ವಿಶೇಷ ಚೇತನರ ಶಕ್ತಿಗೆ ದಾರಿ… ಗೌರಿ (ಚಿತ್ರವಿಮರ್ಶೆ -ರೇಟಿಂಗ್ : 3/5)
ಚಿತ್ರ : ಗೌರಿ
ನಿರ್ದೇಶಕ , ನಿರ್ಮಾಪಕ : ಇಂದ್ರಜಿತ್ ಲಂಕೇಶ್
ಸಂಗೀತ : ಜೆಸ್ಸಿ ಗಿಫ್ಟ್ , ಚಂದನ್ ಶೆಟ್ಟಿ , ಶಿವು ಬೆರಗಿ, ಅನಿರುದ್ಧ ಶಾಸ್ತ್ರಿ
ಛಾಯಾಗ್ರಹಣ : ಕೃಷ್ಣ ಕುಮಾರ್
ತಾರಾಗಣ : ಸಮರ್ಜಿತ್ ಲಂಕೇಶ್, ಸಾನ್ಯಾ ಐಯ್ಯರ್, ಸಂಪತ್ ಮೈತ್ರೇಯಾ , ಮಾನಸಿ ಸುಧೀರ್, ಸಿಹಿ ಕಹಿ ಚಂದ್ರು , ಚಂದು ಗೌಡ ಹಾಗೂ ಮುಂತಾದವರು…
ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ನ್ಯೂನ್ಯತೆ ಇದ್ದೇ ಇರುತ್ತದೆ. ಅದನ್ನೇ ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡು ಮುಂದೆ ಸಾಗುವುದು ಬಹಳ ಮುಖ್ಯ ಎನ್ನುವ ಅಂಶದೊಂದಿಗೆ ಬಡತನದಲ್ಲೇ ಸುಖ ಕಾಣುವ ಹಳ್ಳಿ ಮುಗದರು , ಜನಪದದ ಗಾನ, ವಿಶೇಷ ಚೇತನರ ಬದುಕು , ಸ್ನೇಹ , ಪ್ರೀತಿ , ಆತ್ಮಸ್ಥೈರ್ಯ , ನೋವು , ನಲಿವು , ಸಂಗೀತದ ಶಕ್ತಿ ಹೀಗೆ ಒಂದಷ್ಟು ವಿಚಾರವನ್ನು ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಪ್ರೇಕ್ಷಕರ ಮನ ಮುಟ್ಟಲು ಬಂದಿರುವಂತಹ ಚಿತ್ರ “ಗೌರಿ”.
ಹಳ್ಳಿಯಲ್ಲಿ ತನ್ನ ಜನಪದ ಹಾಡಿನ ಮೂಲಕವೇ ಬದುಕು ಕಟ್ಟಿಕೊಂಡಿರುವ ವ್ಯಕ್ತಿ ಜೋಗಿ ಸಿದ್ದಪ್ಪ (ಸಂಪತ್ ಮೈತ್ರಿಯಾ) ಶ್ರವಣದೋಷವಿರುವ ಮಡದಿ (ಮಾನಸಿ ಸುಧೀರ್). ಇವರ ಮುದ್ದಿನ ಮಗ ಗೌರಿ (ಸಮರ್ಜಿತ್ ಲಂಕೇಶ್) ಕೂಡ ಶ್ರವಣ ದೋಷ. ಆದರೂ ಎದುರುನಲ್ಲಿ ಮಾತನಾಡುವವರ ಬಾಯಸ್ನ್ನೆ ನೋಡಿ ಉತ್ತರ ನೀಡುವ ಸಾಮರ್ಥ ಗೌರಿಯದು.
