಕಾರಕ್ಕೆ FCL ತಂಡ ಸದಾ ಚಿರಋಣಿ. ಇದೇ ಜನವರಿ 27 ಹಾಗು 28ರಂದು ಈ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾಟ ನಡೆಯಲಿದೆ. ವಿಜಯನಗರದ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಾಟ ಆನಂದ್ ಸ್ಪೋರ್ಟ್ಸ್ ಇಂಡಿಯಾ ಚಾನೆಲ್ ನಲ್ಲಿ ನೇರಪ್ರಸಾರ ಕೂಡ ಕಾಣಲಿದೆ.
ಒಟ್ಟು ಹನ್ನೆರಡು ತಂಡಗಳು, ಕನ್ನಡದ ಹಲವು ಸ್ಟಾರ್ ಕಲಾವಿದರ ಅಭಿಮಾನಿಗಳು ಜೊತೆಯಾಗಿ ಆಡುವಂತಹ ಎರಡು ದಿನಗಳ ಕ್ರಿಕೆಟ್ ಕೂಟಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಸಿನಿಮಾಗಳಿಗೆ, ಸಿನಿಮಾ ಕಲಾವಿದರಿಗೆ ನೀಡುವಂತಹ ಅದೇ ಪ್ರೋತ್ಸಾಹ ಸಹಕಾರವನ್ನ, ಅವರ ಅಭಿಮಾನಿಗಳಿಗೂ ನೀಡುತ್ತಾ, ಪಂದ್ಯಾಟದ ಯಶಸ್ಸಿಗೆ ಸಹಕರಿಸಬೇಕೆಂದು ನಮ್ ಟಾಕೀಸ್ ಸಂಸ್ಥೆಯ ಭರತ್ ಕೇಳಿಕೊಂಡರು.