ಕುಡುಬಿ ಜನಾಂಗದ “ಗುಂಮ್ಟಿ”ಚಿತ್ರದ ಟ್ರೇಲರ್ ಬಿಡುಗಡೆ.
ನಮ್ಮ ನಾಡು ನಡೆ-ನುಡಿ ಸಂಸ್ಕೃತಿ ಆಚಾರ , ವಿಚಾರಗಳ ಬಗ್ಗೆ ಸಾಕಷ್ಟು ಅಂಶಗಳು ಒಳಗೊಂಡಿದ್ದು , ಅದರಲ್ಲಿ ಬೆರಳೆಣಿಕೆ ಮಾತ್ರ ಹೊರ ಜಗತ್ತಿಗೆ ತಿಳಿದಿದೆ. ಅದರಲ್ಲೂ ಕೆಲವು ಜನಾಂಗದ ಆಚಾರ , ಪದ್ಧತಿ ಸದ್ದಿಲ್ಲದಂತೆ ನಶಿಸಿ ಹೋಗುತ್ತಿದೆ. ಅಂತದ್ದೇ ಒಂದು ಕುಡುಬಿ ಜನಾಂಗದ ಕಥಾನಕ ಇಟ್ಟುಕೊಂಡು ಇದು ಸಂಸ್ಕೃತಿಯ ಸದ್ದು ಎಂಬ ಅಡಿಬರಹದೊಂದಿಗೆ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿರುವಂತಹ ಚಿತ್ರ “ಗುಂಮ್ಟಿ”. ಇತ್ತೀಚಿಗೆ ಈ ಚಿತ್ರದ ಟೈಲರ್ ಬಿಡುಗಡೆಯನ್ನ ಚಿತ್ರತಂಡದ ಸಮ್ಮುಖದಲ್ಲಿ ಹೊರ ತರಲಾಯಿತು.
ಇನ್ನು ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರ್ದೇಶಕ ಹಾಗೂ ನಾಯಕ ಸಂದೇಶ ಶೆಟ್ಟಿ ಆಜ್ರೆ ಮಾತನಾಡುತ್ತ ಇದು ಒಂದು ಸಂಸ್ಕೃತಿಯ ಕಥಾನಕ , ಕುಡುಬಿ ಜನಾಂಗದವರ ಬದುಕು, ಬಾವಣಿಯ ಕುರಿತಾದಂತಹ ಎಳೆ ಒಳಗೊಂಡಿದೆ. ಇದು ನನ್ನ ನಿರ್ದೇಶನದ ಮೂರನೇ ಚಿತ್ರ ಈ ಚಿತ್ರದಲ್ಲಿ ಕಾಶಿ ಎಂಬ ಪಾತ್ರ ಮಾಡಿದ್ದು , ಈ ಮೊದಲು ಕಮರ್ಷಿಯಲ್ ಸಿನಿಮಾ ಮಾಡಿದ್ದೆ.
ಈಗ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕುಂದಾಪುರ ಕನ್ನಡ ಭಾಷೆಯಲ್ಲಿ ಸಿನಿಮಾ ಬಂದಿದೆ. ರಿಲೀಸ್ ಮೊದಲೇ ಒಟಿಟಿ ಅವರು ಸಿನಿಮಾ ಕೇಳತಾ ಇದ್ದಾರೆ. ಒಂದಿಷ್ಟು ಫಿಲ್ಮ್ ಪೆಸ್ಟಿವೆಲ್ ಗಳಿಗೆ ಆಯ್ಕೆ ಆಗಿದೆ. ಇದೊಂದು ಸಾಂಪ್ರದಾಯಿಕವಾದ ಕಲಾತ್ಮಕ ಸಿನಿಮಾ. ಈಗಾಗಲೇ ೨೨ ಶೋಗಳ ಟಿಕೆಟ್ ಮಾರಟ ಆಗಿವೆ.
ಕುಂದಾಪುರ ಉಡುಪಿ ಬೈಂದೂರು ನಲ್ಲಿ ನಮ್ಮ ಟೀಮ್ ಕಡೆಯಿಂದ ಬುಕ್ ಆಗಿವೆ. ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇದೆ. ಒಂದಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.
ನಾಯಕಿ ವೈಷ್ಣವಿ ನಾಡಿಗ ಮಾತನಾಡುತ್ತಾ ನನ್ನದು ಈ ಚಿತ್ರದಲ್ಲಿ ಮಲ್ಲಿ ಎಂಬ ಪಾತ್ರ. ಹೊಸ ಸಂಸ್ಕೃತಿ ಬಗ್ಗೆ ತಿಳಿದುಕೊಂಡೆ. ಭಾಷೆ ಸೊಗಡು ಎಲ್ಲವೂ ಸೊಗಸಾಗಿದೆ. ಇದು ನನ್ನ ಮೊದಲ ಪ್ರಯತ್ನ ಇದೊಂದು ಸ್ಪೆಷಲ್ ಸಿನಿಮಾ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಸಹಕಾರ ಇರಲಿ ಎಂದು ಕೇಳಿಕೊಂಡರು. ಮತ್ತೊಬ್ಬ ನಟ ಯಶ್ ಆಚಾರ್ಯ ನಟ ಮಾತನಾಡುತ್ತಾ ಈ ಕುಡುಬಿ ಜನಾಂಗದವರು ತುಂಬಾ ಜನ ವಿದ್ಯಾವಂತರು ಇದ್ದು , ಹೊಳಿ ಹಬ್ಬಕ್ಕೆ ಬಂದು ಆಚರಣೆ ಮಾಡುತ್ತಾರೆ.