ಇದರ ನಡುವೆ ಊರಿನಲ್ಲಿ ತನ್ನ ತಂದೆಯ ಜೊತೆ ಜೋಗಪ್ಪನಾಗಲು ಇಷ್ಟಪಡದೆ ಗೌರಿ ಹಾಡುವುದನ್ನು ಕಲಿತಿದ್ದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ನಿಟಿನಿಂದ ಊರು ಬಿಡುತ್ತಾನೆ. ಇನ್ನು ತನ್ನದೇ ಒಂದು ಗುರಿಯೊಂದಿಗೆ ಕರ್ನಾಟಕದ ನಾನಾ ಭಾಗದ ಪ್ರತಿಭಾವಂತ ವಿಶೇಷ ಚೇತನರನ್ನ ಒಗ್ಗೂಡಿಸಿ ಒಂದು ಮ್ಯೂಸಿಕ್ ಬ್ಯಾಂಡ್ ನಡೆಸುವ ಉದ್ದೇಶ ಸಮಂತಾ (ಸಾನ್ಯ ಅಯ್ಯರ್) ಳದು.
ಆಕ್ಸಿಡೆಂಟ್ ಒಂದರಲ್ಲಿ ಭೇಟಿಯಾಗುವ ಗೌರಿ ಹಾಗೂ ಸಮಂತಾ. ಮುಂದೆ ಇವರಿಬ್ಬರ ಪರಿಚಯ ಸ್ನೇಹ ಹಾಗೂ ಮ್ಯೂಸಿಕ್ ಬ್ಯಾಂಡ್ ಗೆ ಒಬ್ಬ ಸೂಕ್ತ ವ್ಯಕ್ತಿ ಸಿಕಂತಾಗುತ್ತದೆ. ಇನ್ನು ಇದರ ಹಿಂದೆ ಗೌರಿಯ ಬದುಕಿನಲ್ಲಿ ನಡೆಯುವ ಒಂದಷ್ಟು ದುರ್ಘಟನೆಗಳು ಅವನ ಮನಸ್ಸನ್ನು ಕುಗ್ಗಿಸುತ್ತದೆ. ಅದೇ ರೀತಿ ಸಮಂತಾ ಹಿನ್ನೆಲೆಯಲ್ಲೂ ಒಂದು ಲವ್ ಫ್ಲಾಶ್ ಬ್ಯಾಕ್ ಕಥೆಇದೆ. ಇನ್ನು ಇಂಡಿಯನ್ ರಿಯಲ್ ಸ್ಟಾರ್ ರಿಯಾಲಿಟಿ ಶೋ ಕೂಡ ಈ ಕಥೆಗೆ ಕೇಂದ್ರ ಬಿಂದುವಾಗಿದ್ದು, ಒಂದಷ್ಟು ಏರುಪೇರುಗಳ ನಡುವೆ ರೋಚಕ ಕೊನೆ ಹಂತಕ್ಕೆ ಬಂದು ನಿಲ್ಲುತ್ತದೆ.
ಗೌರಿ ಕನಸು ನನಸಾಗುತ್ತಾ…
ಸಮಂತಾಳ ಫ್ಲಾಶ್ ಬ್ಯಾಕ್ ಏನು…
ಮ್ಯೂಸಿಕ್ ಬ್ಯಾಂಡ್ ಏನಾಗುತ್ತೆ…
ಕ್ಲೈಮಾಕ್ಸ್ ಉತ್ತರ ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ನೀವೆಲ್ಲರೂ ಗೌರಿ ಚಿತ್ರವನ್ನು ನೋಡಬೇಕು.
ಇನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಒಬ್ಬ ಸ್ಟೈಲಿಶ್ ಡೈರೆಕ್ಟರ್ ಆಗಿದ್ದರು, ವಿಶೇಷ ಚೇತನರ ಬದುಕು , ಶಕ್ತಿ , ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲಿರುವ ಪರಿ ಮೆಚ್ಚುವಂಥದ್ದು, ಮಗನ ನಾಯಕನಾಗಿ ಪರಿಚಯಿಸುವುದರ ಜೊತೆಗೆ ಸಂಗೀತದ ಮೋಡಿಯನ್ನು ಮತ್ತೆ ತೆರೆದಿಟ್ಟಿದ್ದಾರೆ.
