Cini NewsSandalwood

1೦೦ ವರ್ಷದ ಹಳೆಯ ಮನೆಯಲ್ಲಿ “ಫಾದರ್” ಓಡಾಟ

ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ , ನಿರ್ಮಾಪಕ ಆರ್. ಚಂದ್ರು ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ “ಫಾದರ್” ಚಿತ್ರದ ಚಿತ್ರೀಕರಣ ಅರಮನೆ ನಗರದ ವಿ.ವಿ.ಮೋಹಲ್ ನಲ್ಲಿ ಈ ಹಿಂದೆ ಇದ್ದಂತ ಅಂಬಾ ಮನೆ ಕೆಫೆ ಸ್ಥಳವಾಗಿದ್ದಂತಹ ಜಾಗದಲ್ಲಿ ಸುಮಾರು ನೂರು ವರ್ಷದ ಹಳೆಯ ಮನೆಯಲ್ಲಿ ನಿರಂತರ 11 ದಿನಗಳ ಸುಧೀರ್ಘ ಚಿತ್ರೀಕರಣ ನಡೆಯುತ್ತಿದ್ದು , ಆ ಸ್ಥಳಕ್ಕೆ ಇಡೀ ಮಾಧ್ಯಮದವರನ್ನು ಬೆಂಗಳೂರಿನಿಂದ ಮೈಸೂರಿಗೆ ಬರಮಾಡಿಕೊಳ್ಳುವ ಮೂಲಕ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನವನ್ನು ಮಾಡಿಸಿ ಚಿತ್ರೀಕರಣದ ಸ್ಥಳಕ್ಕೆ ಬರಮಾಡಿಕೊಂಡಿತು.

ಇನ್ನು ಚಿತ್ರೀಕರಣದ ಸ್ಥಳದಲ್ಲಿ ನಿರ್ಮಾಪಕ ಆರ್. ಚಂದ್ರು , ನಟ ಡಾರ್ಲಿಂಗ್ ಕೃಷ್ಣ , ಹಿರಿಯ ನಟ ಪ್ರಕಾಶ್ ರೈ , ನಟಿ ಅಮೃತ ಅಯ್ಯಂಗಾರ್ , ನಿರ್ದೇಶಕ ರಾಜ್ ಮೋಹನ್, ಕಾರ್ಯಕಾರಿ ನಿರ್ಮಾಪಕ ದಯಾಳ್ ಪದ್ಮನಾಭನ್ , ಛಾಯಾಗ್ರಹಕ ಸುಜ್ಞಾನ ಸೇರಿದಂತೆ ತಂತ್ರಜ್ಞಾನರು, ಕಲಾವಿದರು ಹಾಜರಿದ್ದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಹಾಜರಿದ್ದು , ಮಾಧ್ಯಮದವರ ಮುಂದೆ ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲು ಮುಂದಾದರು.ಈ ಚಿತ್ರದ ನಿರ್ಮಾಪಕ ಆರ್. ಚಂದ್ರು ಮಾತನಾಡುತ್ತಾ ಮಾಧ್ಯಮದವರು ನನ್ನನ್ನು ಬೆಳೆಸಿದವರು , ಇವತ್ತು ಚಿತ್ರೀಕರಣದ ಸ್ಥಳಕ್ಕೆ ಬಂದಿರುವುದು ಅತಿಥಿಗಳು ಮನೆಗೆ ಬಂದಂತಾಗಿದೆ ಎನ್ನುತ್ತಾ ನಾನು ಗಾಂಧಿನಗರಕ್ಕೆ ಕೇವಲ 100 ರೂಪಾಯಿ ತೆಗೆದುಕೊಂಡು ಬಂದು ಚಿತ್ರರಂಗದಲ್ಲಿ ಬಹಳಷ್ಟು ಕಲಿತುಕೊಂಡು ಸಿನಿಮಾ ನೇ ಜೀವನ ಮಾಡಿಕೊಂಡು ಬೆಳೆದವನು.

ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿ ನೋವು ನಲಿವು ಎರಡನ್ನು ಅನುಭವಿಸಿ ಉತ್ತಮ ಚಿತ್ರಗಳನ್ನು ನೀಡುವುದೇ ನನ್ನ ಗುರಿ ಎಂದು ಸಾಗಿ , ಸಾಲು ಸಾಲು ಚಿತ್ರ ಮಾಡ್ತಿದ್ದು , ಈಗ ನನ್ನ ಆರ್‌.ಸಿ ಸ್ಟುಡಿಯೋಸ್ ಮೂಲಕ ಐದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಈಗ ಮೊದಲ ಚಿತ್ರವಾಗಿ ಫಾದರ್ ಆರಂಭಗೊಂಡಿದೆ.

ಈ ಚಿತ್ರಕ್ಕೆ ಗ್ರಾಂಡ್ ಫಾದರ್ ಪ್ರಕಾಶ್ ರಾಜ್ ಎನ್ನಬಹುದು. ಕೃಷ್ಣ ಅವರ ಜೊತೆಗೆ ಈ ಮೊದಲೇ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಈಗ ಸಾಧ್ಯವಾಗುತ್ತಿದೆ. ಇದು ‘ತಾಜಮಹಲ್’ ತರಹ ಎಮೋಷನ್ ಇರುವಂತ ಚಿತ್ರ. ಇದರಲ್ಲಿ ತಂದೆ-ಮಗನ ಬಾಂಧವ್ಯ ತೋರಿಸಲಾಗುತ್ತಿದ್ದು, ‘ಫಾದರ್’ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ತಂದೆಯ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ, ಈ ಪಾತ್ರವನ್ನು ಪ್ರಕಾಶ್‍ ರೈ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅವರು ಈ ಚಿತ್ರದಲ್ಲಿ ಅಭಿನಯಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ‌.

ಚಿತ್ರವನ್ನು ಒಂದೇ ಹಂತದಲ್ಲಿ ಮೈಸೂರು, ವಾರಣಾಸಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಲಾಗಿದೆ. ಇದು ನಿರ್ದೇಶಕರ ಕಥೆ ಹಾಗಾಗಿ ಅವರೇ ಇದರ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಇನ್ನು ನಮ್ಮ ತಂಡಕ್ಕೆ ನಿರ್ದೇಶಕ , ನಿರ್ಮಾಪಕ ದಯಾಳ್ ಪದ್ಮನಾಭನ್ ಕಾರ್ಯಕಾರಿ ನಿರ್ಮಾಪಕರಾಗಿ ಸಾತ್ ನೀಡಿದ್ದು, ಒಂದು ದೊಡ್ಡ ತಂಡವೇ ಈ ಒಂದು ಬಳಗದಲ್ಲಿ ಕೆಲಸ ಮಾಡುತಿದೆ ಎಂದರು.

ನಟ ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ ಇದು ನನಗೆ ಬಹಳ ಇಂಪ್ರಸಾದಂತ ಕಥೆ. ನನಗಿಂತ ಮೊದಲು ಇಷ್ಟವಾಗಿದ್ದು ನನ್ನ ಪತ್ನಿ ಮಿಲನಾ ಗೆ. ಈ ಚಿತ್ರದ ಕ್ಲೈಮಾಕ್ಸ್ ಬಹಳ ವಿಭಿನ್ನವಾಗಿದ್ದು , ಅದನ್ನು ಜೀರ್ಣಿಸಿಕೊಳ್ಳುವುದೇ ಸ್ವಲ್ಪ ಕಷ್ಟ ಅನಿಸಿತ್ತು, ಆದರೆ ಕಥೆ ಚೆನ್ನಾಗಿದೆ. ನೀವು ಮಾಡಲೇಬೇಕೆಂದು ಮಿಲನ ಹೇಳಿದ ಮೇಲೆ ಒಪ್ಪಿಕೊಂಡೆ.

