Cini NewsSandalwoodTV SerialUncategorized

5ನೇ ಅಂಚೆ ನೌಕರರ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರರಂಗದ ಭೀಷ್ಮ ಜಿ. ವಿ .ಅಯ್ಯರ್ ರವರ ಪಿಚ್ಚರ್ ಪೋಸ್ಟ್ ಕಾರ್ಡ ಬಿಡುಗಡೆ.

ಕನ್ನಡ ಚಿತ್ರರಂಗದ ಭೀಷ್ಮ,  ಸಾಹಿತಿಗಳು , ನಟರು , ನಿರ್ಮಾಪಕ , ನಿರ್ದೇಶಕರಾಗಿದ್ದ ಜಿ. ವಿ. ಅಯ್ಯರ್ ರವರ ಪಿಚ್ಚರ್ ಪೋಸ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿಗಷ್ಟೇ ನಂಜನಗೂಡು ಅಂಚೆ ವಿಭಾಗ ದಿಂದ ರಾಜ್ಯ ಮಟ್ಟದ 5ನೇ ಅಂಚೆ ನೌಕರರ ಸಾಹಿತ್ಯ ಸಮ್ಮೇಳನವನ್ನು ಅಂಬೇಡ್ಕರ್ ಭವನ , ನಂಜನಗೂಡಿನಲ್ಲಿ ಆಯೋಜಿಸಲಾಗಿತ್ತು. ಅಂಚೆ ನೌಕರರ ಸಾಹಿತ್ಯ ಬಳಗ, ಬೆಂಗಳೂರು ಮತ್ತು ಸುಮಂಗಲಿ ಸೇವಾಶ್ರಮದ ಸಹಯೋಗದಲ್ಲಿ ಸಂಚಾಲಕರಾದ ಆರ್ , ಮಂಜುನಾಥ್ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಹದೇವಪ್ಪ ಹಾಗೂ ನಂಜನಗೂಡು ಅಂಚೆ ವಿಭಾಗದವರು ಆಯೋಜಿಸಿದ್ದು, ಈ ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷರಾಗಿ ರೇಣುಕಾಭೆ ಎಸ್. ಸಿ, ಕಾರ್ಯಕ್ರಮದ ಅಧ್ಯಕ್ಷರಾಗಿ ಎಚ್. ಸುಬ್ರಮಣ್ಯ ಹಾಗೂ ಮುಖ್ಯ ಅತಿಥಿಗಳಾಗಿ ಸಂದೇಶ್ ಮಹದೇವಪ್ಪ , ಅಂಚೆ ಸೇವೆಗಳ ನಿರ್ದೇಶಕರು, ಎನ್ . ಗೋವಿಂದರಾಜು, ಅಧೀಕ್ಷಕರು, ನಂಜನಗೂಡು ಅಂಚೆ ವಿಭಾಗ, ಸಣ್ಣ ನಾಯಕ್, ಅಂಚೆ ಸೇವೆಗಳ ನಿರ್ದೇಶಕರು (ನಿವೃತ್ತ ), ಕೃಷ್ಣ ದಾಸ್, ಸಹಾಯಕ ಅಂಚೆ ಅಧೀಕ್ಷಕರು, ನಂಜನಗೂಡು ಅಂಚೆ ವಿಭಾಗ, ಎಸ್. ಎ ಚಿನ್ನೇಗೌಡರು ನಿರ್ಮಾಪಕರು , (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷರು), ಹಿರಿಯ ನಟ ಶಂಕರ ಅಶ್ವತ್, ರಾಘವೇಂದ್ರ ಅಯ್ಯರ್ , ನಟರು ಮತ್ತು ನಿರ್ದೇಶಕರು , ಇ.ಮಹದೇವ ಕುಮಾರ್ ಹಿರಿಯ ವಕೀಲರು, ಡಾ. ಎಸ್. ಜಿ.ಸುಶೀಲಮ್ಮ, ಸುಮಂಗಲಿ ಸೇವಾಶ್ರಮ, ಬೆಂಗಳೂರು, ಪಿ. ಮಹೇಶ್ ಆತ್ತಿಖಾನೆ, ನಿಕಟಪೂರ್ವ ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮೊದಲಾದವರು ಭಾಗವಹಿಸಿ ಅಂಚೆ ನೌಕರರು ಬರೆದಿರುವ ಕೃತಿ ಬಿಡುಗಡೆ, ಕವಿಗೋಷ್ಠಿ, ಅಂಚೆರತ್ನ ಪ್ರಶಸ್ತಿ ವಿತರಣೆ ಹಾಗೂ ಜಿ. ವಿ ಅಯ್ಯರ್ ರವರ ಪಿಚ್ಚರ್ ಪೋಸ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದರು.