ಚಿತ್ರಕಥೆ ಸ್ವಲ್ಪ ಕಸಿವಿಸಿ ಅನ್ನುವಂತಿದ್ದು , ಓಟದ ಹಿಡಿತದ ಕಡೆ ನಿರ್ದೇಶಕರು ಗಮನಹರಿಸಬೇಕಿತ್ತು ಅನಿಸುತ್ತದೆ. ಶ್ರವಣ ದೋಷ ಇದ್ದರು ಕೆಲವು ಸಂದರ್ಭಗಳಲ್ಲಿ ಸರಾಗವಾಗಿ ಮಾತನಾಡುವ ನಾಯಕನ ನಡೆ ಅರ್ಥವಾಗುವುದಿಲ್ಲ. ಒಂದು ಕಲರ್ಫುಲ್ ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿ ಗಮನ ಸೆಳೆಯುತ್ತದೆ. ಇನ್ನು ಹೈಲೈಟ್ ಎಂದರೆ ಛಾಯಾಗ್ರಹಕರ ಕೈಚಳಕ ಅದ್ಭುತವಾಗಿದೆ.
ಅದೇ ರೀತಿ ವಿಭಿನ್ನ ಬಗೆಯ ಹಾಡುಗಳ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಪೂರಕವಾಗಿ ಮೂಡಿ ಬಂದಿದೆ. ನಾಯಕನಾಗಿ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಲಂಕೇಶ್ ಒಬ್ಬ ಹ್ಯಾಂಡ್ಸಮ್ ಹೀರೋ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಂತಾಗಿದೆ. ಸಾಂಗ್ , ಆಕ್ಷನ್ ನಲ್ಲಿ ಮಿಂಚಿದ್ದಾರೆ.
ಮಾತಿನ ವರ್ಚಸ್ಸು , ಹವಭಾವ ಉತ್ತಮವಾಗಿದ್ದು , ಮುಂದೆ ಉತ್ತಮ ಭವಿಷ್ಯವಿರುವ ನಟನಾಗುವ ಸಾಮರ್ಥ್ಯವಿದೆ. ಇನ್ನು ನಾಯಕಿಯಾಗಿ ಸಾನಿಯಾ ಅಯ್ಯರ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ನಾಯಕನ ತಂದೆಯ ಪಾತ್ರಧಾರಿ ಸಂಪತ್ ಮೈತ್ರಿಯ ಹಾಗೂ ತಾಯಿಯ ಪಾತ್ರಧಾರಿ ಮಾನಸಿ ಸುಧೀರ್ ತಮ್ಮ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
ಯುವ ನಟ ಚಂದು ಗೌಡ ಕೂಡ ಚಿತ್ರದ ಓಟಕ್ಕೆ ಒಂದು ಟ್ವಿಸ್ಟ್ ಕೊಡುವ ಪಾತ್ರ ನಿರ್ವಹಿಸಿದ್ದಾರೆ. ಅದೇ ರೀತಿ ನಾಯಕನ ಗೆಳೆಯರಾಗಿ ಕಾಮಿಡಿ ಕಿಲಾಡಿ ಗಿಲ್ಲಿ ನಟ , ನವಾಜ್ , ಅಭಿನಯಿಸಿದ್ದು, ಮಂಜು ಪಾವಗಡ ಹಿರಿಯ ನಟ ಮುಖ್ಯಮಂತ್ರಿ ನಾಯಕಿಯ ತಂದೆ ಪಾತ್ರದಲ್ಲಿ ಚಂದ್ರು ಸಿಹಿ ಚಂದ್ರು ಕವನದ ಸುರಿಮಳೆಯನ್ನೇ ಹರಿಸಿದ್ದಾರೆ. ಊರ ಪಟೇಲ ನ ಪಾತ್ರದಲ್ಲಿ ರಾಜು ಪಿಳ್ಳೆ ಖಡಕ್ ಲುಕ್ಕಿನಲ್ಲಿ ಮಿಂಚಿದ್ದಾರೆ.
ವಿಶೇಷ ಹಾಡೊಂದರಲ್ಲಿ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ವಿಶೇಷವಾಗಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ರಿಕ್ಕಿ ಕೇಜ್, ವಸುಂದರಾ ದಾಸ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು , ಎಂದಿನಂತೆ ಅಕುಲ್ ಬಾಲಾಜಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಯಾವುದೇ ಮುಜುಗರವಿಲ್ಲದೆ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.