ನನಗೆ ಪ್ರಕಾಶ್ ರೈ ಅವರ ಜೊತೆ ನಟಿಸುವ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರು ಅಭಿನಯಿಸುವುದನ್ನು ನೋಡುತ್ತಾ, ಪ್ರತಿಕ್ರಿಯೆ ಕೊಡುವುದನ್ನೇ ಮರೆತುಬಿಟ್ಟಿರುತ್ತೇನೆ. ಸಾಧ್ಯವಾದಷ್ಟು ಶ್ರಮವಹಿಸಿ ಮಾಡುತ್ತೇನೆ. ಇದು ತುಂಬಾ ಎಮೋಷನಲ್ ಚಿತ್ರವಾಗಲಿದೆ. ಎಲ್ಲರ ಮನಸಲ್ಲಿ ಉಳಿಯುವಂತ ಚಿತ್ರ ‘ಫಾದರ್’ ಆಗುತ್ತದೆ ಎಂದರು.

ನಟಿ ಅಮೃತ ಅಯ್ಯಂಗಾರ್ ಮಾತನಾಡುತ್ತಾ ನಮ್ಮೂರಿರಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಬಹಳ ಖುಷಿಯಾಗಿದೆ. ಚಂದ್ರು ಸರ್ ಸಂಸ್ಥೆ ಅಂದ್ರೆ ಯೋಚನೆ ಮಾಡಂಗಿಲ್ಲ ಬಹಳ ಆರಾಮಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರಕಾಶ್ ಸರ್ ಸಿನಿಮಾಗಳನ್ನ ನೋಡಿಕೊಂಡು ಬೆಳೆದವರು ನಾವು ಇವತ್ತು ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದು ತುಂಬಾ ಖುಷಿಯಾಗುತ್ತಿದೆ. ಲವ್ ಮಾಕ್ಟೇಲ್ ನಂತರ ಕೃಷ್ಣ ಜೊತೆ ಅಭಿನಯಿಸುತ್ತಿರುವ ಎರಡನೇ ಚಿತ್ರ ನನ್ನದು. ಇದು ಎಲ್ಲರ ಮನಸ್ಸಿಗೆ ಮುಟ್ಟುವಂತ ಚಿತ್ರವಾಗಲಿದೆ ಎನ್ನುತ್ತಾ ತನ್ನ ಬಳಿ ಇದ್ದಂತ ಪುಟಾಣಿ ಅಯಾನ್ ಶೆಟ್ಟಿ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾನೆ. ಚಿತ್ರದ ಬಗ್ಗೆ ಹೆಚ್ಚು ಏನು ರಿವಿಲ್ ಮಾಡುವಂತಿಲ್ಲ ಎಂದು ಹೇಳಿದರು.

ಫಾದರ್ ಚಿತ್ರದ ಕೇಂದ್ರ ಬಿಂದು ಹಿರಿಯ ನಟ ಪ್ರಕಾಶ್ ರೈ ಮಾತನಾಡುತ್ತಾ ನಾನು ಹಿಂದೆಯೇ ಚಂದ್ರು ಜೊತೆಗೆ ‘ಕಬ್ಜ’ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ “ಫಾದರ್” ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ.

ಕಥೆ ಕೇಳಿದಾಗ ನನಗೆ ಇದು ಇಂದಿಗೆ ಮುಖ್ಯವಾಗಿ ಬೇಕಾಗಿರುವ ಸಿನಿಮಾ ಎಂದೆನಿಸಿತು. ಇದೊಂದು ಕಾಡುವಂತಹ ಚಿತ್ರ. ಆರ್. ಚಂದ್ರು ಆರ್. ಸಿ. ಸ್ಟುಡಿಯೋಸ್ ಮೂಲಕ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದು ಖುಷಿಯ ವಿಚಾರ. ನಾನು ಕೂಡ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುತ್ತಿರು ವುದು ಹಾಗೂ ನಾನು ಬಹಳ ಇಷ್ಟಪಡುವ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿರುವುದು ಖುಷಿಯಾಗಿದೆ.