ಈ ಚಿತ್ರದಲ್ಲಿ ನನಗೂ ಒಂದು ವಿಶೇಷವಾದ ಪಾತ್ರ ಸಿಕ್ಕಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ಇನ್ನು ಪತ್ರಕರ್ತೆ , ನಟಿ ಚಿತ್ರಕಲಾ ಮಾತನಾಡುತ್ತ ನಾನು ಮೂಲತಃ ಪತ್ರಕರ್ತೆ ಆಗಿದ್ದರೂ, ಗುಂಮ್ಟಿ ಬಗ್ಗೆ ಕೇಳಿರಲಿಲ್ಲ.
ಇಂತಹ ಸಂಸ್ಕೃತಿಗಳು ಅಳಿಸಿ ಹೋಗುತ್ತಿವೆ. ಇಂತಹ ಸಿನಿಮಾಗಳು ಹೆಚ್ಚಾಗಿ ಬರಬೇಕು. ಮುಂದಿನ ಜನಾಂಗಕ್ಕೆ ಇಂತಹ ಚಿತ್ರಗಳಿಂದ ಗೊತ್ತಾಗುತ್ತದೆ. ಇಂತಹ ಚಿತ್ರಗಳನ್ನು ಪ್ರೋತ್ಸಾಹ ನೀಡಬೇಕು. ಉಡುಪಿ ಭಾಗದಲ್ಲಿ ಈ ಆಚರಣೆ ಇದೆ. ಈ ಚಿತ್ರವು ಎಲ್ಲರನ್ನ ತಲುಪುವಂತಾಗಬೇಕು ಎಂದು ಕೇಳಿಕೊಂಡರು
ಇನ್ನು ಈ ಚಿತ್ರದ ನಿರ್ಮಾಪಕ ವಿಕಾಸ್. ಎಸ್. ಶೆಟ್ಟಿ ಮಾತನಾಡುತ್ತಾ ನಾನು ಹಾಗೂ ನಿರ್ದೇಶಕರು ಬಹಳ ವರ್ಷಗಳ ಸ್ನೇಹಿತರು ನಮ್ಮ ಗೆಳೆಯ ಗುಂಮ್ಟಿ ಬಗ್ಗೆ ಕೇಳಿದಾಗ ನಂಗೆ ಇಷ್ಟ ಆಯ್ತು. ನಾನೂ ಕೂಡ ಚಿಕ್ಕವನಾಗಿದ್ದಾಗ ಈ ಆಚರಣೆ, ಪದ್ಧತಿಯನ್ನು ನೋಡಿದ್ದೆ. ಇದು ಕಂಟೆಂಟ್ ಒರೆಂಟೆಡ್ ಸಿನಿಮಾ. ತುಂಬಾ ಅದ್ಭುತವಾಗಿ ಸಿನಿಮಾ ಬಂದಿದೆ. ಕುಡುಬಿ ಜನಾಂಗ ಗುಂಮ್ಟಿ ಆಚರಣೆ ಮಾಡುತ್ತಾರೆ. ಇದು ಕರಾವಳಿ ಭಾಗದಲ್ಲಿ ಆಚರಣೆಯಲ್ಲಿ ಇದೆ. ಈಗ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಈ ಚಿತ್ರವನ್ನು ನೋಡಿ ನಮ್ಮನ್ನು ಬೆಂಬಲಿಸಿ , ಮತ್ತಷ್ಟು ಚಿತ್ರವನ್ನು ಮಾಡುವ ಧೈರ್ಯ ಬರುತ್ತದೆ ಎಂದು ಕೇಳಿಕೊಂಡರು.
ಬಹಳಷ್ಟು ರಿಸರ್ಚ್ ಮಾಡಿ ಈ ಚಿತ್ರಕ್ಕೆ ದೂಂಡಿ ಮೋಹನ್ ಸಂಗೀತ ಮಾಡಲಾಗಿದೆ. ಈ ಚಿತ್ರಕ್ಕೆ ಅನೀಶ್ ಡಿಸೋಜ ಛಾಯಾಗ್ರಹಣ, ಶಿವರಾಜ್ ಮೇವು ಸಂಕಲನವಿದೆ. ಸೊಲ್ಲಾಪುರ ಬೆಳಗಾವಿ ಹುಬ್ಬಳ್ಳಿ ಕುಂದಾಪುರ ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಚಿತ್ರವನ್ನು ವಿಜಯ್ ಫಿಲಂಸ್ ಅವರು ವಿತರಣೆ ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರ ಬೆಳ್ಳಿ ಪರದೆ ಮೇಲೆ ಬರಲಿದೆ.