ವಿಶೇಷ ಏನೆಂದರೆ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ , ನಟ , ನಿರ್ದೇಶಕರಾದ ಜಿ. ವಿ. ಅಯ್ಯರ್ ರವರು ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡಿನವರಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಸುಮಾರು 850 ಚಲನಚಿತ್ರ ಗೀತೆಗಳಿಗೆ ಸಾಹಿತ್ಯವನ್ನು ರಚಿಸಿದ್ದು , ಭೂದಾನ , ಬೇಡರ ಕಣ್ಣಪ್ಪ , ರಣಧೀರ ಕಂಠೀರವ , ಗಾಳಿಗೋಪುರ , ಸಾಕು ಮಗಳು , ರಾಜಶೇಖರ , ಗಂಗೆ ಗೌರಿ , ತಾಯಿಯ ಕರಳು , ಪೋಸ್ಟ್ ಮಾಸ್ಟರ್ , ಹಂಸಗೀತೆ , ರಾಮಾನುಜಾಚಾರ್ಯ , ಸ್ವಾಮಿ ವಿವೇಕಾನಂದ , ಶ್ರೀ ಕೃಷ್ಣ ಲೀಲಾ, ಸೇರಿದಂತೆ ಇವರೇ ನಿರ್ಮಿಸಿ ನಿರ್ದೇಶಿಸಿದ *ಶ್ರೀ ಆದಿ ಶಂಕರಾಚಾರ್ಯ ವಿಶ್ವದ ಪ್ರಥಮ ಸಂಸ್ಕೃತ ಚಲನಚಿತ್ರ* ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವಯದಲ್ಲದೇ ಹಲವಾರು ಪ್ರಶಸ್ತಿಗಳು ದೊರಕಿದೆ. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ರಾಜ್ಯ ಸರ್ಕಾರದ 1987- 88ನೇ ಸಾಲಿನ *ಪುಟ್ಟಣ್ಣ ಕಣಗಾಲ್* ಪ್ರಶಸ್ತಿ ಮತ್ತು ರಾಷ್ಟ್ರಪತಿಗಳ *ಸ್ವರ್ಣ ಪದಕ* ಪಡೆದುಕೊಂಡಿದ್ದಾರೆ. ಎಲ್ಲಾ ಸಾಧನೆಗಳ ಪರಿಗಣಿಸಿ ಹಿರಿಯ ವ್ಯಕ್ತಿ ಜಿ.ವಿ. ಅಯ್ಯರ್ ಅವರ ಜನ್ಮಭೂಮಿ ನಂಜನಗೂಡಿನಲ್ಲಿ ಚಿತ್ರಸಹಿತ ಅಂಚೆ ಕಾರ್ಡ್ ಬಿಡುಗಡೆಗೊಳಿಸಲಾಗಿದೆ. ರಾಷ್ಟ್ರದ ಎಲ್ಲಾ ಅಂಚೆ ಚೀಟಿ ಸಂಗ್ರಹ ಕಛೇರಿಗಳಲ್ಲಿ ಮಾತ್ರ ಈ ವಿಶೇಷ picture post card ಸಿಗಲಿದೆ. ಸಾಹಿತಿಗಳು, ನಟರು ಮತ್ತು ನಿರ್ಮಾಪಕ , ನಿರ್ದೇಶಕರಾಗಿದ್ದ, ಜಿ. ವಿ. ಅಯ್ಯರ್ ರವರ ಗೌರವಾರ್ಥವಾಗಿ ಅಂಚೆ ಇಲಾಖೆ ವತಿಯಿಂದ *ಪಿಚ್ಚರ್ ಪೋಸ್ಟ್ ಕಾರ್ಡ* ಬಿಡುಗಡೆ ಮಾಡಿರುವುದು ಚಿತ್ರೋದ್ಯಮಕ್ಕೆ ಸಂತಸವನ್ನು ತಂದಿದೆ.

error: Content is protected !!