ಒಂದೇ ಶೆಡ್ಯೂಲ್ ನಲ್ಲಿ ಮುಗಿಸಲು ತಂಡ ಸಿದ್ಧವಿದೆ ಜೊತೆಗೆ ನಾನು ಸಹಕಾರ ನೀಡುತ್ತೇನೆ ಎನ್ನುತ್ತಾ ಸದ್ಯದ ಚಿತ್ರೋದ್ಯಮದ ಪರಿಸ್ಥಿತಿ, ಚಿತ್ರಗಳ ಗುಣಮಟ್ಟ , ಮುಂದಿನ ಬೆಳವಣಿಗೆಯ ಹಾದಿಯ ಕುರಿತು ಒಂದಷ್ಟು ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ಸುಧೀರ್ಘವಾಗಿ ನೀಡಿದ್ದು ವಿಶೇಷವಾಗಿತ್ತು.

ಅದೇ ರೀತಿ ಕಾರ್ಯಕಾರಿ ನಿರ್ಮಾಪಕರಾಗಿರುವ ದಯಾಳ್ ಪದ್ಮನಾಭನ್ ಮಾತನಾಡುತ್ತಾ ನಮ್ಮ ಚಂದ್ರು ನನ್ನ ‘ಸಖ ಸಖಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ನಾನು ಕಾರ್ಯಕಾರಿ ನಿರ್ಮಾಪಕ ಎನ್ನುವುದಕ್ಕಿಂತ ಅವರ ಜೊತೆಗಿದ್ದೀನಿ, ಒಂದಷ್ಟು ಚರ್ಚೆ , ಮಾತುಕತೆ ಮೂಲಕ ಉತ್ತಮ ಚಿತ್ರಗಳನ್ನು ನೀಡುವ ಕೆಲಸಕ್ಕೆ ಒಂದಾಗಿದ್ದೇವೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.

ಹಾಗೆಯೇ ‘ಫಾದರ್’ ಚಿತ್ರದ ನಿರ್ದೇಶಕ ಚಿತ್ ರಾಜ್‍ ಮೋಹನ್‍ ಮಾತನಾಡುತ್ತಾ ಇದರ ಕಥೆ ನಾನೇ ಬರೆದಿದ್ದು , ಹೆಚ್ಚು ಮಾತನಾಡುವುದಿಲ್ಲ ಏನಿದ್ದರೂ ತೆರೆಯ ಮೇಲೆ ನನ್ನ ಕೆಲಸವನ್ನು ತೋರಿಸುತ್ತೇನೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡು.

ಛಾಯಾಗ್ರಹಕ ಸುಜ್ಞಾನ್ ಮಾತನಾಡುತ್ತಾ ಇಡೀ ತಂಡ ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ನಿರ್ಮಾಪಕರು ಹಾಗೂ ನಿರ್ದೇಶಕರು ನಮ್ಮನ್ನು ಬಹಳ ಚೆನ್ನಾಗಿ ಬೆಳೆಸಿಕೊಳ್ಳುತ್ತಿದ್ದಾರೆ ಎಂದರು. ಇನ್ನು ಈ ಚಿತ್ರಕ್ಕೆ ‘ಹನುಮಾನ್’ ಖ್ಯಾತಿಯ ಗೌರಾ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನ , ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಆರ್. ಸಿ. ಸ್ಟುಡಿಯೋಸ್ ಮೂಲಕ ಆರ್. ಚಂದ್ರು ನಿರ್ಮಾಣದ ಈ ಚಿತ್ರದ ಹೆಚ್ಚಿನ ಮಾಹಿತಿ ಹಂತಹಂತವಾಗಿ ನೀಡಲಿದ್ದಾರಂತೆ.

error: Content is protected !!